ನವದೆಹಲಿ : ಸೋನಿಯಾ ತಾಯಿಯ ಮಮತೆ ಪಕ್ಷವನ್ನ ಬಲಿ ಕೊಡ್ತಿದೆ. ಮಗ ರಾಹುಲ್ ಗಾಂಧಿ ಬಗ್ಗೆ ಸದಾ ಚಿಂತಿಸೋ ಸೋನಿಯಾ ಪಕ್ಷದ ಯುವ ನಾಯಕರನ್ನು ತುಳಿಯುತ್ತಿದ್ದಾರಾ ? ಹೀಗೊಂದು ಮಾತು ಕೇಳಿಬರುತ್ತಿದ್ದು, ಯುವ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ರಾಜೀನಾಮೆ ಈ ಮಾತನ್ನು ಮತ್ತೊಮ್ಮೆ ಶ್ರುತಪಡಿಸಿದೆ.

ಇಡೀ ದೇಶದಲ್ಲಿಯೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ಹೀನಾಯ ಸೋಲು ಕಾಣುತ್ತಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ನಡುಸುವಾಗಲೇ ಕಾಂಗ್ರೆಸ್ ಅಧಿಕಾರವನ್ನ ಕಳೆದುಕೊಂಡಿತ್ತು. ಇದೀಗ ಮಧ್ಯಪ್ರದೇಶದಲ್ಲಿಯೂ ಅಂತಹದ್ದೇ ಸ್ಥಿತಿ ನಿರ್ಮಾಣವಾಗ್ತಿದೆ. ಕಾಂಗ್ರೆಸ್ ನ ಇಂತಹ ದುಸ್ಥಿತಿಗೆ ಕಾರಣವಾಗ್ತೀರೋದು ಸೋನಿಯಾ ತಾಯಿಯ ಮಮತೆ. ಯುವನಾಯಕ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಟ್ಟ ಕಟ್ಟಲೇ ಬೇಕೆಂಬ ಹಠಕ್ಕೆ ಬಿದ್ದಿರೋ ಸೋನಿಯಾ ಮೇಡಂ, ಪಕ್ಷದ ಹಿರಿಯ, ಕಿರಿಯ ನಿಷ್ಠಾವಂತ ನಾಯಕರನ್ನೇ ಮೂಲೆಗೆ ತಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಅಧಿಕಾರಕ್ಕೆ ಬರೋದಕ್ಕೆ ಯಾರೆಲ್ಲಾ ಅಡ್ಡಿಯಾಗ್ತಿದ್ದಾರೋ ಅವರನ್ನೆಲ್ಲಾ ಬಲಿಕೊಡ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನವಾಗಿ ನಿಂತಿರೋದು ಜ್ಯೋತಿರಾದಿಯ್ಯ ಸಿಂಧಿಯಾ.

ಕಾಂಗ್ರೆಸ್ ಪಕ್ಷದಲ್ಲಿಯೇ ಕಿರಿಯ ಪ್ರಭಾವಿ ರಾಜಕಾರಣಿ ಅಂತಾ ಗುರುತಿಸಿಕೊಂಡಿರೋ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಕೊಡುಗೆ ಅಪಾರ. ಜ್ಯೋತಿರಾದಿತ್ಯ ಸಿಂಧಿಯಾ ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ ಮರಾಠ ಸಿಂಧಿಯಾ ರಾಜವಂಶಸ್ಥರಾಗಿರೋ ಜ್ಯೋತಿರಾದಿತ್ಯ ಸಿಂಧಿಯಾ ತಂದೆ ಮಾಧವ ರಾವ್ ಸಿಂಧಿಯಾ ಕೂಡ ಓರ್ವ ಪ್ರಭಾವಿ ರಾಜಕಾರಣಿ. ರಾಜನಾಗಿ ಮೆರೆದಿದ್ದ ಮಾಧವರಾವ್ ಸಿಂಧಿಯಾ 19971 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ರು. ತನ್ನ 26ನೇ ವಯಸ್ಸಿನಲ್ಲಿ ಗುಣ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ತದನಂತರದಲ್ಲಿ ಮಾಧವರಾವ್ ಸಿಂಧಿಯಾ ಸೋಲಿಲ್ಲದ ಸರದಾರನಂತೆ ಮೆರೆದಿದ್ದಾರೆ. ಕೇಂದ್ರ ಸಚಿವರಾಗಿರೋ ಮಾಧವರಾವ್ ಸಿಂಧಿಯಾ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡುವಲ್ಲಿಯೂ ಮಾಧವ್ ರಾವ್ ಸಿಂಧಿಯಾ ಸೇವೆ ಅಪಾರವಾದದು.

ಆದರೆ 2001ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಂಸದ ಮಾಧವರಾವ್ ಸಿಂಧಿಯಾ ಸಾವನ್ಪಪ್ಪಿದ್ದರು. ತಂದೆ ಸಾವನ್ನಪ್ಪುತ್ತಿದ್ದಂತೆಯೇ ರಾಜಕೀಯಕ್ಕೆ ಧುಮುಕಿದ್ದ ಜ್ಯೋತಿರಾಧಿತ್ಯ ಸಿಂಧಿಯಾ 2002ರಲ್ಲಿ ತಾನೆದುರಿಸಿದ ಮೊದಲ ಚುನಾವಣೆಯಲ್ಲಿಯೇ ಬಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿಯ ದೇಶರಾಜ್ ಸಿಂಗ್ ಯಾದವ್ ಅವರನ್ನು ಬರೋಬ್ಬರಿ 4,50,000 ಮತಗಳ ಅಂತರದಿಂದ ಸೋಲಿಸೋ ಮೂಲಕ ತನ್ನತ್ತ ತಾಕತ್ತನ್ನು ಪ್ರದರ್ಶಿಸಿದ್ದರು. ಸಂಸದರಾಗಿ ಜನಮೆಚ್ಚುಗೆಯ ಕಾರ್ಯವನ್ನು ಮಾಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ತಂದೆಯ ಹಾದಿಯಲ್ಲಿಯೇ ಮುನ್ನಡೆದಿದ್ದರು. 2004ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿಯೂ ಗುಂಡಾ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದರು. ಅತೀ ಕಿರಿಯ ವಯಸ್ಸಿನಲ್ಲಿ ಅಂದ್ರೆ 2007ರಲ್ಲಿ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರಾಗಿಯೂ ಸಿಂಧಿಯಾ ಆಯ್ಕೆಯಾಗಿದ್ದರು. ಕೇಂದ್ರ ಸಚಿವರಾಗಿ ಮಾಡಿದ ಕಾರ್ಯಗಳಿಂದಾಗಿ ಪಕ್ಷ ಕೂಡ ಸಿಂಧಿಯಾ ಅವರಿಗೆ 2007ರಲ್ಲಿ ಹೆಚ್ಚುವರಿ ಮಂತ್ರಿಯ ಹೊಣೆಗಾರಿಕೆಯನ್ನೂ ನೀಡಿತ್ತು. ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ರಾಜಕಾರಣದಲ್ಲಿ ಉತ್ತುಂಗಕ್ಕೇರೋ ಕನಸು ಕಂಡಿದ್ದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದರು. ಆದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುತ್ತಿದ್ದಂತೆಯೇ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಮೂಲೆಗೆ ಸರಿಸಲಾಗಿತ್ತು. ಒಂದೊಮ್ಮೆ ಸಿಂಧಿಯಾ ಮುಖ್ಯಮಂತ್ರಿಯಾದ್ರೆ ಮುಂದೊಂದು ದಿನ ತನ್ನ ಮಗ ರಾಹುಲ್ ಗಾಂಧಿಗೆ ತೊಡಕಾಗ್ತಾರೆ ಅನ್ನೋ ಕಾರಣಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ತುಳಿಯಲಾಯ್ತು ಅನ್ನೋ ಮಾತು ರಾಜಕೀಯ ಪಂಡಿತರ ಬಾಯಲ್ಲಿ ಕೇಳಿಬರ್ತಿದೆ. ಇದೇ ಕಾರಣಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆಯೋ ನಿರ್ಧಾರಕ್ಕೆ ಬಂದಿದ್ದು, ಸೋನಿಯಾ ಗಾಂಧಿ ಅವರಿಗೆ ಬರೆದಿರೋ ರಾಜೀನಾಮೆಯ ಪತ್ರದಲ್ಲಿಯೂ ಸಿಂಧಿಯಾ ನೋವಿನ ಮಾತುಗಳನ್ನು ಹೇಳಿದ್ದಾರೆ. ನಿಮ್ಮ ಪಕ್ಷದಲ್ಲಿ ತನಗೆ ಕೆಲಸ ಮಾಡೋದಕ್ಕೆ ಸಾಧ್ಯವಿಲ್ಲಾ ಅಂತಾ ಹೇಳಿಕೊಂಡಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದ ಸಿಂಧಿಯಾ ಅವರನ್ನು ಸೋನಿಯಾ ಕನಿಷ್ಠ ಉಪಮುಖ್ಯಮಂತ್ರಿಯನ್ನಾಗಿಯೂ ಮಾಡಲಿಲ್ಲ.

ಒಂದೆಡೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ರೆ, ಇನ್ನೊಂದೆಡೆ ರಾಜಸ್ಥಾನದಲ್ಲಿಯೂ ಸಚಿನ್ ಪೈಲಟ್ ಕಥೆ ಇದಕ್ಕಿಂತ ಹೊರತಾಗಿಲ್ಲ. ಸಚಿನ್ ಪೈಲೆಟ್ ಹೋರಾಡಿ ಉಪಮುಖ್ಯಮಂತ್ರಿಯಾದ್ರೂ ಇದನ್ನೆಲ್ಲಾ ಸೋನಿಯಾ ರಾಹುಲ್ ಗೆ ಮುಂದೊಂದು ದಿನ ಸಿಂಧ್ಯಾ, ಪೈಲೆಟ್ ಅಡ್ಡಗಾಲಾಗುತ್ತಾರೆಂಬ ಕಾರಣದಿಂದ ಮಾಡಲಿಲ್ಲಾ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಕೊನೆಗೂ ಸೋನಿಯಾ ಪಕ್ಷದ ತಾಯಿಯಾಗದೆ ಪುತ್ರನ ಭವಿಷ್ಯದ ಬಗ್ಗೆ ಚಿಂತಿಸುವ ತಾಯಿಯಾಗಿ ಇತಿಹಾಸದಲ್ಲಿ ಉಳಿಯುತ್ತಾರೆನ್ನುವ ಮಾತು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿದೆ.