Uddhav Takre Ekant shinde : ಉದ್ಧವ್, ಶಿಂಧೆ ಬಣಕ್ಕೆ ಹೊಸ ಹೆಸರು, ಹೊಸ ಚಿಹ್ನೆ

ಮುಂಬೈ : Uddhav Takre Ekant shinde ಶಿವಸೇನೆಯ ಮೂಲ ಪಟ್ಟಕ್ಕಾಗಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಹಾಲಿ ಸಿಎಂ ಏಕನಾಥ್‌ ಶಿಂಧೆ ಬಣದ ನಡುವೆ ನಡೆಯುತ್ತಿರುವ ಕಿತ್ತಾಟಕ್ಕೆ ಟ್ವಿಸ್ಟ್ ಸಿಕ್ಕಿದೆ. ಮುಂಬೈನ  ಅಂದೇರಿ ಪೂರ್ವ ಕ್ಷೇತ್ರದ ಉಪಚುನಾವಣೆಗೆ ಚುನಾವಣಾ ಆಯೋಗ ಎರಡು ಬಣಕ್ಕೂ ಹೊಸ ಹೆಸರು ಹೊಸ ಚಿಹ್ನೆಯನ್ನ ನೀಡಿದೆ.

ಪಕ್ಷದ ಚಿಹ್ನೆಯನ್ನು ಬಳಸುವ ಸಂಬಂಧ ಕೇಂದ್ರ ಚುನಾವಣಾ ಆಯೋಗ ಮಧ್ಯಂತರ ಆದೇಶ ಹೊರಡಿಸಿದ್ದು, ಸದ್ಯಕ್ಕೆ ಎರಡೂ ಬಣಗಳು ಪಕ್ಷದ ಚಿಹ್ನೆಯಾದ ಬಿಲ್ಲು ಮತ್ತು ಬಾಣವನ್ನು ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಸೋಮವಾರ ಈ ಸಂಬಂಧ ಮಧ್ಯಂತರ ಆದೇಶ ಹೊರಡಿಸಿರೋ ಕೇಂದ್ರ ಚುನಾವಣಾ ಆಯೋಗ ಉದ್ಧವ್ ಠಾಕ್ರೆ ಬಣಕ್ಕೆ ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಅಂತಾ ಹೆಸರು ಸೂಚಿಸಿದ್ದು, ಚಿಹ್ನೆಯಾಗಿ ಜ್ಯೋತಿಯನ್ನ ಬಳಸುವಂತೆ ಹೇಳಿದೆ. ಇನ್ನು ಶಿಂಧೆ ಬಣವನ್ನು ಬಾಳಾಸಾಹೇಬಂಚಿ ಶಿವಸೇನೆ ಅಂದ್ರೆ ಬಾಳಾಸಾಹೇಬರ ಶಿವಸೇನೆ ಎಂದು ಹೆಸರಿಸಿದೆ. ಆದ್ರೆ ಶಿಂಧೆ ಬಣಕ್ಕೆ ಇನ್ನೂ ಚಿಹ್ನೆಯನ್ನ ನೀಡಿಲ್ಲ..

ಆಯೋಗವು ಚುನಾವಣಾ ಚಿಹ್ನೆಗಾಗಿ ಎರಡೂ ಗುಂಪುಗಳಿಗೆ ಸೋಮವಾರದವರೆಗೆ ಕಾಲಾವಕಾಶ ನೀಡಿತ್ತು. ಉಪಚುನಾವಣೆಗೆ ಮೂರು ಹೆಸರು ಮತ್ತು ಮೂರು ಚಿಹ್ನೆಗಳ ಆಯ್ಕೆಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ ಎಂದು ಶಿವಸೇನೆ ತಿಳಿಸಿದೆ. ಎರಡು ಬಣಗಳು ಪ್ರಸ್ತಾಪಿಸಿದ ಗದೆ, ತ್ರಿಶೂಲ, ಉದಯಿಸುವ ಸೂರ್ಯ ಈ ಚಿಹ್ನೆಗಳನ್ನ ನೀಡಲು ಬರೋದಿಲ್ಲ ಎಂದಿದೆ. ಅಲ್ದೆ ತ್ರಿಶೂಲ, ಗದೆ, ಧಾರ್ಮಿಕ ಅರ್ಥವಿರುವ ಚಿಹ್ನೆಗಳು ಅಂತಾ ಪರಿಗಣಿಸಿರೋದಾಗಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಠಾಕ್ರೆ ನೇತೃತ್ವದ ಬಣಕ್ಕೆ ಉಪಚುನಾವಣೆಯಲ್ಲಿ ಚಿಹ್ನೆಯನ್ನು ಬಳಸಲು ಅವಕಾಶ ನೀಡಬಾರದು ಎಂದು ಶಿಂಧೆ ಗುರುವಾರ ಆಯೋಗಕ್ಕೆ ಪತ್ರ ಬರೆದಿದ್ದರು. ಹೀಗಾಗಿ ಚುನಾವಣಾ ಆಯೋಗ ಶಿವಸೇನೆ ಬಿಲ್ಲು ಬಾಣ ಮುಟ್ಟದಂತೆ ಸೂಚಿಸಿತ್ತು. ಬಳಿಕ ಉದ್ಧವ್ ಠಾಕ್ರೆ ಚುನಾವಣಾ ಆಯೋಗದ ಆದೇಶವನ್ನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ರು.

ಜೂನ್‌ನಲ್ಲಿ ಏಕ್ ನಾಥ್ ಶಿಂಧೆ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ರು. 48 ಶಾಸಕರ ಜೊತೆ ಬಿಜೆಪಿ ಜೊತೆ ಕೈ ಜೋಡಿಸಿ ಸರ್ಕಾರ ರಚಿಸಿ ಸಿಎಂ ಆಗಿದ್ರು. ಬಳಿಕ ಶಿವಸೇನೆಯ ಮೂಲ ಪಟ್ಟಕ್ಕಾಗಿ, ಪಕ್ಷದ ಚಿಹ್ನೆಗಾಗಿ ಉದ್ಧವ್ ಮತ್ತು ಶಿಂಧೆ ಬಣದ ನಡುವೆ ತಿಕ್ಕಾಟ ಶುರುವಾಗಿದೆ.

ಮಂಗಳವಾರದೊಳಗೆ ಮೂರು ಹೊಸ ಪಕ್ಷದ ಚಿಹ್ನೆ ಸಲ್ಲಿಸುವಂತೆ ಚುನಾವಣಾ ಸಂಸ್ಥೆ ಶಿಂಧೆ ಶಿಬಿರವನ್ನು ಕೇಳಿದೆ. ಶಿಂಧೆ ಶಿಬಿರದ ವಕ್ತಾರ ನರೇಶ್ ಮ್ಹಾಸ್ಕೆ ಅವರು ಮಂಗಳವಾರ ಬೆಳಿಗ್ಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವ ಹೊಸ ಪರ್ಯಾಯಗಳ ಬಗ್ಗೆ ಯೋಚಿಸೋದಾಗಿ ತಿಳಿಸಿದ್ದಾರೆ.  ಅದೇನೇ ಇದ್ದರೂ, ಉದ್ಧವ್ ಬಣದ ನಾಯಕ ಭಾಸ್ಕರ್ ಜಾಧವ್ ಹೊಸ ಪಕ್ಷದ ಹೆಸರಿನ ಭಾಗವಾಗಿ ಉದ್ಧವ್ ಜಿ ಮತ್ತು ಬಾಳಾಸಾಹೇಬ್ ಅವರ ಹೆಸರು ಸೇರಿದೆ ಇದು ನಮ್ಮ ಗೆಲುವು ಎಂದು ಹೇಳಿಕೊಂಡಿದ್ದಾರೆ. ಶಿಂಧೆ ಪಾಳಯವೂ ತಮಗೆ ಬಾಳ್ ಠಾಕ್ರೆಯವರ ಆಶೀರ್ವಾದವಿದೆ ಮತ್ತು ತಮ್ಮ ಬಣವು ಸೇನೆಯ ಸಂಸ್ಥಾಪಕರ ಆದರ್ಶಗಳನ್ನು ಮುನ್ನಡೆಸುತ್ತಿದೆ ಎಂದು ಒತ್ತಿಹೇಳಿದೆ. ಏತನ್ಮಧ್ಯೆ, ಸೆರೆವಾಸದಲ್ಲಿರುವ ಸೇನಾ ಸಂಸದ ಸಂಜಯ್ ರಾವತ್, ಹೊಸ ಚಿಹ್ನೆ ಪಕ್ಷಕ್ಕೆ ಹೊಸ ಕ್ರಾಂತಿಯನ್ನು ತರುತ್ತದೆ” ಎಂದಿದ್ದಾರೆ.

ಇದನ್ನೂ ಓದಿ : Bangalore Rain: ಬೆಂಗಳೂರಿನಲ್ಲಿ ವರುಣನ ಅಬ್ಬರ.. ರಾಜಧಾನಿ ಮತ್ತೆ ಮುಳುಗುವ ಆತಂಕ

Uddhav Takre Ekant shinde New Party Names For Team Thackeray, Team Shinde

Comments are closed.