Ola driver kills passenger : ಒಟಿಪಿ ವಿಚಾರಕ್ಕೆ ಜಗಳ : ಕೋಪಗೊಂಡ ಓಲಾ ಚಾಲಕನಿಂದ ಪ್ರಯಾಣಿಕನ ಕೊಲೆ

ತಮಿಳುನಾಡು : Ola driver kills passenger : ಓಲಾ, ಊಬರ್​ನಂತಹ ಕ್ಯಾಬ್​ಗಳಲ್ಲಿ ಪ್ರಯಾಣಿಸುವಾಗ ಒಟಿಪಿ ಕೇಳುವುದು ಸರ್ವೇ ಸಾಮಾನ್ಯ. ಅದೇ ರೀತಿ ಚೆನ್ನೈನಲ್ಲಿ ಟೆಕ್ಕಿಯೊಬ್ಬರು ಭಾನುವಾರದಂದು ಓಲಾ ಕ್ಯಾಬ್​ ಒಂದನ್ನು ಬುಕ್​ ಮಾಡಿದ್ದರು. ಕ್ಯಾಬ್​ ಎರಿದ ಟೆಕ್ಕಿ ಒಟಿಪಿಯನ್ನು ನೀಡಲು ತಂಡ ಮಾಡಿದ್ದಕ್ಕೆ ಕೋಪಗೊಂಡ ಚಾಲಕ ಹಾಗೂ ಟೆಕ್ಕಿ ನಡುವೆ ಗಲಾಟೆ ಏರ್ಪಟ್ಟಿದೆ. ಇದರಿಂದ ಕೋಪಗೊಂಡ ಚಾಲಕನ ಟೆಕ್ಕಿಯನ್ನು ಕೊಲೆ ಮಾಡಿದ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ.


ಕೊಯಂಬತ್ತೂರು ಮೂಲದ ಸಾಫ್ಟ್​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉಮೇಂದ್ರ ಎಂಬವರು ಈ ಘಟನೆಯಲ್ಲಿ ಕೊಲೆಯಾಗಿದ್ದಾರೆ. ಭಾನುವಾರದಂದು ತನ್ನ ಸಂಬಂಧಿಗಳನ್ನು ಭೇಟಿಯಾಗಲೆಂದು ಚೆನ್ನೈಗೆ ಬಂದಿದ್ದ ಉಮೇಂದ್ರ ಪತ್ನಿ ಹಾಗೂ ಮಕ್ಕಳೊಂದಿಗೆ ಭಾನುವಾರ ವಿವಿಧ ಕಡೆಗೆ ತೆರಳಿದ್ದರು ಎನ್ನಲಾಗಿದೆ. ಕ್ಯಾಬ್​ ಬಂದ ತಕ್ಷಣ ಉಮೇಂದ್ರ ಒಟಿಪಿಯನ್ನು ತಪ್ಪಾಗಿ ಹೇಳಿದ್ದಾರೆ. ಇದಕ್ಕೆ ಚಾಲಕ ನೀವು ಸರಿಯಾಗಿ ಒಟಿಪಿ ನೀಡದೇ ಹೋದರೆ ನನಗೆ ಸರಿಯಾದ ವಿಳಾಸಕ್ಕೆ ಕ್ಯಾಬ್​ ಓಡಿಸಲು ಸಾಧ್ಯವಾಗೋದಿಲ್ಲ ಎಂದು ಹೇಳಿದ್ದಾರೆ. ಈ ಮಾತಿಗೆ ಕೋಪಗೊಂಡ ಉಮೇಂದ್ರ ಕಾರಿನ ಬಾಗಿಲನ್ನು ಗಟ್ಟಿಯಾಗಿ ಹಾಕಿದ್ದಾರೆ. ಇದು ಚಾಲಕನ ಕೋಪಕ್ಕೆ ಕಾರಣವಾಗಿದೆ. ಹಾಗೂ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದೆ.


ಪ್ರಕರಣದ ತನಿಖಾಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ, ಕ್ಯಾಬ್ ಚಾಲಕ ಮೊದಲು ತನ್ನ ಮೊಬೈಲ್​ನ್ನು ಉಮೇಂದ್ರರತ್ತ ಎಸೆದಿದ್ದ. ಅಲ್ಲದೇ ಇಷ್ಟಕ್ಕೆ ಸುಮ್ಮನಾಗದೇ ಕಾರಿನಿಂದ ಕೆಳಗಿಳಿದು ಉಮೇಂದ್ರಗೆ ಹಲವು ಬಾರಿ ಗುದ್ದಿದ್ದಾನೆ. ಇದರಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಉಮೇಂದ್ರ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಅಲ್ಲೇ ಜೊತೆಯಿದ್ದ ಪತ್ನಿ ಕೂಡಲೇ ಪತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ವೈದ್ಯರು ಉಮೇಂದ್ರ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.


ಈ ವಿಚಾರವಾಗಿ ಮಾಹಿತಿ ತಿಳಿಯುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ಕ್ಯಾಬ್​ ಚಾಲಕನನ್ನು ಕೊಲೆ ಆರೋಪದ ಅಡಿಯಲ್ಲಿ ಬಂಧಿಸಿದ್ದಾರೆ. ಸಧ್ಯಕ್ಕೆ ತನಿಖೆ ಚುರುಕು ಗತಿಯಲ್ಲಿ ಸಾಗಿದೆ. ಆದರೆ ಸುಂದರವಾಗಿ ಕೊನೆಯಾಗಬೇಕಿದ್ದ ವಾರಾಂತ್ಯವು ಈ ರೀತಿ ದುರಂತದಲ್ಲಿ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸ .

ಇದನ್ನು ಓದಿ : ಕಿಂಗ್ ಕೊಹ್ಲಿ Vs ಸ್ವಿಂಗ್ ಸುಲ್ತಾನ್… ಇದೇ ದಿಗ್ಗಜರ ಕೊನೆಯ ಮುಖಾಮುಖಿ !

ಇದನ್ನೂ ಓದಿ : Sarala Vaastu ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಕೊಲೆ ರಹಸ್ಯ ಬಿಚ್ಚಿಟ್ಟ ಕಮಿಷನರ್‌ ಲಾಬೂರಾಂ

Ola driver kills passenger after argument over OTP in Chennai

Comments are closed.