ಉತ್ತರಪ್ರದೇಶ : ಅತ್ತೆಯ ಮೇಲಿನ ಕೋಪದಲ್ಲಿ ಸೊಸೆಯೋರ್ವಳು ಟೀ ನಲ್ಲಿ ವಿಷ ಬೆರೆಸಿ ಮನೆಯವರಿಗೆ ಕುಡಿಸಿರುವ ಘಟನೆ ಉತ್ತರ ಪ್ರದೇಶದ ಬಹ್ರೀಚ್‌ನ ಮಚಿಯಾಹಿ ಗ್ರಾಮದಲ್ಲಿ ನಡೆದಿದೆ.
ಆರೋಪಿ ಮಹಿಳೆ ಅನಿತಾ ಎಂದು ಗುರುತಿಸಲಾಗಿದೆ. ಚಹಾ ಕುಡಿದು ಅತ್ತಿಗೆಯ 18 ತಿಂಗಳ ಮಗು ಶಿವನಾಥ್ ಸಾವನ್ನಪ್ಪಿದೆ. ಉಳಿದಂತೆ ಮಾವ ಪಂಚಮ್ ಜೈಸ್ವಾಲ್, ಸೋದರ ಮಾವ ಜಿತೇಂದ್ರ, ಸೊಸೆ ಶಿವಾನಿ ಮತ್ತು ಸೃಷ್ಟಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಅನಿತಾ ಜೈಸ್ವಾಲ್ ಅವರ ಮಗನ ಜೊತೆಗೆ ಮದುವೆಯಾಗಿತ್ತು. ಆದರೆ ಮನೆಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಅತ್ತೆ, ಸೊಸೆಯ ನಡುವೆ ಜಗಳವಾಗುತ್ತಲೇ ಇತ್ತು. ಇದೇ ಕಾರಣಕ್ಕೆ ಅನಿತಾ ಹಾಗೂ ಆಕೆಯ ಗಂಡ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ಅನಿತಾ ತನ್ನ ಗಂಡನ ಮನೆಗೆ ಬಂದು ಎಲ್ಲರೊಂದಿಗೆ ಚೆನ್ನಾಯೇ ಇರುವಂತೆ ನಟಿಸಿದ್ದಾಳೆ.
ಮೊದಲೇ ಪ್ಲ್ಯಾನ್ ಮಾಡಿಕೊಂಡಂತೆ ಅನಿತಾ, ಮನೆಯವರಿಗೆ ಚಹಾ ಮಾಡಿಕೊಟ್ಟಿದ್ದಾಳೆ. ಆದರೆ ಚಹಾದಲ್ಲಿ ಅನಿತಾ ವಿಷ ಬೆರೆಸಿರುವುದು ಅರಿವಿಗೆ ಬಾರದೆ ಕುಡಿದಿದ್ದಾರೆ. ಅಲ್ಲದೇ ಮನೆಯ ಮಗುವಿಗೂ ಚಹಾ ಕುಡಿಸಿದ್ದು, ಮಗು ಸಾವನ್ನಪ್ಪಿದೆ. ನಂತರದಲ್ಲಿ ಮನೆಯಲ್ಲಿದ್ದವರು ಅಸ್ವಸ್ಥಗೊಳ್ಳುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದೀಗ ಜೈಸ್ವಾಲ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅನಿತಾ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಿನಲ್ಲಿ ಅತ್ತೆ ಸೊಸೆಯ ಜಗಳದಲ್ಲಿ ಸೊಸೆ ಮನೆಯವರಿಗೆ ವಿಷ ಕುಡಿಸಿರುವುದು ಮಾತ್ರ ದುರಂತವೇ ಸರಿ.
ಇದನ್ನೂ ಓದಿ : ದೇವರ ದರ್ಶನಕ್ಕೆ ಬಂದವ ಈಜಲು ನಾಲೆಗೆ ಇಳಿದ : ಸ್ನೇಹಿತನ ರಕ್ಷಣೆಗೆ ಇಳಿದ ಮೂವರು ನೀರು ಪಾಲು
ಇದನ್ನೂ ಓದಿ : 12 ರ ಬಾಲಕಿ ಮೇಲೆ ಅಪ್ರಾಪ್ತರಿಂದ ಅತ್ಯಾಚಾರ: ಸಂತ್ರಸ್ಥೆಗೆ ಮಗು ಜನಿಸಿದ ಬಳಿಕ ಬಹಿರಂಗವಾಯ್ತು ಕೃತ್ಯ