Unsafe City For Women : ಈ ನಗರಗಳು ಮಹಿಳೆಯರಿಗೆ ಸುರಕ್ಷಿತವಲ್ಲ NCRB

2021ರ ಅಂಕಿ ಅಂಶಗಳ ಪ್ರಕಾರ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸರಾಸರಿ ಪ್ರತಿ ನಿತ್ಯ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣ ನಡೆದಿದೆ ಅಂತಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಯಲ್ಲಿ 2021ರಲ್ಲಿ ಮಹಿಳೆಯರ ವಿರುದ್ಧ ಒಟ್ಟು 13,892 ಅಪರಾಧ ಪ್ರಕರಣಗಳು ದಾಖಲಾಗಿವೆ. 2020ರಲ್ಲಿ ಈ ಅಂಕಿ ಅಂಶ 9782 ಆಗಿತ್ತು. ಹೀಗಾಗಿ 2020ಕ್ಕೆ ಹೋಲಿಸಿದ್ರೆ ದೆಹಲಿಯಲ್ಲಿ ಮಹಿಳೆಯರ ವಿರುದ್ಧ ಶೇಕಡಾ 40 ರಷ್ಟು ಅಪರಾಧ ಪ್ರಕರಣಗಳು ಹೆಚ್ಚಾಗಿದೆ ಅಂತಾ ವರದಿಯಲ್ಲಿ ದಾಖಲಾಗಿದೆ.

NCRB ವರದಿ ಪ್ರಕಾರ ದೇಶದ 19 ಮಹಾನಗರಗಳ ಪೈಕಿ ದೆಹಲಿಯೊಂದರಲ್ಲೇ ಅಪರಾಧ ಪ್ರಕರಣಗಳ ಸರಾಸರಿ ಶೇಕಡಾ 32.20 ರಷ್ಟಿದೆ. ದೆಹಲಿ ನಂತರ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 2021ರಲ್ಲಿ ಮಹಿಳೆಯರ ವಿರುದ್ಧ 5,543 ಅಪರಾಧ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರಿಗೆ 3ನೇ ಸ್ಥಾನ : ದೆಹಲಿ ಮತ್ತು ಮುಂಬೈ ನಂತರ ಮಹಿಳೆಯರಿಗೆ ಅಸುರಕ್ಷಿತ ಮಹಾನಗರ ಅನ್ನೋ ಕುಖ್ಯಾತಿಯನ್ನ ರಾಜ್ಯ ರಾಜಧಾನಿ ಬೆಂಗಳೂರು ಪಡೆದಿದೆ. NCRB ವರದಿ ಪ್ರಕಾರ 2021ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ವಿರುದ್ಧ 3127 ಪ್ರಕರಣಗಳು ದಾಖಲಾಗಿವೆ. ಅಂದ್ರೆ 19 ಮಹಾನಗರಗಳ ಪೈಕಿ ಬೆಂಗಳೂರಿನಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಪ್ರಮಾಣ ಶೇಕಡಾ7.2ರಷ್ಟಿದೆ.

ಅಪರಹಣ, ಗಂಡನಿಂದ ಕ್ರೌರ್ಯ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅಂತಾ ವರದಿ ತಿಳಿಸಿದೆ. ಅಷ್ಟೇ ಅಲ್ಲದೇ, 2021ರ ಅಂಕಿ ಅಂಶಗಳ ಪ್ರಕಾರ ಮೆಟ್ರೋ ಪಾಲಿಟಿನ್ ನಗರಗಳಲ್ಲೇ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದ ಪ್ರಕರಣಗಳು ಅತಿ ಹೆಚ್ಚು ವರದಿಯಾಗಿವೆ ಅಂತಾ ತಿಳಿದುಬಂದಿದೆ.

Unsafe City For Women-Bangalore-mumbai- The National Crime Records Bureau

Comments are closed.