Shawarma death : ಕಾಸರಗೋಡಲ್ಲಿ ಶವರ್ಮ ತಿಂದು ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ

ಕಾಸರಗೋಡು : ಉಪಹಾರ ಗೃಹದಲ್ಲಿ ಶವರ್ಮ ತಿಂದು 16 ವರ್ಷದ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿ (Shawarma death), 18 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಕೇರಳದ ಕಾಸರಗೋಡಿನ ಕರಿವಲ್ಲೋರ್ ನಿವಾಸಿ ದೇವಾನಂದ ಕನಂಗಾಡ್ (16 ವರ್ಷ) ಎಂಬಾಕೆಯೇ ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ವಿದ್ಯಾರ್ಥಿಗಳು ಟ್ಯೂಷನ್‌ ಗೆ ಹೋಗಿದ್ದು, ವೇಳೆಯಲ್ಲಿ ಟ್ಯೂಷನ್‌ ಸೆಂಟರ್‌ ಪಕ್ಕದಲ್ಲಿಯೇ ಇದ್ದ ಜ್ಯೂಸ್‌ ಅಂಗಡಿಯಲ್ಲಿ ಉಪಹಾರ ಸೇವನೆ ಮಾಡಿದ್ದಾರೆ. ಶವರ್ಮ ತಿಂದ ಸ್ವಲ್ಪ ಹೊತ್ತಲ್ಲೇ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ವಿದ್ಯಾರ್ಥಿನಿಯ ಸಾವಿಗೆ ವಿಷಪೂರಿತ ಉಪಾಹಾರ ಸೇವನೆ ಶಂಕೆ ವ್ಯಕ್ತಪಡಿಸಿದ್ದಾರೆ. ಉಪಾಹಾರ ಸೇವಿಸಿದ ಜ್ಯೂಸ್ ಅಂಗಡಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮಳಿಗೆಯನ್ನು ಬಂದ್ ಮಾಡಲಾಗಿದೆ. ಅಲ್ಲದೇ ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಅಸ್ವಸ್ಥಗೊಂಡ 18 ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಯಾರ ಸ್ಥಿತಿಯೂ ಗಂಭೀರವಾಗಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಗೆ ಸಚಿವ ಎಂ.ವಿ.ಗೋವಿಂದನ್‌ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಹೋಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಈ ಕುರಿತು ಹೋಟೆಲ್‌ ಆಹಾರದ ಗುಣಮಟ್ಟದ ಪರೀಕ್ಷೆಗೆ ರಾಜ್ಯ ಸರಕಾರ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿನಿ ಸಾವು ಪ್ರಕರಣ : ತನಿಖೆಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಆದೇಶ

ಕಾಸರಗೋಡಿನ ಚೆರುವತ್ತೂರಿನಲ್ಲಿ ಶವರ್ಮಾ ತಿಂದ ವಿದ್ಯಾರ್ಥಿನಿ ವಿಷ ಸೇವಿಸಿ ಸಾವನ್ನಪ್ಪಿದ ಪ್ರಕರಣದ ತನಿಖೆಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶಿಸಿದ್ದಾರೆ. ವಿಷಾಹಾರ ಸೇವನೆಯಿಂದ ಬಳಲುತ್ತಿರುವವರಿಗೆ ತಜ್ಞ ಚಿಕಿತ್ಸೆ ನೀಡುವಂತೆ ಹಾಗೂ ರಜಾ ದಿನವಾದರೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ವೈದ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಚಿವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಕುಂದಾಪುರ : ಪ್ರಥಮ ಪಿಯುಸಿ ಫಲಿತಾಂಶಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

ಇದನ್ನೂ ಓದಿ : ರಾಜೇಶ್‌ ಕುಂದರ್‌ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಡೆತ್‌ನೋಟ್‌ನಲ್ಲಿದೆ ನಾಲ್ವರ ಹೆಸರು

Shawarma death Student, 18 hospitalized due to food poisoning in Kasaragod

Comments are closed.