NavIC Navigation System: ಏನಿದು ಭಾರತದ NavIC? ಇದು ಹೇಗೆ ಕೆಲಸ ಮಾಡುತ್ತದೆ ಗೊತ್ತಾ

ಎಲ್ಲಾ ಸ್ಮಾರ್ಟ್‌ಫೋನ್‌ (Smartphone) ತಯಾರಕರು ಸ್ಯಾಮಸಂಗ್‌, ಆಪಲ್‌, ಶಿಯೋಮಿ, ಒನ್‌ಪ್ಲಸ್‌ ಮುಂತಾದವುಗಳು ಸೇರಿದಂತೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಜನವರಿ 1, 2023 ರಿಂದ ಭಾರತದಲ್ಲಿ ಮಾರಾಟ ಮಾಡಲು NavIC (NavIC Navigation System) ಅನ್ನು ಸಕ್ರೀಯಗೊಳಿಸಬೇಕು ಎಂದು ತಿಳಿಸುವ ಆದೇಶವನ್ನು ಭಾರತ ಸರ್ಕಾರವು ಅಂಗೀಕರಿಸಿದೆ. NavIC ಎಂಬುದು ಮಿಲಿಟರಿ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ISRO ಅಭಿವೃದ್ಧಿಪಡಿಸಿದ ಸ್ವದೇಶಿ ನ್ಯಾವಿಗೇಶನ್‌ ವ್ಯವಸ್ಥೆಯಾಗಿದೆ.

NavIC ಅಂದರೇನು ಮತ್ತು ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?
NavIC ಇದು ISRO ಅಭಿವೃದ್ಧಿಪಡಿಸಿದ ಭಾರತದ ಉಪಗ್ರಹ ವ್ಯವಸ್ಥೆಯಾಗಿದೆ. NavIC ಅನ್ನು ತುರ್ತು ಸ್ಥಳ ಟ್ರ್ಯಾಕಿಂಗ್‌ ಮತ್ತು ವಾಹನ ಟ್ರ್ಯಾಕಿಂಗ್‌ ಗಾಗಿ ಬಳಸಲಾಗುತ್ತಿದೆ. ಆದರೆ ಇದರ ಗಮನವು ಸ್ಮಾರ್ಟ್‌ಫೋನ್‌ ನ್ಯಾವಿಗೇಶನ್‌ಗೆ ಮೇಲೆಯೇ ಇತ್ತು. ಇದು ಬಳಕೆದಾರರು ಉಬರ್‌ ಬುಕಿಂಗ್‌ ಪಡೆಯಲು ಮತ್ತು ಸ್ವಿಗ್ಗಿ ಅಥವಾ ಜೊಮಾಟೊ ಮೂಲಕ ಆಹಾರವನ್ನು ಆರ್ಡರ್‌ ಮಾಡಲು ಸಹಾಯ ಮಾಡುತ್ತದೆ. ಇದು ಎರಡು ರೀತಿಯ ಸೇವೆಯನ್ನು ಒದಗಿಸುತ್ತದೆ. ಒಂದು ಸ್ಥಾನಿಕ ಸೇವೆ ಮತ್ತು ಎರಡನೇಯದು ಭದ್ರತಾ ಏಜೆನ್ಸಿಗಳಿಗೆ ಎನ್‌ಕ್ರಿಪ್ಟ್‌ ಮಾಡಿದ ಸೇವೆ ಮತ್ತು ಮಿಲಿಟರಿ ಅಕ್ಸಸ್‌. NavIc ನ್ಯಾವಿಗೇಶನ್‌ ವ್ಯವಸ್ಥೆಯು 7 ಸ್ಯಾಟಲೈಟ್‌ಗಳ ಮೇಲೆ ಅವಲಂಬಿತವಾಗಿದೆ. ಅದರಲ್ಲಿ 3 ಜಿಯೋಸ್ಟೇಷನರಿ ಅರ್ಥ್‌ ಆರ್ಬಿಟ್‌ (GEO) ಮತ್ತು 4 ಜಿಯೋಸಿಂಕ್ರೋನಸ್‌ ಆರ್ಬಿಟ್‌ (GSO) ಉಪಗ್ರಹಗಳು.

NavIC ಯು GPSಗಿಂತ ಹೇಗೆ ಭಿನ್ನವಾಗಿದೆ?
GPS ಅನ್ನುವುದು US ಅಭಿವೃದ್ಧಿಪಡಿಸಿದ ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್‌. NavIC ಇದು ಭಾರತದ ISRO ಅಭಿವೃದ್ಧಿಪಡಿಸಿದ ನ್ಯಾವಿಗೇಶನ್‌ ವ್ಯವಸ್ಥೆ. ಇದು ಭಾರತ ಸರ್ಕಾರದ ನಿಯಂತ್ರಣದಲ್ಲಿದ್ದು ಮತ್ತು ಭಾರತಕ್ಕೆ ಸ್ವದೇಶಿ ನ್ಯಾವಿಗೇಷನ್‌ ವ್ಯವಸ್ಥೆಯನ್ನು ನೀಡಿದೆ. ಇದರಿಂದಾಗಿ ಭಾರತವು ಸ್ವಂತ ಸ್ಥಾನಿಕರಣ ವ್ಯವಸ್ಥೆ ಹೊಂದಿರುವ ದೇಶಗಳ ಸಾಲಿಗೆ ಸೇರುತ್ತದೆ.

ಭಾರತದಲ್ಲಿNavIC ಅನ್ನು ಬೆಂಬಲಿಸು ಸ್ಮಾರ್ಟ್‌ಫೋನ್‌ಗಳಿವೆಯೇ?
ಕ್ವಾಲ್ಕಮ್‌ ಈಗಾಗಲೇ Snapdragon 720G, Snapdragon 662 ಮತ್ತು Snapdragon 460 ಪ್ರೊಸೆಸರ್‌ಗಳನ್ನು ಹೊಂದಿದೆ. ಇದನ್ನು ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಥಳ ಸೇವೆಗಳಿಗಾಗಿ NavIC ಬಳಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಶಿಯೋಮಿ ಮತ್ತು ರಿಯಲ್‌ಮಿ ಗಳು NavIC ಬೆಂಬಲಿಸುವ ಫೋನ್‌ಗಳನ್ನು ಪ್ರಾರಂಭಿಸಿವೆ. ಆದರೆ ಜಾಗತಿಕ ಸ್ಮಾರ್ಟ್‌ಫೋನ್‌ ತಯಾರಕರು ನ್ಯಾವಿಗೇಷನ್‌ಗಾಗಿ GPS ಅನ್ನೇ ಬಳಸುತ್ತಿದ್ದಾರೆ.

ಇದನ್ನೂ ಓದಿ : Tata Tiago EV : ಇಂದು ಬಿಡುಗಡೆಯಾದ ಟಾಟಾ ಟಿಯಾಗೊ ಎಲೆಕ್ಟ್ರಿಕಲ್‌ ಕಾರ್‌; ಇದು ಜನಸಾಮಾನ್ಯರ ಕಾರ್‌ ಆಗಬಹುದೇ…

ಇದನ್ನೂ ಓದಿ : PFI Ban : ಭಾರತದಲ್ಲಿ 5 ವರ್ಷ PFI ನಿಷೇಧ :ಕೇಂದ್ರ ಸರಕಾರದ ಅಧಿಸೂಚನೆ

NavIC Navigation System what is NavIC and how does it works? Is it different from GPS?

Comments are closed.