IAS officer rebukes girl:ಸ್ಯಾನಿಟರಿ ಪ್ಯಾಡ್​ ಬೇಕೆಂದು ಕೇಳಿದ ಬಾಲಕಿಗೆ ಉಚಿತ ಕಾಂಡೋಮ್​ ಬೇಕಾ ಎಂದ ಮಹಿಳಾ ಅಧಿಕಾರಿ : ವ್ಯಾಪಕ ಆಕ್ರೋಶ

ಬಿಹಾರ : IAS officer rebukes girl :ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟರಿ ಪ್ಯಾಡ್​ಗಳನ್ನು ಉಚಿತವಾಗಿ ನೀಡುವ ಯೋಜನೆಯು ಅನೇಕ ವರ್ಷಗಳಿಂದ ಜಾರಿಯಲ್ಲಿದೆ. ಆದರೆ ಪಾಡ್ನಾದಲ್ಲಿ ಬಡ ವಿದ್ಯಾರ್ಥಿನಿಯೊಬ್ಬಳು ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್​ಗಳನ್ನು ನೀಡಬೇಕು ಎಂದು ಕೇಳಿದ್ದಕ್ಕೆ ಹಿರಿಯ ಐಎಎಸ್​ ಅಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹರ್ಜೋತ್​ ಕೌರ್​ ಬುಮ್ರಾ ಬಾಲಕಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.


ಅಂತಾರಾಷ್ಟ್ರೀಯ ಎನ್​ಜಿಓಗಳ ಸಹಭಾಗಿತ್ವದಲ್ಲಿ ಡಬ್ಲುಟಿಸಿ ಆಯೋಜಿಸಿದ್ದ ಸಶಕ್ತ್​ ಬೇಟಿ, ಸಮೃದ್ಧ ಬಿಹಾರ್​ ಎಂಬ ಕಾರ್ಯಕ್ರಮದ ಅಡಿಯಲ್ಲಿ ಬಿಹಾರದಲ್ಲಿ ಬಾಲಕಿಯರ ಮೌಲ್ಯವನ್ನು ಹೆಚ್ಚಿಸುವಂತ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿಯೊಬ್ಬರು ಸರ್ಕಾರವು ನಮಗೆ ಸ್ಯಾನಿಟರಿ ನ್ಯಾಪ್ಕಿನ್​ಗಳನ್ನು 20 ರಿಂದ 30 ರೂಪಾಯಿಗಳಿಗೆ ನೀಡಬಹುದೇ..? ಎಂದು ಪ್ರಶ್ನೆ ಮಾಡಿದ್ದಳು.


ನಿಮ್ಮ ಇಂತಹ ಬೇಡಿಕೆಗಳಿಗೆ ಕೊನೆ ಎಂಬುದು ಇದೆಯೇ..? ಇಂದು ಪ್ಯಾಡ್​, ನಾಳೆ ಜೀನ್ಸ್​ ಹಾಗೂ ಸುಂದರವಾದ ಶೂಗಳನ್ನು ನೀವು ಸರ್ಕಾರದ ಬಳಿಯೇ ಕೇಳಬಹುದು. ಕೊನೆಗೆ ಫ್ಯಾಮಿಲಿ ಪ್ಲಾನಿಂಗ್​ ಮಾಡಲು ಸರ್ಕಾರವೇ ನಿಮಗೆ ಕಾಂಡೋಮ್​ಗಳನ್ನೂ ಉಚಿತವಾಗಿ ನೀಡಬೇಕು ಎಂದು ನೀವು ಕೇಳಬಹುದು. ಇದರಿಂದ ಮುಜುಗರಕ್ಕೊಳಗಾದ ಬಾಲಕಿಯು ಮುಂದಿನ ಚುನಾವಣೆಯಲ್ಲಿ ಈ ಸರ್ಕಾರಕ್ಕೆ ನಾವು ಮತ ಹಾಕುವುದಿಲ್ಲ ಎಂದು ಹೇಳಿದಾಗ ಅಧಿಕಾರಿಯು ಇದಕ್ಕೆ ಇನ್ನೂ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ್ದಾರೆ.


ಬಾಲಕಿಯು ಮತ ಚಲಾವಣೆಯ ಮಾತುಗಳನ್ನು ಎತ್ತುತ್ತಿದ್ದಂತೆಯೇ ಇನ್ನೂ ಖಾರವಾಗಿ ಪ್ರತಿಕ್ರಿಯಿಸಿದ ಅಧಿಕಾರಿ ಹರ್ಜೋತ್​ ಕೌರ್​, ಆಯ್ತು ಮತ ಹಾಕಬೇಡಿ. ಇದು ನಿಮ್ಮ ಮೂರ್ಖತನಕ್ಕೆ ನಾವೇನು ಹೇಳಲು ಸಾಧ್ಯವಿಲ್ಲ. ನೀವು ಮತ ಹಾಕುವ ಅಗತ್ಯ ಕೂಡ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಮಹಿಳಾ ಅಧಿಕಾರಿಯ ಈ ರೀತಿಯ ವರ್ತನೆಗೆ ಸಮಾಜ ಕಲ್ಯಾಣ ಸಚಿವ ಮದನ್​ ಸಾಹ್ನಿ ಆಘಾತ ವ್ಯಕ್ತಪಡಿಸಿದ್ದಾರೆ.


ಐಎಎಸ್​ ಅಧಿಕಾರಿ ಹೆಣ್ಣುಮಕ್ಕಳ ನೈತಿಕ ಸ್ಥೈರ್ಯ ಹೆಚ್ಚಿಸುವ ಕಾರ್ಯವನ್ನು ಮಾಡಬೇಕು. ಆದರೆ ಈ ಸರ್ಕಾರಿ ಅಧಿಕಾರಿ ಬಾಲಕಿಯ ಆತ್ಮವಿಶ್ವಾಸವನ್ನು ನಿರುತ್ಸಾಹಗೊಳಿಸಲು ಯತ್ನಿಸಿದ್ದಾರೆ, ಇದು ಸರಿಯಲ್ಲ. ಸಾರ್ವಜನಿಕವಾಗಿ ಈ ರೀತಿ ಮಾತನಾಡುವುದನ್ನು ಅಧಿಕಾರಿ ನಿಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಮದನ್​ ಸಾಹ್ನಿ ಹೇಳಿದ್ದಾರೆ.


ಜನರ ಬೇಡಿಕೆಯನ್ನು ನೀವೇ ಹತ್ತಿಕ್ಕಿದರೆ, ಸರ್ಕಾರದಿಂದ ಈ ಪ್ರಶ್ನೆಗಳನ್ನು ಯಾರು ಕೇಳುತ್ತಾರೆ..? ಈ ಬಗ್ಗೆ ನಾನು ನಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಚರ್ಚೆ ನಡೆಸುತ್ತೇನೆ. ಸರ್ಕಾರ ಈಗಾಗಲೇ ಮಹಿಳಾ ವರ್ಗದವರಿಗೆ ರಾಜ್ಯ ಪಂಚಾಯತ್​ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವಂತಹ ಸಾಕಷ್ಟು ಕೆಲಸ ಮಾಡಿದೆ ಎಂದು ಸಾಹ್ನಿ ಹೇಳಿದ್ದಾರೆ .

ಇದನ್ನು ಓದಿ : Rest of India Team : ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಒಬ್ಬನೇ ಕನ್ನಡಿಗ

ಇದನ್ನೂ ಓದಿ : election year : ಚುನಾವಣೆ ವರ್ಷದಲ್ಲಿ ಸರ್ಕಾರಿ ನೌಕಕರಿಗೆ ಸಿಗಲಿದೆಯಾ ಭರ್ಜರಿ ಗಿಫ್ಟ್

Want condoms too? IAS officer rebukes girl seeking pads

Comments are closed.