mbbs student ends life : ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ : ಮದುವೆಯಾಗಿ ಮೂರೇ ತಿಂಗಳಿಗೆ ಆತ್ಮಹತ್ಯೆ

ಬೆಂಗಳೂರು : mbbs student ends life : ಆತ್ಮಹತ್ಯೆ ಎನ್ನುವುದು ಅತ್ಯಂತ ಭಯಾನಕವಾದ ಯೋಚನೆಯಾಗಿದೆ. ಯಾವುದೋ ಕೆಟ್ಟ ಸಂದರ್ಭದಲ್ಲಿ ಅನೇಕರು ಈ ದುಡುಕಿನ ನಿರ್ಧಾರವನ್ನು ತೆಗೆದುಕೊಂಡು ಬಿಡ್ತಾರೆ. ಜೀವ ಕಳೆದುಕೊಂಡ ಮಾತ್ರ ಸಮಸ್ಯೆಗಳು ಮುಗಿಯುತ್ತೆ ಎಂಬ ನಿರ್ಧಾರಕ್ಕೆ ಬಂದು ಜೀವವನ್ನೇ ಕೊನೆಯಾಗಿಸಿಕೊಂಡು ಬಿಡ್ತಾರೆ. ಕೌಟುಂಬಿಕ ಕಲಹ, ಪ್ರೇಮ ವೈಫಲ್ಯ, ಆರ್ಥಿಕ ಸಂಕಷ್ಟ ಹೀಗೆ ನಾನಾ ಕಾರಣಗಳಿಂದಾಗಿ ಅನೇಕರು ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಸರ್ಕಾರಗಳು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳಿಂದ ಜನರನ್ನು ಕಾಪಾಡಲು ಸಹಾಯವಾಣಿಗಳು ಆರಂಭಿಸಿದ್ದರೂ ಸಹ ಇದರಿಂದ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ.

ಬೆಂಗಳೂರಿನಲ್ಲಿ ಎಂಬಿಬಿಎಸ್​ ವಿದ್ಯಾರ್ಥಿಯೊಬ್ಬ 11ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡತಹ ಘಟನೆಯೊಂದು ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಎಂಬಿಬಿಎಸ್​ ವಿದ್ಯಾರ್ಥಿಯನ್ನು 31 ವರ್ಷದ ಪ್ರಥ್ವಿಕಾಂತ್​​ ರೆಡ್ಡಿ ಎಂದು ಗುರುತಿಸಲಾಗಿದೆ. ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಈತ ಅನಾರೋಗ್ಯ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

ಆಂಧ್ರ ಪ್ರದೇಶದ ಕಡಪ ಮೂಲದ ಪೃಥ್ವಿರಾಜ್​ ರೆಡ್ಡಿ ಅಮೃತಹಳ್ಳಿಯಲ್ಲಿ ವಾಸವಿದ್ದ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪೃಥ್ವಿರಾಜ್​ ರೆಡ್ಡಿ ನ್ಯೂರಾಲಜಿ ಕೋರ್ಸ್ ಅಧ್ಯಯನ ಮಾಡುತ್ತಿದ್ದ ಎನ್ನಲಾಗಿದೆ, ಎಂಬಿಬಿಎಸ್​ ಪದವಿ ಪೂರ್ಣಗೊಳ್ಳಲು ಕೇವಲ ಐದು ತಿಂಗಳು ಬಾಕಿ ಇರುವಾಹ ಪೃಥ್ವಿರಾಜ್​ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪತ್ನಿಯು ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಪೃಥ್ವಿರಾಜ್​ ಕಟ್ಟಡದ ಹನ್ನೊಂದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ. ಸ್ಥಳದಲ್ಲಿಯೇ ಪೃಥ್ವಿರಾಜ್​ ಸಾವನ್ನಪ್ಪಿದ್ದಾನೆ. ಪೃಥ್ವಿರಾಜ್​ ಮೊಬೈಲ್​​ನಲ್ಲಿ ತೆಲುಗು ಭಾಷೆಯಲ್ಲಿ ಬರೆಯಲಾದ ಡೆತ್​ ನೋಟ್​ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಮೃತ ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೃಥ್ವಿರಾಜ್​ ಮೊಬೈಲ್​ ಫೋನ್​ನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.

ಇದನ್ನು ಓದಿ : Successor of Rohit Sharma : ಈ ಹುಡುಗನಿಗೆ ಸಪೋರ್ಟ್ ಮಾಡಿದ್ರೆ ಮತ್ತೊಬ್ಬ ರೋಹಿತ್ ಶರ್ಮಾ ಆಗ್ತಾನೆ

ಇದನ್ನೂ ಓದಿ : IPL Media Rights Auction 2022ನಲ್ಲಿ ಮೆಗಾ ಟ್ವಿಸ್ಟ್ : 23,575 ಕೋಟಿಗೆ ಸ್ಟಾರ್ ಸ್ಪೋರ್ಟ್ಸ್ ಪಾಲಾಯ್ತು ಟಿವಿ ರೈಟ್ಸ್

mbbs student ends life jumping from 11th floor in bengaluru

Comments are closed.