Fortuner – KSRCT BUS ನಡುವೆ ಭೀಕರ ಅಪಘಾತ : ನಾಲ್ವರು ದುರ್ಮರಣ

ವಿಜಯಪುರ : ನಿಶ್ಚಿತಾರ್ಥ ಮುಗಿಸಿ ವಾಪಾಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಫಾರ್ಚೂನರ್‌ ಕಾರು (Fortuner – KSRCT BUS) ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರ – ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ನಡೆದಿದೆ. ಮೃತಪಟ್ಟವರನ್ನು ಮಹಾರಾಷ್ಟ್ರದ ನಾಂದೇಡ್‌ ಮೂಲದವರು ಎಂದು ತಿಳಿದು ಬಂದಿದೆ.

KSRTC BUS ನಿಶ್ಚಿತಾರ್ಥ ಮುಗಿಸಿ ವಾಪಾಸಾಗುತ್ತಿತ್ತು, ಈ ವೇಳೆಯಲ್ಲಿ ನರಗುಂದದಲ್ಲಿ ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆಯಲ್ಲಿ ಫಾರ್ಚೂನರ್‌ ಕಾರು ಬಸ್ಸಿಗೆ ಢಿಕ್ಕಿ ಹೊಡೆದಿದೆ. ಫಾರ್ಚೂನರ್‌ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಫಾರ್ಚೂನರ್‌ ಕಾರಿನ ಚಾಲಕನ ಅಜಾಗರೂಕತೆಯ ಚಾಲನೆಯಿಂದಲೇ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ವಿಜಯಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಸ್ಮಶಾನಕ್ಕೆ ಹೊರಟವರು ಮಸಣ ಸೇರಿದ್ರು : ಭೀಕರ ಅಪಘಾತಕ್ಕೆ18 ಬಲಿ

ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಬಗ್ಡಾದಿಂದ ನವದ್ವೀಪ ಸ್ಮಶಾನದ ಕಡೆಗೆ ಪಾರ್ಥಿವ ಶರೀರವನ್ನು ಹೊತ್ತು ಶವಸಂಸ್ಕಾರಕ್ಕೆ ಸಾಗಿಸುವ ವಾಹನ ಹಂಸಖಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಡಿಯಾದ ಫುಲ್ಬರಿ ಪ್ರದೇಶದಲ್ಲಿ ರಸ್ತೆಯಲ್ಲಿ ನಿಂತಿತ್ತು. ವೇಗವಾಗಿ ಬಂದ ಟ್ರಕ್‌ ಶವ ಸಾಗಾಟ ಮಾಡುವ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದಾಗಿ ವಾಹನದಲ್ಲಿದ್ದ ಇಪತ್ತಕ್ಕೂ ಅಧಿಕ ಜನರ ಪೈಕಿ ಸ್ಥಳದಲ್ಲಿಯೇ 18 ಜನರು ಸಾವನ್ನಪ್ಪಿದ್ದರೆ, ಐದು ಮಂದಿ ಗಾಯಗೊಂಡಿದ್ದು. ಗಾಯಾಳುಗಳನ್ನು ಶಕ್ತಿನಗರ ಜಿಲ್ಲಾಸ್ಪತ್ತೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗು ತ್ತಿದೆ. ಪಶ್ಚಿಮ ಬಂಗಾಲದಲ್ಲಿ ರಾತ್ರಿ ದಟ್ಟವಾದ ಮಂಜು ಆವರಿಸಿತ್ತು. ಹೀಗಾಗಿ ಹೆದ್ದಾರಿಯಲ್ಲಿ ಚಾಲನೆ ಮಾಡುವ ವೇಳೆಯಲ್ಲಿ ರಸ್ತೆ ಸರಿಯಾಗಿ ಗೋಚರವಾಗುತ್ತಿರಲಿಲ್ಲ. ಅಲ್ಲದೇ ಟ್ರಕ್‌ ಚಾಲಕ ಅತೀ ವೇಗದಿಂದ ವಾಹನವನ್ನು ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಭೀಕರ ರಸ್ತೆ ಅಪಘಾತದ ಬೆನ್ನಲ್ಲೇ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪೊಲೀಸ್‌ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಪಘಾತ ನಡೆಯುತ್ತಲೇ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಇನ್ನು ಘಟನೆಯ ಬೆನ್ನಲ್ಲೇ ರಾಜ್ಯಪಾಲ ಜಗದೀಪ್ ಧಂಖರ್ ಸಂತಾಪ ಸೂಚಿಸಿದ್ದಾರೆ. ಇನ್ನು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹಾಗೂ ಗಾಯಳುಗಳಿಗೆ ಪರಿಹಾರ ನೀಡುವಂತೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಒತ್ತಾಯಿಸಿದ್ದಾರೆ.

ಇನ್ನೊಂದೆಡೆಯಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಲಾರಿ ಪಲ್ಟಿಯಾಗಿ 4 ಮಂದಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯಲ್ಲಿ ಬಂಡೆಗಳನ್ನು ತುಂಬಿದ ಲಾರಿಯೊಂದು ಪಲ್ಟಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಉರುಳಿಬಿದ್ದ ಲಾರಿಯನ್ನು ಕ್ರೇನ್‌ ಮೂಲಕ ಮೇಲಕ್ಕೆತ್ತ ಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಏಳು ಮಂದಿಯನ್ನು ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸುವ ಕಾರ್ಯವನ್ನು ಮಾಡಲಾಗಿದೆ.

ಇದನ್ನೂ ಓದಿ : ಓಮಿಕ್ರಾನ್‌ ಭೀತಿ : ಡಿ.15ರ ನಂತರ ಕರ್ನಾಟಕ ಲಾಕ್‌ಡೌನ್‌ !

ಇದನ್ನೂ ಓದಿ : Heart Attack : ಹೃದಯಾಘಾತವಾದ ರೋಗಿಗೆ ಚಿಕಿತ್ಸೆ ನೀಡುವ ವೇಳೆ ವೈದ್ಯ ಹೃದಯಾಘಾತದಿಂದ ಸಾವು !

(Fortuner Car and KSRCT BUS deadly accident four dead in Vijayapura)

Comments are closed.