Nayanthara In trouble: ಸಿಹಿ ಸುದ್ದಿಕೊಟ್ಟ ನಯನತಾರಾ ದಂಪತಿಗೆ ‘ಬಾಡಿಗೆ’ ಸಂಕಷ್ಟ

ಚೆನ್ನೈ : Nayanthara In trouble ಮದುವೆಯಾದ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದೇವೆ ಅಂತಾ ಸಿಹಿ ಸುದ್ದಿ ಕೊಟ್ಟ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿಗೆ ಸಂಕಷ್ಟ ಎದುರಾಗಿದೆ. ಬಾಡಿಗೆ ತಾಯ್ತನದ ಮೂಲಕ ಇಬ್ಬರು ಅವಳಿಗೆ ಮಕ್ಕಳಿಗೆ ಜನ್ಮ ನೀಡಿರೋದೇ ಈಗ ಸಮಸ್ಯೆ ತಂದಿಟ್ಟಿದೆ.

ಸರ್ಕಾರ ಬಾಡಿಗೆ ತಾಯ್ತನದ ವಿಚಾರದಲ್ಲಿ ಕೆಲ ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನಯನತಾರಾ ವಿಘ್ನೇಶ್ ದಂಪತಿ ಗಾಳಿಗೆ ತೂರಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನ ಪಡೆದಿದ್ದಾರೆ. ಹೀಗಾಗಿ ತಮಿಳುನಡು ಸರ್ಕಾರ ಈ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆ ಜಾರಿಗೆ ತರಲಾಗಿತ್ತು. ಈ ಕಾಯ್ದೆ ಪ್ರಕಾರ ಬಾಡಿಗೆ ತಾಯಿಯು ಆರೋಗ್ಯವಾಗಿರಬೇಕು ಹಾಗೂ ಆಕೆಯ ವಯಸ್ಸು 21-35ರ ಅಂತದರಲ್ಲಿ ಇರಬೇಕು. ಆಕೆ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಬಹುದು. ಇದರ ಜತೆಗೆ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿತ್ತು. ಅಂದರೆ ಮಗುವನ್ನು ಹೆರುವ ಮಹಿಳೆ ದಂಪತಿಯಿಂದ ಹಣ ಪಡೆಯುವಂತಿಲ್ಲ.  ಈ ನಿಯಮಗಳನ್ನು ನಯತಾರಾ ಹಾಗೂ ವಿಘ್ನೇಶ್ ಶಿವನ್ ಪಾಲಿಸಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಈ ಸಂಬಂಧ ಸ್ಪಷ್ಟನೆ ನೀಡಲು ಸೂಚಿಸಿದೆ. ವೈದ್ಯಕೀಯ ಸೇವೆಗಳ ನಿರ್ದೇಶನಾಲಯ ಈ ಸಂಬಂಧ ತನಿಖೆ ನಡೆಸಲಿದೆ.

ಈ ವರ್ಷ ಮದುವೆಯಾದ ಸೆಲಬ್ರಿಟಿಗಳಲ್ಲಿ ನಯನತಾರಾ ಹಾಗೂ ವಿಘ್ನೇಶ್‌ ಶಿವನ್‌ ಅವರ ಮದುವೆ ಭಾರೀ ಸುದ್ದಿಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೇ ವರ್ಷ ಜೂನ್‌ 9 ರಂದು ಮದುವೆಯಾಗಿದ್ದರು. ನಿನ್ನೆಯಷ್ಟೇ ತಾವು ಅವಳಿ ಮಕ್ಕಳ ಪೋಷಕರಾಗಿರುವುದಾಗಿ ಹೇಳಿಕೊಂಡಿದ್ದರು. ಬಾಡಿಗೆ ತಾಯಿ ಮೂಲಕ ಜನಿಸಿರುವ ಈ ಅವಳಿ ಗಂಡು ಮಕ್ಕಳಿಗೆ ಉಯಿರ್​ ಮತ್ತು ಉಳಗಂ ಎಂದು ಹೆಸರು ಇಡಲಾಗಿದೆ. ‘ನಯನ್​ ಮತ್ತು ನಾನು ಅಪ್ಪ-ಅಮ್ಮ ಆಗಿದ್ದೇವೆ. ನಮಗೆ ಅವಳಿ ಗಂಡು ಮಕ್ಕಳು ಜನಿಸಿದ್ದಾರೆ. ನಮ್ಮ ಪ್ರಾರ್ಥನೆ, ಹಿರಿಯರ ಆಶೀರ್ವಾದ ಈ ಮಕ್ಕಳ ರೂಪದಲ್ಲಿ ಸಿಕ್ಕಿದೆ. ನಮ್ಮ ಉಯಿರ್​ ಮತ್ತು ಉಳಗಂ ಮೇಲೆ ನಿಮ್ಮ ಆಶೀರ್ವಾದ ಇರಲಿ’ ಎಂದು ವಿಘ್ನೇಶ್​ ಶಿವನ್​ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ : Bangalore Rain: ಬೆಂಗಳೂರಿನಲ್ಲಿ ವರುಣನ ಅಬ್ಬರ.. ರಾಜಧಾನಿ ಮತ್ತೆ ಮುಳುಗುವ ಆತಂಕ

Nayanthara In trouble after giving birth to her children through surrogacy

Comments are closed.