(Solar eclipse )ಈ ವರ್ಷದ ಮೊದಲ ಹಾಗೂ ಕೊನೆಯ ಸೂರ್ಯ ಗ್ರಹಣವು ಅಕ್ಟೋಬರ್ 25 ರಂದು ಗೋಚರಿಸಲಿದೆ. ಇಪ್ಪತ್ತೇಳು ವರ್ಷಗಳ ನಂತರ ಕಾಕತಾಳೀಯವೆಂಬಂತೆ ದೀಪಾವಳಿ ದಿನವೆ ಸೂರ್ಯಗ್ರಹಣ ಸಂಭವಿಸಲಿದೆ. ಈ ಗ್ರಹಣವು ಅನೇಕ ರೀತಿಯಲ್ಲಿ ಪ್ರಭಾವ ಬೀರಲಿದ್ದು, ಈಗಾಗಲೆ ಕೆಲವು ಪ್ರದೇಶಗಳಲ್ಲಿ ತನ್ನ ಪ್ರಭಾವವನ್ನು ಬೀರಲು ಆರಂಭಿಸಿದೆ. ಸೂರ್ಯ ಗ್ರಹಣ ಗೋಚರವಾಗುವ ಮೊದಲೆ ಸಾಲು ಸಾಲಾಗಿ ಅವಘಡಗಳು ಸಂಭವಿಸುತ್ತಿದೆ. ಮಳೆ, ಪ್ರವಾಹ , ಭೂಕಂಪ ಜೊತೆಗೆ ರಸ್ತೆ ಅಪಘಾತಗಳು ಕೂಡ ಹೆಚ್ಚಾಗಿದ್ದು ,ಇವೆಲ್ಲವು ಸೂರ್ಯ ಗ್ರಹಣ(Solar eclipse ) ಹೊತ್ತು ತಂದ ಗ್ರಹಚಾರ ಎಂದು ಹೇಳಲಾಗ್ತಾ ಇದೆ. ರಾಜ್ಯ,ದೇಶ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ . ಅಲ್ಲದೆ ಗ್ರಹಣದ ವೇಳೆಯಲ್ಲಿಯೆ ಬಂಗಾಳ ಕೊಲ್ಲಿಯಲ್ಲಿ ಸಿತ್ರಾಂಗ ಚಂಡಮಾರುತ ಕೂಡ ಎದ್ದಿದೆ.
ದೀಪಾವಳಿಯ ವೇಳೆಯಲ್ಲಿಯೇ ಗ್ರಹಣ ಸಂಭವಿಸಲಿದ್ದು, ಈ ವೇಳೆಯೆ ಮೂರು ರಾಷ್ಟ್ರಗಳಲ್ಲಿ ಪ್ರಕೃತಿ ವಿಕೋಪಗಳು ಉಂಟಾಗಿದ್ದು , ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಸಿತ್ರಾಂಗ ಚಂಡಮಾರುತ ದಂಡೆತ್ತಿ ನುಗ್ಗಿ ಬರುತ್ತಾ ಇದೆ. ಇದೆಲ್ಲವು ಸೂರ್ಯ ಗ್ರಹಣದ ಪ್ರಭಾವ ಎಂದು ಹೇಳಲಾಗ್ತಾ ಇದೆ. ಆಸ್ಟ್ರೇಲಿಯಾ , ಮೆಕ್ಸಿಕೋ ಹಾಗೂ ಏಷ್ಯಾದಲ್ಲಿ ಗ್ರಹಣಗಳು ಸಂಭವಿಸಲಿದ್ದು, ಈ ಪ್ರದೇಶಗಳಲ್ಲಿ ಗ್ರಹಣದ ಕರಿ ಛಾಯೆ ಈಗಾಗಲೆ ಬಿದ್ದಿದೆ. ಯುರೋಪ್, ದಕ್ಷಿಣ ಆಫ್ರಿಕಾ ಹಾಗೂ ಏಷ್ಯಾಗಳಲ್ಲಿ ಸಾಲು ಸಾಲಾಗಿ ಗಂಡಾಂತರಗಳು ಸೃಷ್ಠಿಯಾಗುತ್ತಿವೆ .
ಇದನ್ನೂ ಓದಿ : Diwali festival 2022: ಉತ್ತರ ಕನ್ನಡ ಕವಡೀಕೆರೆಯಲ್ಲಿ ಗಂಗಾಷ್ಠಮಿ ಪೂಜೆ : ದೀಪಾವಳಿಯಂದು ನಡೆಯುತ್ತೆ ವಿಶಿಷ್ಟ ಆಚರಣೆ
ನೇಪಾಳದಲ್ಲಿ ನಡೆದ ಭೂಕಂಪನದಿಂದ ಜನತೆ ತತ್ತರಿಸಿ ಹೋಗಿದ್ದಾರೆ. ನೇಪಾಳದ ಸಿಯೋನಾದಲ್ಲಿ ಐದು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, 2.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪ ನಡೆದ ವೇಳೆಯಲ್ಲಿ ಕೆಲವು ಮನೆಗಳು ಗೋಪುರಗಳು ಕೂಡ ಕುಸಿದಿವೆ.ಇದು ಜನರಲ್ಲಿ ಆತಂಕವನ್ನು ಸೃಷ್ಠಿಮಾಡಿದೆ .
ಇನ್ನೂ ಪಾಕಿಸ್ತಾನದಲ್ಲಿ ಕೂಡ ಭೀಕರ ಪ್ರವಾಹ ಸಂಭವಿಸಿದ್ದು, ಜನರ ಜೀವನ ಅಸ್ತವ್ಯಸ್ತಗೊಂಡಿದೆ . ಸುರಿಯುತ್ತಿರುವ ಭಾರೀ ಮಳೆಗೆ , ಭೀಕರ ಪ್ರವಾಹಕ್ಕೆ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಒಂದು ತುತ್ತು ಅನ್ನಕ್ಕಾಗಿ ಜನರು ಪರದಾಡುತ್ತಿದ್ದಾರೆ. ಮುಂದೆ ಸಂಭವಿಸಲಿರುವ ಸೂರ್ಯ ಗ್ರಹಣ ಒಂದು ತಿಂಗಳ ಹಿಂದೆಯೆ ತನ್ನ ಕರಿ ಛಾಯೆಯನ್ನು ಪಾಕಿಸ್ತಾನದ ಮೇಲೆ ಬೀರಿತ್ತು ಎಂದರೆ ತಪ್ಪಾಗಲಾರದು. ತಿಂಗಳ ಹಿಂದೆಯೇ ಪಾಕಿಸ್ತಾನದಲ್ಲಿ ಪ್ರವಾಹ ಎದುರಾಗಿದ್ದು, ಸಾವಿರಾರು ಮಂದಿ ಪ್ರವಾಹಕ್ಕೆ ಬಲಿಯಾಗಿದ್ದರು.ಲಕ್ಷ ಲಕ್ಷ ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದವು . ಈಗಾಗಲೆ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಹೊಡೆತ ಬಿದ್ದಂತಾಗಿದೆ.ಪ್ರವಾಹದಿಂದ ಈಗಲೂ ಪಾಕಿಸ್ತಾನಕ್ಕೆ ಚೇತರಿಸಿಕೊಳ್ಳಲಾಗದ ಪರಿಸ್ಥಿತಿ ಎದುರಾಗಿದ್ದು, ತುತ್ತು ಅನ್ನಕ್ಕಾಗಿ ಜನರ ಆಕ್ರಂದನ ಮುಗಿಲು ಮುಟ್ಟುವಂತಿದೆ
ಇದನ್ನೂ ಓದಿ : Diwali And Solar Eclipse : ದೀಪಾವಳಿಯ ದಿನವೇ ಖಂಡಗ್ರಾಸ ಸೂರ್ಯಗ್ರಹಣ: ಆಚರಣೆ ಮಾಡುವುದು ಹೇಗೆ?
ಇನ್ನೂ ನೈಜಿರಿಯಾದಲ್ಲಿ ಕೂಡ ಪ್ರವಾಹದ ಭೀಕರತೆ ಎದುರಾಗಿದ್ದು, ಜಲಪ್ರಳಯಕ್ಕೆ 600 ಮಂದಿ ಸಾವನ್ನಪ್ಪಿದ್ದಾರೆ.ಆಸ್ಟ್ರೇಲಿಯಾ, ಮೆಕ್ಸಿಕೋ ದೇಶದಲ್ಲಿ ಕೂಡ ಜಲಪ್ರಳಯ ಉಂಟಾಗಿದ್ದು , ತುರ್ತು ಪರಿಸ್ಥಿತಿ ಜಾರಿ ಮಾಡಲಾಗಿದೆ. ಮೆಕ್ಸಿಕೋ ಭಾಗಗಳಲ್ಲಿ ಸೈಕ್ಲೋನ್ ನಿಂದ ಭಯಂಕರ ಮಳೆಯಾಗ್ತಾ ಇದ್ದು , ಭೀಕರ ಪ್ರವಾಹ ಉಂಟಾಗಿದೆ. ಪ್ರವಾಹಕ್ಕೆ ಸಿಲುಕಿದ ಹಲವು ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ .
ಇದನ್ನೂ ಓದಿ : Diwali Festival 2022 : ಕರಾವಳಿಯಲ್ಲಿ ವಿಶೇಷ ದೀಪಾವಳಿ : ಏನಿದು “ಬಲೀಂದ್ರ ಪೂಜೆ”
ಇನ್ನೂ ಭಾರತದಲ್ಲೂ ಕೂಡ ಗ್ರಹಣ ಸಂಭವಿಸುವ ಮೊದಲೆ ಜಲಕಂಟಕಗಳು ಆರಂಭವಾಗಿದ್ದು, ಈಗಾಗಲೇ ಜನಜೀವನ ಅಸ್ತವ್ಯಸ್ತಗೊಂಡಿದೆ . ಗ್ರಹಣಕ್ಕೂ ಮೊದಲೆ ಮಳೆಯ ಆರ್ಭಟ ಆರಂಭವಾಗಿದ್ದು, ಬೀದರ್ ಹಾಗೂ ಮದ್ಯಪ್ರದೇಶಗಳಲ್ಲಿ ಮಳೆರಾಯ ಆರ್ಭಟಿಸುತ್ತಿದ್ದಾನೆ . ಈ ಭಾಗದಲ್ಲಿಯೂ ಕೂಡ ಭೂಮಿ ಕಂಪಿಸಿದ್ದು , 5.1 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ .ಗ್ರಹಣಕ್ಕೂ ಮೊದಲೆ ಕೆರಳಿದ ಪ್ರಕೃತಿಯಿಂದ ಅನೇಕ ಸಾವು ನೋವುಗಳು ಸಂಭವಿಸಿದ್ದು, ಮೂರು ರಾಷ್ಟ್ರಗಳಿಗೆ ಗ್ರಹಣವು ಕಂಟಕವಾಗಿದೆ
(Solar eclipse) The first and last solar eclipse of this year will be visible on October 25. Coincidentally, a solar eclipse will occur on Diwali day after twenty seven years. This eclipse is going to have an impact in many ways and has already started making its impact in some areas. A series of accidents are happening before the solar eclipse is visible. Along with rain, floods, earthquakes, road accidents have also increased, all these can be said to be the effects of solar eclipse. It is raining non-stop in many parts of the state and country. Also, Cyclone Sitranga has also arisen in the Bay of Bengal during the eclipse.