Protect PDF : ನಿಮ್ಮ ಮೊಬೈಲ್‌ ನಲ್ಲಿ PDF ಡಾಕ್ಯುಮೆಂಟ್‌ ಗಳನ್ನು ಪ್ರೊಟೆಕ್ಟ್‌ ಮಾಡುವುದು ಹೇಗೆ ಗೊತ್ತಾ?

ಇಂಟರ್‌ನೆಟ್‌(Internet)ನಲ್ಲಿ ಪ್ರೊಫೆಷನಲ್‌ ದಾಖಲೆಗಳು ಅಥವಾ ಫೈಲ್‌ಗಳನ್ನು ಕಳುಹಿಸಲು ಆದ್ಯತೆ ನೀಡುವ ಫಾರ್ಮೆಟ್‌ ಎಂದರೆ PDF ಗಳು. PDF ಎಂದರೆ ಪೋರ್ಟೆಬಲ್‌ ಡಾಕ್ಯುಮೆಂಟ್‌ ಫಾರ್ಮೆಟ್‌(Portable Document Format) ಎಂದು. ಇದು ದಾಖಲೆಗಳನ್ನು ಕಳುಹಿಸುವ ಅತ್ಯಂತ ಸುರಕ್ಷಿತ ಫಾರ್ಮೆಟ್‌ ಆಗಿದೆ. ಇದನ್ನು ಪಾಸ್‌ವರ್ಡ್‌ನ ಸಹಾಯದಿಂದ ಎನ್‌ಕ್ರಪ್ಟ್‌ ಮಾಡಬಹುದಾಗಿದೆ (Protect PDF). ಆನ್‌ಲೈನ್‌ನಲ್ಲಿ ಸೂಕ್ಷ್ಮ ಮತ್ತು ಪ್ರೊಫೆಷನಲ್‌ ಫೈಲ್‌ಗಳನ್ನು ಪಾಸ್‌ವರ್ಡ್‌ನಿಂದ ರಕ್ಷಸಿ PDF ಮಾದರಿಯಲ್ಲಿ ಕಳುಹಿಸುವುದು ಸುರಕ್ಷಿತ ಮಾರ್ಗವಾಗಿದೆ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೇ PDF ಡಾಕ್ಯುಮೆಂಟ್‌ಗಳಿಗೆ ಪಾಸ್‌ವರ್ಡ್‌ ನೀಡಿ ಕಳುಸಹಿಸಬಹುದಾಗಿದೆ. ಇದನ್ನು ಆಂಡ್ರಾಯ್ಡ್‌ ಮತ್ತು iOS ಎರಡೂ ಸಾಧನಗಳಲ್ಲಿ ಮಾಡಬಹುದಾಗಿದೆ. ಹಾಗಾದರೆ, PDF ಡಾಕ್ಯುಮೆಂಟ್‌ಗಳಿಗೆ ಪಾಸ್‌ವರ್ಡ್‌ ಸೆಟ್‌ ಮಾಡುವುದು ಹೇಗೆ? ಈ ಕೆಳಗಿನ ಹಂತಗಳನ್ನು ಪಾಲಿಸಿ:

PDF ಡಾಕ್ಯುಮೆಂಟ್‌ಗಳಿಗೆ ಫೋನ್‌ನಲ್ಲಿಯೇ ಪಾಸ್‌ವರ್ಡ್‌ ಸೆಟ್‌ ಮಾಡುವುದು ಹೇಗೆ?

  • ಮೊದಲಿಗೆ iLovePDF ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಈ ಆಪ್‌ ಆಂಡ್ರಾಯ್ಡ್‌ ಅಥವಾ iOS ಸ್ಮಾರ್ಟ್‌ಫೋನ್‌ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಇದನ್ನು ಪ್ಲೇ ಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
  • ಡೌನ್‌ಲೋಡ್‌ ಆದ ನಂತರ ಆಪ್‌ ಅನ್ನು ತೆರೆಯಿರಿ. ಅಲ್ಲಿ ಕೆಳಗಡೆಯಿರುವ ಟೂಲ್ಸ್‌ ಮೇಲೆ ಟ್ಯಾಪ್‌ ಮಾಡಿ.
  • ಅಲ್ಲಿರುವ ಲಿಸ್ಟ್‌ನಲ್ಲಿ ಪ್ರೊಟೆಕ್ಟ್‌ PDF ಆಯ್ದುಕೊಳ್ಳಿ.
  • ನೀವು ಪಾಸ್‌ವರ್ಡ್‌ನಿಂದ ರಕ್ಷಿಸಬೇಕೆಂದಿರುವ PDF ಡಾಕ್ಯುಮೆಂಟ್‌ ಆಯ್ದುಕೊಳ್ಳಿ ಮತ್ತು ಕಂಟಿನ್ಯೂ ಮೇಲೆ ಕ್ಲಿಕ್ಕಿಸಿ.
  • ಪಾಸ್‌ವರ್ಡ್‌ ನೀಡಿ ಮತ್ತು ದೃಢೀಕರಣಕ್ಕಾಗಿ ಕೆಳಗಡೆ ಇನ್ನೊಮ್ಮೆ ಅದೇ ಪಾಸ್‌ವರ್ಡ್‌ ಟೈಪಿಸಿ. ಪ್ರೊಟೆಕ್ಟ್‌ ಮೇಲೆ ಟ್ಯಾಪ್‌ ಮಾಡಿ.

ಹೀಗೆ ಮಾಡುವುದರಿಂದ PDF ಡಾಕ್ಯುಮೆಂಟ್‌ ಪಾಸ್‌ವರ್ಡ್‌ನಿಂದ ಲಾಕ್‌ ಆಗುವುದು.

ಈ ಆಪ್‌ ಒಂದು ದಿನಕ್ಕೆ ಮೂರು PDF ಡಾಕ್ಯುಮೆಂಟ್‌ಗಳನ್ನು ಮಾತ್ರ ಲಾಕ್‌ ಮಾಡಲು ಅವಕಾಶ ನೀಡುವುದು. ನಿಮಗೆ ಅದಕ್ಕಿಂತಲೂ ಹೆಚ್ಚಿನ ಡಾಕ್ಯುಮೆಂಟ್‌ ಗಳನ್ನು ಪಾಸ್‌ವರ್ಡ್‌ನಿಂದ ಲಾಕ್‌ ಮಾಡುವುದಿದ್ದರೆ ಈ ಆಪ್‌ನ ಪ್ರೀಮಿಯಂ ಪ್ಲಾನ್‌ ಅನ್ನು ಖರೀದಿಸಬಹುದು.

PDF ಡಾಕ್ಯುಮೆಂಟ್‌ಗಳನ್ನು ಅನ್‌ಲಾಕ್‌ ಮಾಡುವುದು ಹೇಗೆ ?
ನೀವು PDF ನ ಪಾಸ್‌ವರ್ಡ್‌ ಮರೆತಿದ್ದರೆ, ಟೂಲ್ಸ್‌ ನಲ್ಲಿರುವ ಅನ್‌ಲಾಕ್‌ PDF ಆಪ್ಷನ್‌ ಆಯ್ದುಕೊಳ್ಳುವುದರ ಮೂಲಕ ಪುನಃ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : WhatsApp Chat Lock : ನಿಮ್ಮ ಮುಖ್ಯವಾದ ವಾಟ್ಸ್‌ಅಪ್‌ನ ಚಾಟ್‌ಗಳನ್ನು ಬೇರೆಯವರು ಓದದಂತೆ ಲಾಕ್‌ ಮಾಡುವುದು ಹೇಗೆ ಗೊತ್ತೇ?

ಇದನ್ನೂ ಓದಿ : YouTube Shorts ಅನ್ನು ಸುಲಭವಾಗಿ ರಚಿಸುವುದು ಹೇಗೆ ಗೊತ್ತೇ?

(Protect PDF Documents by giving the password)

Comments are closed.