ದೆಹಲಿ : PFI : ದೇಶದ್ರೋಹಿ ಚಟುವಟಿಕೆಗಳನ್ನು ನಡೆಸಲು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಹೊಂಚು ಹಾಕುತ್ತಿದೆ ಎಂಬ ವಿಚಾರ ಬಯಲಾಗುತ್ತಿದ್ದಂತೆಯೇ ದೇಶಾದ್ಯಂತ ಕೇಂದ್ರ ಸರ್ಕಾರ ಐದು ವರ್ಷಗಳ ಪಿಎಫ್ಐಯನ್ನು ನಿಷೇಧಿಸಿದ್ದು ಈ ಘೋಷಣೆ ನಡೆದು ಒಂದು ದಿನಗಳ ನಂತರ ಟ್ವಿಟರ್ ಖಾತೆಯನ್ನು ತಡೆ ಹಿಡಿಯಲಾಗಿದೆ. ಇದರ ಜೊತೆತಲ್ಲಿ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಅಧಿಕೃತ ಖಾತೆಗಳೂ ಬಂದ್ ಆಗಿದೆ.

ಪಿಎಫ್ಐ ಟ್ವಿಟರ್ ಖಾತೆಯಲ್ಲಿ 80 ಸಾವಿರಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದೆ. ಪಿಎಫ್ಐ ಬ್ಯಾನ್ ಆದ ಒಂದು ದಿನಗಳ ಬಳಿಕ ಇದೀಗ ಪಿಎಫ್ಐ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಿಗೆ ಲಗಾಮು ಹಾಕಲಾಗಿದೆ. ಇದರ ಜೊತೆಯಲ್ಲಿ ಪಿಎಫ್ಐ ಅಧ್ಯಕ್ಷ ಒಎಂಎ ಸಲಾಂ ಹಾಗೂ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ ಖಾತೆಗಳನ್ನೂ ತಡೆ ಹಿಡಿಯಲಾಗಿದೆ.
ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ. ದೇಶದಲ್ಲಿ ಅನೇಕ ಯುವಕರ ಸಾವಿನ ಹಿಂದೆಯೂ ಪಿಎಫ್ಐ ಕೈವಾಡವಿದ್ದು ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯ ಅಡಿಯಲ್ಲಿ ಗೃಹ ಸಚಿವಾಲಯಗಳ ಇಲಾಖೆಯು ಪಿಎಫ್ಐ ಹಾಗೂ ಅದರ ಅಂಗಸಂಸ್ಥೆಗಳು ಐಎಸ್ಐಎಸ್ನಂತಹ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದೆ. ರಾಷ್ಟ್ರೀಯ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಪಿಎಫ್ಐನಂತಹ ಸಂಘಟನೆಯಿಂದ ದೇಶದ ಆಂತರಿಕ ಭದ್ರತೆಗೆ ದೊಡ್ಡ ಅಪಾಯ ಎಂದು ಕಾರಣಗಳನ್ನು ನೀಡಿ ಪಿಎಫ್ಐನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.ದೇಶದಲ್ಲಿ ಕೆಲವು ದಿನಗಳಿಂದ ರಾಷ್ಟ್ರೀಯ ತನಿಖಾ ದಳವು ಪಿಎಫ್ಐನ ಎಲ್ಲಾ ಕಚೇರಿಗಳ ಮೇಲೆ ದಾಳಿ ನಡೆಸಿ ನೂರಕ್ಕೂ ಅಧಿಕ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿತ್ತು. ಈ ಎಲ್ಲದರ ಬೆನ್ನಲ್ಲೇ ಕೇಂದ್ರ ಸರ್ಕಾರ ಐದು ವರ್ಷಗಳಿಗೆ ಜಾರಿಗೆ ಬರುವಂತೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಬ್ಯಾನ್ ಮಾಡಿದೆ. ಕೇಂದ್ರ ಸರ್ಕಾರದ ಈ ಆದೇಶದ ಬಳಿಕ ಪಿಎಫ್ಐ ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ.
ಇದನ್ನು ಓದಿ : election year : ಚುನಾವಣೆ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆಯಾ ಭರ್ಜರಿ ಗಿಫ್ಟ್
ಇದನ್ನೂ ಓದಿ : IAS officer rebukes girl:ಸ್ಯಾನಿಟರಿ ಪ್ಯಾಡ್ ಬೇಕೆಂದು ಕೇಳಿದ ಬಾಲಕಿಗೆ ಉಚಿತ ಕಾಂಡೋಮ್ ಬೇಕಾ ಎಂದ ಮಹಿಳಾ ಅಧಿಕಾರಿ : ವ್ಯಾಪಕ ಆಕ್ರೋಶ
Twitter handles of PFI, its leaders taken down day after ban