ಬೆಂಗಳೂರು : ಬಿಜೆಪಿ ಹಿರಿಯ ನಾಯಕ ಕೇಸರಿನಾಥ ತ್ರಿಪಾಠಿ ಇಹಲೋಕವನ್ನು (Kesarinath Tripathi passed away) ತ್ಯಜಿಸಿದ್ದಾರೆ. ಸ್ಪೀಕರ್ ಆಗಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ, 88 ವರ್ಷ ಪ್ರಾಯದ ಕೇಸರಿನಾಥ್ ತ್ರಿಪಾಠಿ ಉತ್ತರಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಭಾನುವಾರ (ಜನವರಿ 8) ಮುಂಜಾನೆ 5 ಗಂಟೆಗೆ ಹೊತ್ತಿಗೆ ವಿಧಿವಶರಾಗಿದ್ದಾರೆ.
ಬಿಜೆಪಿ ಹಿರಿಯ ನಾಯಕ ಕೇಸರಿನಾಥ್ ತ್ರಿಪಾಠಿ ಕಳೆದ ಹಲವು ದಿನಗಳಿಂದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಉಸಿರಾಟ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಅವರು ಮನೆಯಲ್ಲಿ ಇಂದು ಇಹಲೋಕವನ್ನು ತ್ಯಜಿಸಿದ್ದಾರೆ. ಉತ್ತರಪ್ರದೇಶದ ಮುಖ್ಯಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ನಾಯಕರು ಕೇಸರಿನಾಥ್ ತ್ರಿಪಾಠ ಅವರಿಗೆ ಸಂತಾಪವನ್ನು ಸೂಚಿಸಿದ್ದಾರೆ. 1934ರ ನವೆಂಬರ್ 10ರಂದು ಕೇಸರಿನಾಥ್ ತ್ರಿಪಾಠಿ ಅಲಹಾಬಾದ್ ಹೈಕೋರ್ಟ್ ನ ಹಿರಿಯ ವಕೀಲರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಇವರು ಪುತ್ರ ನೀರಜ್ ತ್ರಿಪಾಠಿ ಸೇರಿದಂತೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇದನ್ನೂ ಓದಿ : ಸಾಲಮನ್ನಾ ಹೆಸರಲ್ಲಿ ಸಿದ್ಧವಾಗ್ತಿದೆ ಭಾವುಕ ಅಸ್ತ್ರ : ರೈತರಿಗೆ ಪತ್ರ ಬರಿತಾರಂತೆ ಎಚ್ ಡಿಕೆ
ಇದನ್ನೂ ಓದಿ : Sonia Gandhi : ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು
ಕೇಸರಿನಾಥ್ ತ್ರಿಪಾಠಿ 2014 ರಿಂದ 2019ರ ತನಕ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ಬಿಹಾರ, ಮೇಘಾಲಯ ಮತ್ತು ಮಿಜೋರಾಂನ ಹೆಚ್ಚುವರಿ ಹೊಣೆಯನ್ನು ನೀಡಲಾಗಿತ್ತು.ಉತ್ತರ ಪ್ರದೇಶದ ಝಸಿ ವಿಧಾನಸಭಾ ಕ್ಷೇತ್ರದಿಂದ 1 ಬಾರಿ ಹಾಗೂ ಅಲಹಾಬಾದ್ ದಕ್ಷಿಣ ಕ್ಷೇತ್ರದಿಂದ ಐದು ಬಾರಿ ಸೇರಿ ಒಟ್ಟು 6 ಬಾರಿ ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿದ್ದ ಕೇಸರಿನಾಥ್ ತ್ರಿಪಾಠಿ ವಿಧಾನಸಭೆ ಸ್ಪೀಕರ್ ಆಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು.
ಇದನ್ನೂ ಓದಿ : ಕರ್ನಾಟಕದಲ್ಲಿ ಜಾರಿಯಾಗುತ್ತಾ ಲಾಕ್ ಡೌನ್ : ಮಾರ್ಗಸೂಚಿ ಪ್ರಕಟ, ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ
Senior BJP leader Kesarinath Tripathi passed away