Student suicide : ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಹೊರಹಾಕಿದ್ದ ಶಿಕ್ಷಕರು : 13 ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು : (Student suicide)ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಕಾರಣ ಕ್ಲಾಸ್‌ ರೂಮಿನಿಂದ ಶಿಕ್ಷಕರು ಹೊರ ಹಾಕಿದ್ದಕ್ಕೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ 13 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ(Student suicide) ಬೆಂಗಳೂರಲ್ಲಿ ನಡೆದಿದೆ. ಮೂಹಿನ್‌ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಮೋಹಿನ್‌ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು , ಮಂಗಳವಾರ ಶಾಲೆಯಲ್ಲಿ ಮಧ್ಯಂತರ ಪರೀಕ್ಷೆಗಳು ನಡೆಯುತ್ತಿದ್ದವು. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ನಕಲಿ ಮಾಡಿ ಶಿಕ್ಷಕರ ಬಳಿಯಲ್ಲಿ ಸಿಕ್ಕಿ ಬಿದ್ದಿದ್ದಾನೆ . ಶಿಕ್ಷಕರು ಆತನನ್ನು ಬೈದು ತರಗತಿಯಿಂದ ಹೊರ ಹಾಕಿದ್ದಾರೆ . ಇದರಿಂದ ನೊಂದ ಮೋಹಿನ್‌ ಶಾಲೆಯಿಂದ ಹೊರ ಬಂದು ತನ್ನ ಮನೆಯ ಎದುರಿನ ಅಪಾರ್ಟ್‌ ಮೆಂಟ್‌(ಬೆಂಗಳೂರಿನ ನಾಗವಾರ ಬಳಿಯ ಆರ್‌. ಆರ್‌.ಸಿಗ್ನೇಚರ್‌ ಅಪಾರ್ಟ್ ಮೆಂಟ್‌) ನ 13ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ . ಆತನ ಮೃತದೇಹವನ್ನು ಅಂಬೇಡ್ಕರ್‌ ಆಸ್ಪತ್ರೆಗೆ ಸಾಗಿಸಲಾಗಿದೆ .

ಆರ್‌.ಆರ್‌.ಸಿಗ್ನೇಚರ್‌ ಅಪಾರ್ಟ್ಮೆಂಟ್‌ ಒಳಗೆ ಅಪರಿಚಿತರಿಗೆ ಪ್ರವೇಶ ನೀಡುವುದಿಲ್ಲ ಆದರೆ ಮೋಹಿನ್‌ ಹೇಗೆ ಒಳಗೆ ಹೋದ ಎನ್ನುವುದರ ಬಗ್ಗೆ ಪೋಲೀಸರಿಗೆ ಪ್ರಶ್ನೆಯಾಗಿದ್ದು , ಈ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ . ಮೃತ ಮೋಹಿನ್‌ ಮಹಮ್ಮದ್‌ ನೂರ್‌ ಹಾಗೂ ನೋಹೆರಾ ದಂಪತಿಯ ಒಬ್ಬನೇ ಮಗನಾಗಿದ್ದು, ಆತನ ಸಾವಿನ ಕುರಿತು ಸಂಪಿಗೆಹಳ್ಳಿ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Tirupati Couple Suicide : ತಿರುಪತಿಯ ವಸತಿಗೃಹದಲ್ಲಿ ಪ್ರೇಮಿಗಳ ಆತ್ಮಹತ್ಯೆ

ಇದನ್ನೂ ಓದಿ : Accident Case : ಟ್ರ್ಯಾಕ್ಟರ್‌ ಟ್ರಾಲಿ ಪಲ್ಟಿ : 3 ಸಾವು 25 ಮಂದಿಗೆ ಗಾಯ

ಮೋಹಿನ್‌ ಕಟ್ಟಡದಿಂದ ಹಾರುವ ದೃಶ್ಯ ಸ್ಥಳೀಯರ ಮೊಬೈಲ್‌ ನಲ್ಲಿ ಸೆರೆಯಾಗಿದ್ದು , ದೃಶ್ಯವನ್ನು ಸೆರೆ ಹಿಡಿದ ವ್ಯಕ್ತಿ ತುಂಬಾ ದೂರದಲ್ಲಿದ್ದ ಕಾರಣ ಅವರಿಂದ ಏನನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ .

ಇದನ್ನೂ ಓದಿ : Crime News : ಹೆಂಡತಿಗೆ ರೀಲ್ಸ್‌ ಹುಚ್ಚು : ರೊಚ್ಚಿಗೆದ್ದ ಪತಿ ಪತ್ನಿಯನ್ನೇ ಕೊಂದ

ಈ ಪ್ರಕರಣದ ಕುರಿತು ಮೃತ ಮೋಹಿನ್‌ ತಾಯಿ ನೂರ್‌ ಮಾತನಾಡಿದ್ದು , “ನಮಗೆ ಮೋಹಿನ್‌ ಒಬ್ಬನೇ ಮಗ . ಬೆಳಿಗ್ಗೆ 11:00 ಗಂಟೆ ಹೊತ್ತಿಗೆ ಶಾಲೆಯಿಂದ ಹೊರಗೆ ಬಂದಿದ್ದಾನೆ . ಅದರ ನಂತರ ಶಾಲೆಯ ಆಡಳಿತ ಮಂಡಳಿಯಿಂದ ನಮಗೆ ಕರೆ ಬಂದಿತ್ತು. ಅದಾದ ಮೇಲೆ ನಮ್ಮ ಮಗ ಅಲ್ಲಿಂದ ಹೊರಗೆ ಹೋಗಿದ್ದಾನೆ ಎಂದು ತಿಳಿಯಿತು . ನಾವು ಎಲ್ಲಾ ಕಡೆ ಆತನನ್ನು ಹುಡುಕಿದ್ದೀವಿ . ಆದರೆ ಎಲ್ಲೂ ಸಿಗಲಿಲ್ಲ . ನಂತರ ನನ್ನ ಮಗ ಅಪಾರ್ಟ್ ಮೆಂಟ್‌ ನಿಂದ ಬಿದ್ದಿದ್ದಾನೆ ಎಂದು ತಿಳಿಯಿತು.” ಎಂದು ಹೇಳಿದ್ದಾರೆ

(Student suicide) A student studying in class 10 committed suicide by jumping from the 13th floor after being thrown out of the classroom by the teacher because he was copying in the exam. Mohin is the student who committed suicide.

Comments are closed.