ತೆಲಂಗಾಣ : ಸಾವು ಅನ್ನೋದು ಹೇಗೆ ಬರುತ್ತೆ ಅಂತಾ ಯಾರಿಗೂ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಕೆಲವೊಂದು ಘಟನೆಗಳು ಮನಸಿಗೆ ಘಾಸಿ ಮಾಡುತ್ತದೆ. ಅಂತೆಯೇ ನಾವಿಂದು ಹೇಳ ಹೊರಟಿರೋ ಸ್ಟೋರಿ ನಿಜಕ್ಕೂ ಹೃದಯ ವಿದ್ರಾಹಕ. ವ್ಯಕ್ತಿಯೋರ್ವರು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಚಿಕಿತ್ಸೆಯನ್ನು ನೀಡಲು ಸಿದ್ದರಾಗಿದ್ದರು. ಆದರೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಹೃದಯಾಘಾತವಾಗಿ (Heart Attack) ಸಾವನ್ನಪ್ಪಿದ್ದಾರೆ. ಅಲ್ಲದೇ ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿ ಕೂಡ ಏಕಕಾಲದಲ್ಲಿ ಸಾವನ್ನಪ್ಪಿದ ಹೃದಯ ವಿದ್ರಾಹಕ ಘಟನೆ ತೆಲಂಗಾಣ ಕಾಮರೆಡ್ಡಿ ಜಿಲ್ಲೆ ನಡೆದಿದೆ.
ಡಾ.ಲಕ್ಷ್ಮಣ್ ಹಾಗೂ ಗುಜ್ಜುಲ್‌ನ ಗಣ್ಯಾ ನಾಯಕ್ (52 ವರ್ಷ ) ಎಂಬವರೇ ಸಾವನ್ನಪ್ಪಿದ ದುರ್ದೈವಿಗಳು. ಇಂದು ಬೆಳಗ್ಗೆ ಗಣ್ಯಾ ನಾಯಕ್ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಗಾಂಧಾರಿಯ ಎಸ್.ವಿ. ಶ್ರೀಜಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆಯಲ್ಲಿ ಡಾ.ಲಕ್ಷ್ಮಣ್ ಅವರು ಗಣ್ಯ ನಾಯಕ್ ಅವರನ್ನು ಪರೀಕ್ಷಿಸಿ ಚಿಕಿತ್ಸೆ ಆರಂಭಿಸಿದರು.
ಐಸಿಯುನಲ್ಲಿ ಡಾ. ಲಕ್ಷಣ್ ಅವರು ಚಿಕಿತ್ಸೆಯನ್ನು ನೀಡುತ್ತಿದ್ದರು. ಈ ವೇಳೆಯಲ್ಲಿ ವೈದ್ಯರಿಗೂ ಹೃದಯಾಘಾತವಾಗಿತ್ತು. ಅಲ್ಲದೇ ಸ್ವಲ್ಪ ಹೊತ್ತಲ್ಲೇ ವೈದ್ಯರು ಸಾವನ್ನಪ್ಪಿದ್ದಾರೆ, ಈ ವೇಳೆಯಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಗಣ್ಯಾ ನಾಯಕ್ ಅವರು ಕೂಡ ಬಾರದ ಲೋಕ್ಕೆ ಪಯಣಿಸಿದ್ದಾರೆ. ವೈದ್ಯರು ಹಾಗೂ ರೋಗಿ ಏಕಕಾಲದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ಇದನ್ನೂ ಓದಿ : School Close : ರಾಜ್ಯದಲ್ಲಿ ಶಾಲೆ, ಕಾಲೇಜುಗಳು ಬಂದ್ : ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ
ಇದನ್ನೂ ಓದಿ : ABCD ಬರೆಯಲು ಬಾರದ ಶಿಕ್ಷಕ, ಶಿಕ್ಷಕಿ ಸಸ್ಪೆಂಡ್ : ವಿಡಿಯೋ ವೈರಲ್
( Doctor and patient dies of a heart attack at telangana)