10889 mosques loudspeakers : 10 ಸಾವಿರಕ್ಕೂ ಅಧಿಕ ಮಸೀದಿಗಳಿಗೆ ಧ್ವನಿವರ್ಧಕ ಅಳವಡಿಕೆಗೆ : ಅನುಮತಿ ಕೊಟ್ಟ ರಾಜ್ಯ ಸರಕಾರ

ಬೆಂಗಳೂರು :10889 mosques loudspeakers : ರಾಜ್ಯದಲ್ಲಿನ 10 ಸಾವಿರಕ್ಕೂ ಮಸೀದಿ, ಮಂದಿರ ಹಾಗೂ ಚರ್ಚ್ ಗಳಿಗೆ ಧ್ವನಿವರ್ಧಕ ಅಳವಡಿಕೆ ಮಾಡಲು ರಾಜ್ಯ ಸರಕಾರ ಅನುಮತಿ ನೀಡಿದೆ. ರಾಜ್ಯ ಸರಕಾರ ಧ್ವನಿ ವರ್ಧಕ ಬಳಕೆಗೆ ಸಂಬಂಧಿಸಿದಂತೆ ಅನುಮತಿ ಪಡೆಯುವ ಕುರಿತು ಅರ್ಜಿಯನ್ನು ಆಹ್ವಾನಿಸಿದ್ದು, ಈ ಪೈಕಿ ಅರ್ಜಿಗಳ ಪುನರ್ ಪರಿಶೀಲನೆಯನ್ನು ನಡೆಸಿ, ಹತ್ತು ಸಾವಿರಕ್ಕೂ ಅಧಿಕ ಕಡೆಗಳಲ್ಲಿ ಮೈಕ್ ಬಳಕೆಗೆ ಅನುಮತಿಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ವರ್ಷದ ಆರಂಭದಲ್ಲಿ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದ್ದವು . ಬೆಳಿಗ್ಗೆ ಆರು ಗಂಟೆಯ ಮೊದಲು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು ಎಂಬ ಸುಪ್ರೀಂ ಕೋರ್ಟ್‌ ನ ನಿರ್ದೇಶನವನ್ನು ಮಸೀದಿ ಹಾಗೂ ಚರ್ಚ್‌, ಮಂದಿರಗಳು ಉಲ್ಲಂಘಿಸಿದ್ದು, ಇದರ ಕುರಿತಾಗಿ ಬಜರಂಗದಳದಂತಹ ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಆರೋಪಿಸಿದ್ದವು

ಹಿಂದೂ ಸಂಘಟನೆಗಳ ಒತ್ತಡಕ್ಕೆ ಸಿಲುಕಿದ ಬಿಜೆಪಿ ಸರ್ಕಾರ ಎಲ್ಲಾ ಧ್ವನಿವರ್ಧಕ ಬಳಕೆದಾರರಿಗೆ ಲಿಖಿತ ಅನುಮತಿಯನ್ನು ಪಡೆಯುವಂತೆ ಸುತ್ತೋಲೆಯನ್ನು ಹೊರಡಿಸಿತ್ತು. ಇದರ ಕುರಿತಾದ ಆದೇಶವನ್ನು ನೀಡಲು ಒಂದು ಸಮಿತಿಯನ್ನು ಕೂಡ ರಚಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಮಸೀದಿ, ಮಂದಿರ ಹಾಗೂ ಚರ್ಚ್‌ ಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಅನುಮತಿಯನ್ನು ನೀಡಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಧ್ವನಿವರ್ಧಕ ಪರವಾನಗಿಗಳು ಇದ್ದು, ಇವುಗಳಲ್ಲಿ ದೇವಸ್ಥಾನ , ಚರ್ಚ್‌, ಮಸೀದಿ ಮತ್ತು ಹೋಟೆಲ್‌, ರೆಸ್ಟೋರೆಂಟ್ ಗಳು ಕೂಡ ಒಳಗೊಂಡಿವೆ.

ರಾಜ್ಯ ಸರ್ಕಾರವು ಧ್ವನಿವರ್ಧಕಗಳ ಬಳಕೆಗೆ ಕುರಿತಂತೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿದ ನಂತರ , ಎರಡು ವರ್ಷಗಳ ಅವಧಿಗೆ ಧ್ವನಿವರ್ಧಕಗಳ ಬಳಕೆಗೆ 450 ರೂ ಶುಲ್ಕ ವಿಧಿಸಲಾಗಿದೆ . ರಾಜ್ಯದಲ್ಲಿ 10,889 ಕ್ಕೂ ಹೆಚ್ಚು ಮಸೀದಿಗಳು , ಮಂದಿರಗಳು ಸೇರಿದಂತೆ ಚರ್ಚ್‌ ಗಳ 17,850 ಧ್ವನಿವರ್ಧಕಗಳ ಬಳಕೆಗೆ ಅನುಮತಿಯನ್ನು ನೀಡಿದೆ ಧ್ವನಿವರ್ಧಕ ಬಳಸಲು ನಿಯಮಗಳನ್ನು ಹೇರಿದ್ದು, ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಧ್ವನಿವರ್ಧಕಗಳನ್ನು ಮಾತ್ರ ಬಳಸಬೇಕು. ನಿಯಮಿತ ಡೆಸಿಬಲ್ ಮಾತ್ರ ಬಳಸಬೇಕು. ಡೆಸಿಬಲ್ ನಿಯಂತ್ರಿಸೋ ಉಪಕರಣ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಹಗಲಿನ ಹೊತ್ತಿನಲ್ಲಿ 70 ರಿಂದ 75 ಡೆಸಿಬಲ್ ಶಬ್ದದ ಮಟ್ಟವನ್ನು ಅನುಮತಿಸಿದೆ. ವಾಣಿಜ್ಯ ಪ್ರದೇಶಗಳಲ್ಲಿ ಹಗಲಿನಲ್ಲಿ 55 ರಿಂದ 65 ಡೆಸಿಬಲ್ ಶಬ್ದದ ಮಟ್ಟವನ್ನು ಅನುಮತಿಸಲಾಗಿದೆ. ವಸತಿ ವಲಯ ಪ್ರದೇಶಗಳಲ್ಲಿ, ಶಬ್ದದ ಮಟ್ಟವು ಹಗಲಿನಲ್ಲಿ 45 ರಿಂದ 55 ಡೆಸಿಬಲ್ ಬಳಸಬಹುದು. ಇದಲ್ಲದೆ, ಶಾಂತ ವಲಯದಲ್ಲಿ ಹಗಲಿನಲ್ಲಿ 40 ರಿಂದ 50 ಡೆಸಿಬಲ್ ಶಬ್ದವನ್ನು ಬಳಸಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ : Hair Straightening Product : ಹೇರ್‌ ಸ್ಟ್ರೈಟ್ನಿಂಗ್ ಮಾಡಿದ್ರೆ ಮಹಿಳೆಯರಿಗೆ ಗರ್ಭಗೋಶ ಕ್ಯಾನ್ಸರ್

ಇದನ್ನೂ ಓದಿ : (Diwali Bonus):ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಗೆ ದೀಪಾವಳಿ ಬಂಪರ್; ಮಾಸಿಕ 500 ರೂ.ಮೋಟಾರು ಭತ್ಯೆ ಘೋಷಣೆ

Karnataka government has allowed 10889 mosques to use loudspeakers

Comments are closed.