Turkey earthquake: ಭೂಕಂಪಕಕ್ಕೆ ನಲುಗಿದ ಟರ್ಕಿಗೆ ಭಾರತದಿಂದ ಸಹಾಯ ಹಸ್ತ: ಪ್ರಧಾನಿ ಮೋದಿ

ಬೆಂಗಳೂರು: (Turkey earthquake) ಸಿಲಿಕಾನ್‌ ಸಿಟಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭೂಕಂಪಕಕ್ಕೆ ನಲುಗಿದ ಟರ್ಕಿಗೆ ಎಲ್ಲಾ ರೀತಿಯ ಸಹಾಯಹಸ್ತವನ್ನು ನೀಡುವುದಾಗಿ ಪ್ರಧಾನಿ ಮೋದಿ ಅವರು ತಿಳಿಸಿದ್ದು, ಭಾರತವು ಶೋಧ ರಕ್ಷಣಾ ತಂಡಗಳು ಹಾಗೂ ವೈದ್ಯಕೀಯ ಸಹಾಯವನ್ನು ಕಳುಹಿಸುವುದಾಗಿ ಮೋದಿ ಅವರು ಹೇಳಿದ್ದಾರೆ.

ಎನ್‌ ಡಿ ಆರ್‌ ಎಫ್‌ ಹಾಗೂ ವೈದ್ಯಕೀಯ ತಂಡಗಳ ಶೋಧ ಹಾಗೂ ಪಾರುಗಾಣಿಕಾ ತಂಡಗಳು ಹಾಗೂ ಪರಿಹಾರ ಸಾಮಾಗ್ರಿಗಳನ್ನು ತಕ್ಷಣವೇ ರವಾನಿಸಲಾಗುವುದು. ಎನ್‌ ಡಿ ಆರ್‌ ಎಫ್‌ ನ ನೂರು ಸಿಬ್ಬಂದಿ, ವಿಶೇಷವಾಗಿ ತರಬೇತಿ ಪಡೆದ ಶ್ವಾನದಳಗಳು, ಅಗತ್ಯ ಸಲಕರಣೆಗಳನ್ನು ಒಳಗೊಂಡ ಎರಡು ತಂಡಗಳು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ ಭೂಕಂಪ ಪೀಡಿತ ಪ್ರದೇಶಕ್ಕೆ ಹಾರಲು ಸಿದ್ದವಾಗಿದೆ ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.

ಅಗತ್ಯ ಔಷದಿಗಳೊಂದಿಗೆ ತರಬೇತಿ ಪಡೆದ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ವೈದ್ಯಕೀಯ ತಂಡಗಳನ್ನು ಸಹ ಸಿದ್ದಪಡಿಸಲಾಗುತ್ತಿದೆ. ಟರ್ಕಿ ಸರಕಾರ ಮತ್ತು ಅಂಕಾರದಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾಂಬುಲ್‌ ನಲ್ಲಿರುವ ಕಾನ್ಸುಲೇಟ್‌ ಜನರಲ್‌ ಕಚೇರಿಯ ಸಮನ್ವಯದೊಂದಿಗೆ ಪರಿಹಾರ ಸಾಮಾಗ್ರಿಗಳನ್ನು ರವಾನಿಸಲಾಗುವುದು.

ಇದನ್ನೂ ಓದಿ : Infosys Layoffs : ಇನ್ಫೋಸಿಸ್‌ನಲ್ಲೂ ಉದ್ಯೋಗ ಕಡಿತ : 6 ಸಾವಿರ ಹೊಸ ಉದ್ಯೋಗಿಗಳ ವಜಾ

ಇದನ್ನೂ ಓದಿ : Govt bus-van accident: ಸರ್ಕಾರಿ ಬಸ್-ವ್ಯಾನ್ ಢಿಕ್ಕಿ: ಒಂದೇ ಕುಟುಂಬದ ಮೂವರು ಸಾವು

ದೇಶದ ದಕ್ಷಿಣ ಮತ್ತು ಉತ್ತರ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುಮಾರು 34 ಕಟ್ಟಡಗಳು ಕುಸಿದಿವೆ. ಪರಿಣಾಮ ಕಟ್ಟಡದ ಅವಶೇಷದಡಿಯಲ್ಲಿ ಸಿಲುಕಿ ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‌ನಿಂದ ಸುಮಾರು 33 ಕಿಲೋಮೀಟರ್ (20 ಮೈಲಿ) ದೂರದಲ್ಲಿ ಭೂಕಂಪನ ಸಂಭವಿಸಿರುವುದಾಗಿ ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ಇದನ್ನೂ ಓದಿ : ಪೋಸ್ಟ್ ಆಫೀಸ್ ಗ್ರಾಹಕರಿಗೆ ಗುಡ್‌ನ್ಯೂಸ್‌ : ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 8875 ರೂ.

ಇನ್ನೂ ಟರ್ಕಿಯಲ್ಲಿ ಆಗುತ್ತಿರುವ ಪ್ರಾಣಹಾನಿ ಬಗ್ಗೆ ಪ್ರಧಾನಿ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಟರ್ಕಿಯ ಜನರೊಂದಿಗೆ ಭಾರತವು ಒಗ್ಗಟ್ಟಿನಿಂದ ನಿಂತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಿದೆ ಎಂದೂ ಅವರು ಹೇಳಿದ್ದಾರೆ.

Turkey earthquake: India’s helping hand for earthquake-hit Turkey: PM Modi

Comments are closed.