ಭಾನುವಾರ, ಏಪ್ರಿಲ್ 27, 2025
HomeCrimeTamil Nadu : ಸೀರೆ ಹಂಚುವ ವೇಳೆ ಕಾಲ್ತುಳಿತ : 4 ಮಹಿಳೆಯರ ಸಾವು

Tamil Nadu : ಸೀರೆ ಹಂಚುವ ವೇಳೆ ಕಾಲ್ತುಳಿತ : 4 ಮಹಿಳೆಯರ ಸಾವು

- Advertisement -

ಚೆನ್ನೈ : ಸೀರೆ ವಿತರಣೆ ಕಾರ್ಯಕ್ರಮದ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ (Tamil Nadu) ತಿರುಪ್ಪತ್ತೂರಿನ ವಾಣಿಯಂಬಾಡಿ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದಾರೆ. ತೈಪೂಸಂ ಹಿನ್ನೆಲೆಯಲ್ಲಿ ಉಚಿತ ಪಂಚೆ ಮತ್ತು ಸೀರೆಗಳನ್ನು ವಿತರಿಸಲು ಟೋಕನ್‌ ನೀಡಲಾಗುತ್ತಿತ್ತು. ಈ ಟೋಕನ್‌ ಪಡೆಯುವ ವೇಳೆಯಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಈ ಘಟನೆ ಸಂಭವಿಸಿದೆ.

ತಿರುಪ್ಪತ್ತೂರಿನ ವಾಣಿಯಂಬಾಡಿಯಲ್ಲಿ ತೈಪೂಸಂ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಉಚಿತ ‘ವೇಷ್ಟಿ’ ಮತ್ತು ಸೀರೆಗಳ ಸಂಗ್ರಹಕ್ಕಾಗಿ ಟೋಕನ್‌ಗಳನ್ನು ಸ್ವೀಕರಿಸುತ್ತಿದ್ದರು. ಸುದ್ದಿ ತಿಳಿದು ಜನರು ಒಮ್ಮೆಲೆ ಜಮಾಯಿಸಿದ್ದಂತೆಯೇ ಕಾಲ್ತುಳಿತ ಉಂಟಾಗಿದೆ. ಘಟನೆ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ತಿರುಪತ್ತೂರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಕಾರ್ಯಕ್ರಮವನ್ನು ಆಯೋಜಿಸಲು ಯಾವುದೇ ಅನುಮತಿ ನೀಡಲಾಗಿಲ್ಲ ಮತ್ತು ಸಂಸ್ಥೆಯು ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. ಈ ಕಾರ್ಯಕ್ರಮ ನಡೆಸಲು ಅನುಮತಿ ನೀಡಿಲ್ಲ. ತನಿಖೆ ನಡೆಯುತ್ತಿದೆ ಎಂದು ಎಸ್ಪಿ ತಿರುಪತ್ತೂರ್ ತಿಳಿಸಿದ್ದಾರೆ.

ಇದನ್ನೂ ಓದಿ : Bengaluru Hit and run: ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ: ಎಮ್‌ಬಿಎ ವಿದ್ಯಾರ್ಥಿನಿ ಗಂಭೀರ ಗಾಯ

ಇದನ್ನೂ ಓದಿ : Narthaki bar assault case: ನರ್ತಕಿ ಬಾರ್ ಹಲ್ಲೆ ಪ್ರಕರಣ : ವಿಡಿಯೋ ವೈರಲ್, ಇನ್ನಿಬ್ಬರು ಆರೋಪಿಗಳ ವಿರುದ್ದ ದಾಖಲಾಗಿಲ್ಲ ಪ್ರಕರಣ ?

ದಟ್ಟ ಮಂಜಿನಿಂದಾಗಿ ಟ್ರಕ್‌-ಬಸ್ ಢಿಕ್ಕಿ: 18 ಮಂದಿಗೆ ಗಾಯ

ಶಹಜಹಾನ್‌ಪುರ: ರಸ್ತೆಯಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಕಡಿಮೆ ಗೋಚರತೆಯ ಕಾರಣ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಟ್ರಕ್‌ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಚಾಲಕರು ಹಾಗೂ ಬಸ್‌ ನ ಪ್ರಯಾಣಿಕರು ಸೇರಿ 18 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಶಹಜಾನ್‌ ಪುರದಲ್ಲಿ ನಡೆದಿದೆ.

ಷಹಜಾನ್‌ಪುರದಿಂದ ಪಾಲಿಯಾಗೆ ಹೋಗುತ್ತಿದ್ದ ಬಸ್‌ ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೇ ಇದ್ದ ಕಾರಣ ಟ್ರಕ್‌ ಗೆ ಢಿಕ್ಕಿ ಹೊಡೆದಿದೆ. ಈ ಪ್ರದೇಶದಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಕಡಿಮೆ ಗೋಚರತೆಯಿಂದಾಗಿ ಘರ್ಷಣೆ ಸಂಭವಿಸಿದೆ ಎಂದು ಅಧಿಕಾರಿ ಹೇಳಿದರು. ಪರಿಣಾಮ ಬಸ್‌ ಪ್ರಯಾಣಿಕರು ಹಾಗೂ ಚಾಲಕರು ಸೇರಿದಂತೆ 18 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖುತಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ತಿಳಿಸಿದ್ದಾರೆ. ಬಸ್‌ನ ಪ್ರಯಾಣಿಕರು ಮತ್ತು ವಾಹನಗಳ ಚಾಲಕರು ಸೇರಿದಂತೆ 18 ಜನರು ಗಾಯಗೊಂಡಿದ್ದು, ಅವರನ್ನು ಇಲ್ಲಿನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4 Women Killed In Stampede During Saree Distribution Event In Tamil Nadu

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular