ರಾಜಸ್ಥಾನ : Nupur Sharma : ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ನಾಯಕಿ ನೂಪುರ್ ಶರ್ಮಾ ಶಿರಚ್ಛೇದಕ್ಕೆ ಬಹಿರಂಗ ಆಫರ್ ನೀಡಿದ್ದ ಅಜ್ಮೀರ್ ಷರೀಫ್ ದರ್ಗಾದ ಖಾದಿಮ್ ಸಲ್ಮಾನ್ ಚಿಶ್ತಿ ಎಂಬಾತನನ್ನು ಮಂಗಳವಾರ ರಾತ್ರಿ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ ಎಂದು ಅಜ್ಮೀರ್ ಜಿಲ್ಲಾ ಎಎಸ್ಪಿ ವಿಕಾಸ್ ಸಂಗ್ವಾನ್ ಮಾಹಿತಿ ನೀಡಿದ್ದಾರೆ.
ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮುಹಮ್ಮದ್ ವಿರುದ್ಧದ ನೂಪುರ್ ಶರ್ಮಾ ಹೇಳಿಕೆಗಾಗಿ ಸೈಯದ್ ಸಲ್ಮಾನ್ ಚೆಶ್ತಿ ನೂಪುರ್ ಶರ್ಮಾರನ್ನು ನಿಂದಿಸಿ ವಿಡಿಯೋವೊಂದನ್ನು ಹರಿಬಿಟ್ಟಿದ್ದ. ಅಲ್ಲದೇ ಈ ವಿಡಿಯೋದಲ್ಲಿ ಈತ ನೂಪುರ್ ಶರ್ಮಾ ಕೊಲೆ ಮಾಡುವಂತೆ ಕರೆ ನೀಡಿದ್ದ. ಈ ಬಿಜೆಪಿ ನಾಯಕಿಯು ಖ್ವಾಜಾ ಸಾಹೇಬ್ ಹಾಗೂ ಮೊಹಮ್ಮದ್ ಸಾಹೇಬರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾಳೆ. ಈ ಕೆಲಸ ಮಾಡಿದ ನೂಪುರ್ ಶರ್ಮಾ ತಲೆ ಕಡಿದು ತಂದವರಿಗೆ ನನ್ನ ಮನೆ ಹಾಗೂ ಆಸ್ತಿಯನ್ನು ನೀಡುತ್ತೇನೆಂದು ಚೆಶ್ತಿ ಕರೆ ನೀಡಿದ್ದ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಜ್ಮೆರ್ನ ವಿರುದ್ಧ ಸೋಮವಾರದಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ನೀಡಲಾಗಿರುವ ಪ್ರಚೋದನಕಾರಿ ಹೇಳಿಕೆಯನ್ನು ಆಧರಿಸಿ ಅಜ್ಮೀರ್ ದರ್ಗಾದ ಸಲ್ಮಾನ್ ಚಿಶ್ತಿಯನ್ನು ತಡರಾತ್ರಿ ಬಂಧಿಸಿದ್ದೇವೆ ಎಂದು ಅಜ್ಮೀರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಾಂಗ್ವಾನ್ ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋವನ್ನು ಸಲ್ಮಾನ್ ಚಿಶ್ತಿ ಕುಡಿದ ಅಮಲಿನಲ್ಲಿ ಮಾಡಿದ್ದಾನೆ. ಈ ಸಂಬಂಧ ಪೊಲೀಸರು ದರ್ಗಾ ಹಾಗೂ ಅಂಜುಮಾನ್ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿದ್ದಾರೆ. ಹಾಗೂ ಈ ಸಂಬಂಧ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ : murdering Chandrasekhar Guruji : ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ಇದನ್ನೂ ಓದಿ : ಕಿಂಗ್ ಕೊಹ್ಲಿ Vs ಸ್ವಿಂಗ್ ಸುಲ್ತಾನ್… ಇದೇ ದಿಗ್ಗಜರ ಕೊನೆಯ ಮುಖಾಮುಖಿ !
ಇದನ್ನೂ ಓದಿ : Heavy rain Protest : ಕೋಟದಲ್ಲಿ ಭಾರೀ ಮಳೆಯಿಂದ ಕೃಷಿಭೂಮಿ ಜಲಾವೃತ : ನೆರೆ ನೀರಲ್ಲೇ ರಾಜ್ಯ ಹೆದ್ದಾರಿ ತಡೆ
Salman Chishti, Ajmer dargah’s khadim, arrested for beheading remarks against Nupur Sharma