ಭಾನುವಾರ, ಏಪ್ರಿಲ್ 27, 2025
HomeCrimeTirupati Couple Suicide : ತಿರುಪತಿಯ ವಸತಿಗೃಹದಲ್ಲಿ ಪ್ರೇಮಿಗಳ ಆತ್ಮಹತ್ಯೆ

Tirupati Couple Suicide : ತಿರುಪತಿಯ ವಸತಿಗೃಹದಲ್ಲಿ ಪ್ರೇಮಿಗಳ ಆತ್ಮಹತ್ಯೆ

- Advertisement -

ತಿರುಪತಿ: (Tirupati Couple Suicide )ಪ್ರೇಮಿಗಳಿಬ್ಬರು ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದ ಬಳಿ ಇರುವ ಖಾಸಗಿ ಲಾಡ್ಜ್‌ನಲ್ಲಿ ನಡೆದಿದೆ. ಪೂರ್ವ ಗೋದಾವರಿ ಜಿಲ್ಲೆಯ ಕೊವ್ವೂರು ನಿವಾಸಿ ಅನುಷಾ ಮತ್ತು ಹೈದರಾಬಾದ್ ನಿವಾಸಿ ಕೃಷ್ಣ ರಾವ್ ಎಂಬರೇ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.

ದಂಪತಿ ಲಾಡ್ಜ್ ನಲ್ಲಿ ರೂಂ ಪಡೆದುಕೊಂಡಿದ್ದರು. ಆದರೆ ಮರುದಿನ ಬೆಳಗ್ಗೆ ಬಾಗಿಲು ತೆರೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿಗಳು ಹಲವು ಬಾರಿ ಬಾಗಿಲು ಬಡಿದಿದ್ದರೂ ಕೂಡ ಬಾಗಿಲು ತರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ದೂರು ನೀಇಡದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಕೊಠಡಿಯೊಳಗಿನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅನುಷಾ ಹಾಗೂ ಕೃಷ್ಣರಾವ್‌ ಪ್ರೀತಿಸುತ್ತಿದ್ದರು. ಆದರೆ ಅನುಷಾ ಮನೆಯವರಿಗೆ ಇಬ್ಬರು ಮದುವೆ ಆಗುವುದು ಇಷ್ಟ ಇರಲಿಲ್ಲ. ಹೀಗಾಗಿ ಕಳೆದ ನಾ ಲ್ಕು ತಿಂಗಳ ಹಿಂದೆ ಅನುಷಾಗೆ ಬೇರೊಬ್ಬ ವ್ಯಕ್ತಿಯ ಜೊತೆಗೆ ಮದುವೆ ಮಾಡಿಸಿದ್ದರು. ಮದುವೆ ಆದ ನಂತರವೂ ಅನುಷಾ ತನ್ನ ಪ್ರೇಮಿಯನ್ನು ಮರೆಯಲಿಲ್ಲ. ಹೀಗಾಗಿಯೇ ಅನುಷಾ ತನ್ನ ಪ್ರೇಮಿ ಕೃಷ್ಣರಾವ್ ಜೊತೆಗೆ ಲಾಡ್ಜ್ ಗೆ ಬಂದಿದ್ದಳು. ಇಬ್ಬರ ಮದುವೆಗೆ ಮನೆಯವರ ವಿರೋಧದ ಕಾರಣದಿಂದಲೇ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅನುಷಾ ಪೋಷಕರು ಇತ್ತೀಚಿಗಷ್ಟೇ ಮಗಳು ನಾಪತ್ತೆಯಾಗಿರುವ ಕುರಿತು ಕೊವ್ವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇದೀಗ ಅನುಷಾ ಸಾವನ್ನಪ್ಪಿರುವ ಕುರಿತು ತಿರುಪತಿ ಪೊಲೀಸರು ಖಚಿತ ಪಡಿಸಿದ್ದಾರೆ. ಇಬ್ಬರ ಶವಗಳ ಮರಣೋತ್ತರ ಕಾರ್ಯವನ್ನು ನಡೆಸಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ : African Swine Fever : ಆಫ್ರಿಕನ್ ಜ್ವರ 85 ಹಂದಿಗಳ ಸಾವು : ಮಂಗಳೂರಲ್ಲಿ ಅಲರ್ಟ್‌

ಇದನ್ನೂ ಓದಿ : Accident Case : ಟ್ರ್ಯಾಕ್ಟರ್‌ ಟ್ರಾಲಿ ಪಲ್ಟಿ : 3 ಸಾವು 25 ಮಂದಿಗೆ ಗಾಯ

ಇದನ್ನೂ ಓದಿ : Crime News : ಹೆಂಡತಿಗೆ ರೀಲ್ಸ್‌ ಹುಚ್ಚು : ರೊಚ್ಚಿಗೆದ್ದ ಪತಿ ಪತ್ನಿಯನ್ನೇ ಕೊಂದ

Tirupati Couple Suicide people dead Body found lodge in Tirupati

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular