Mother killed 3 days girlchild: ಹೆಣ್ಣಾಯ್ತು 2ನೇ ಮಗು ಎಂಬ ಅಸಮಾಧಾನ: 3 ದಿನದ ಹಸುಳೆಯನ್ನು ಕೊಂದ ಕ್ರೂರಿ ತಾಯಿ

ಲಾತೂರ್:‌ (Mother killed 3 days girlchild) ತನ್ನ ಮೂರು ದಿನದ ಹೆಣ್ಣು ಮಗುವನ್ನು ಕೊಂದ ಆರೋಪದ ಮೇಲೆ ಮಹಿಳೆಯೋರ್ವಳನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಲಾತೂರ್‌ ನಲ್ಲಿ ನಡೆದಿದೆ. ಎರಡನೇ ಮಗು ಕೂಡ ಹೆಣ್ಣು ಎಂಬ ಅಸಮಾಧಾನದಿಂದ ಕ್ರೂರಿ ತಾಯಿ ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

25 ವರ್ಷದ ಮಹಿಳೆ ಡಿಸೆಂಬರ್ 29 ರಂದು ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮೊದಲನೇ ಮಗು ಕೂಡ ಹೆಣ್ಣು, ಎರಡನೇ ಮಗು ಕೂಡ ಹೆಣ್ಣು ಎಂದು ಅಸಮಾಧಾನಗೊಂಡ ಮಹಿಳೆ ಹುಟ್ಟಿ ಮೂರು ದಿನವಾದ ಏನು ಅರಿಯದ ಪುಟ್ಟ ಕಂದಮನನ್ನು ಕತ್ತು ಹಿಸುಕಿ ಕೊಂದಿದ್ದಾಳೆ (Mother killed 3 days girlchild).

ವಿಷಯ ತಿಳಿದ ಗೊಟೆಗಾಂವ್‌ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯನ್ನು ಬಂಧಿಸಿದ್ದಾರೆ. 25 ವರ್ಷದ ಮಹಿಳೆ ಡಿಸೆಂಬರ್ 29 ರಂದು ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದರಿಂದ ಬೇಸರಗೊಂಡಿದ್ದ ಮಹಿಳೆ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಗೊಟೆಗಾಂವ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಒಸ್ಮಾನಾಬಾದ್‌ನ ಲೋಹರಾ ತಹಸಿಲ್‌ನ ಹೋಳಿ ನಿವಾಸಿ ಮಹಿಳೆ ಕಾಸರ್ ಜವಾಲಾ ಎನ್ನುವವರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಇದು ಎರಡನೇ ಹೆರಿಗೆಯಾಗಿದ್ದು, ಎರಡನೇ ಮಗು ಕೂಡ ಹೆಣ್ಣು ಎಂಬ ಕಾರಣಕ್ಕೆ ಮೂರು ದಿನದ ಹೆಣ್ಣು ಮಗುವನ್ನು ಕರವಸ್ತ್ರದಿಂದ ಕತ್ತು ಹಿಸುಕಿ ಕೊಂದಿದ್ದಾಳೆ. ತನಿಖೆಯ ನಂತರ ಶುಕ್ರವಾರ ಸಂಜೆ ಆಕೆಯನ್ನು ಬಂಧಿಸಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಕಿಶೋರ ಕಾಂಬಳೆ ತಿಳಿಸಿದ್ದಾರೆ.

ಇದನ್ನೂ ಓದಿ : Triple riding murder: ಪ್ರಿಯಕರನ ಕತ್ತು ಹಿಸುಕಿ ಕೊಲೆ: ಹೆಣದ ಜೊತೆ ದಂಪತಿ ತ್ರಿಬಲ್‌ ರೈಡ್

ಇದನ್ನೂ ಓದಿ : tipper Theft : ಸಾಸ್ತಾನ ಟೋಲ್ ಗೇಟ್, ನಿಲ್ಲಿಸಿದ್ದ ಟಿಪ್ಪರ್ ಕಳವು

ಇದನ್ನೂ ಓದಿ : Deadbody found in car: 3 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾರಿನಲ್ಲಿ ಪತ್ತೆ

Upset that the first child was a girl and the second child was also a girl, a woman strangled a three-day-old baby to death.

Comments are closed.