Brijesh Kallappa resigns : ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನ: 20 ವರ್ಷಗಳ ಸಂಬಂಧಕ್ಕೆ ಅಂತ್ಯ ಹಾಡಿದ ಬ್ರಿಜೇಶ್ ಕಾಳಪ್ಪ

ಬೆಂಗಳೂರು : ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಿದಾಗಿನಿಂದ ರಾಜ್ಯ ಕಾಂಗ್ರೆಸ್ ಪಾಳಯ ಸಂಕಷ್ಟಕ್ಕೆ ಸಿಲುಕಿದ್ದು, ಪಕ್ಷ ನಿಷ್ಠರಿಗೆ ಅವಕಾಶ ಸಿಗದ ಕಾರಣಕ್ಕೆ ಒಬ್ಬೊಬ್ಬರೇ ಕೈಪಾಳಯ ತೊರೆಯಲಾರಂಭಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಈಗ ಕಾಂಗ್ರೆಸ್ (Congress ) ನ ಕಾನೂನು ಸಲಹೆಗಾರರು ಹಾಗೂ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದ ಬ್ರಿಜೇಶ್ ಕಾಳಪ್ಪ (Brijesh Kallappa resigns ) ಕೂಡ ಕಾಂಗ್ರೆಸ್ (Congress ) ತೊರೆದಿದ್ದು, ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ತಮ್ಮ ರಾಜೀನಾಮೆ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕಿ ಸೋನಿಯಾ ಗಾಂಧಿಯವರಿಗೆ ಬ್ರಿಜೇಶ್ ಕಾಳಪ್ಪ ವಿಸ್ಕೃತ ಪತ್ರ ಬರೆದಿದ್ದಾರೆ. ಹಿಂದಿ, ಇಂಗ್ಲೀಷ್ ಕನ್ನಡ ಭಾಷೆಗಳಲ್ಲಿ ದೇಶದ ಹಲವು ಚಾನೆಲ್ ಗಳಿಗೆ ನಾನು ಕಾಂಗ್ರೆಸ್ ಪ್ರತಿನಿಧಿಯಾಗಿ ಡಿಬೇಟ್ ಗಳಲ್ಲಿ ಭಾಗವಹಿಸಿದ್ದೇನೆ. ಇದುವರೆಗೂ 6497 ಡಿಬೇಟ್ ನಲ್ಲಿ ನಾನು ಭಾಗವಹಿಸಿದ್ದೇನೆ. 2013 ರಿಂದ ಇದುವರೆಗೂ ಪಕ್ಷದ ಸಂದಿಗ್ಧ ಪರಿಸ್ಥಿತಿಯಲ್ಲೂ ನಾನು ಪಕ್ಷದ ಗೌರವ ಕಾಪಾಡುವ ಕೆಲಸ ಮಾಡಿದ್ದೇನೆ. ಇದುವರೆಗೂ ಪಕ್ಷದ ಕಾನೂನು ಸಲಹೆಗಾರನಾಗಿಯೂ ಕೆಲಸ ನಿರ್ವಹಿಸಿದ್ದೇನೆ. ಅಲ್ಲದೇ ನಾನೊಬ್ಬ ಜನಪ್ರಿಯ ವ್ಯಕ್ತಿಯಾಗಿ ಬೆಳೆಯಲು ಅವಕಾಶ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ನಾನು ಋಣಿಯಾಗಿದ್ದೇನೆ.

ಆದರೆ ಈಗ ನಾನು ನನ್ನ ಕೆಲಸದಲ್ಲಿ ಉತ್ಸಾಹ ಹಾಗೂ ಸಾಮರ್ಥ್ಯ ಕಳೆದುಕೊಂಡಿದ್ದೇನೆ ಎಂದು ನನಗೆ ಅನ್ನಿಸುತ್ತಿದೆ. ಹೀಗಾಗಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ‌ ನೀಡುತ್ತಿದ್ದೇನೆ ಎಂದು ಬ್ರಿಜೇಶ್ ಕಾಳಪ್ಪ ಸೋನಿಯಾ ಗಾಂಧಿ ಗೆ ಬರೆದಿರೋ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಸದ್ಯ ಬ್ರಿಜೇಶ್ ಕಾಳಪ್ಪ ರಾಜೀನಾಮೆ ಯಿಂದ ಕಂಗಾಲಾಗಿರುವ ಕೆಪಿಸಿಸಿ ಹಾಗೂ ಡಿಕೆಶಿ ಬ್ರಿಜೇಶ್ ಕಾಳಪ್ಪ ರಾಜೀನಾಮೆ ಅಂಗೀಕರಿಸಿಲ್ಲ. ಬದಲಾಗಿ ಬ್ರಿಜೇಶ್ ಕಾಳಪ್ಪ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಿದೆ ಎನ್ನಲಾಗುತ್ತಿದೆ.

Brijesh Kallappa resigns from Congress primary membership

ಕಳೆದ 20 ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದ ಬ್ರಿಜೇಶ್ ಕಾಳಪ್ಪ ಅತ್ಯಂತ ಹೀನಾಯವಾದ ಸ್ಥಿತಿಯಲ್ಲಿದ್ದಾಗಲೂ ಪಕ್ಷವನ್ನು ಸಮರ್ಥಿಸಿಕೊಳ್ಳುವ ಕಾರ್ಯಮಾಡಿದ್ದರು. ಆದರೆ ಇಷ್ಟೆಲ್ಲ ನಿಷ್ಠೆಗೂ ಬೆಲೆ ಬಂದಿಲ್ಲ ಎಂಬ ಕಾರಣಕ್ಕೆ ಬ್ರಿಜೇಶ್ ಕಾಳಪ್ಪ ರಾಜೀನಾಮೆ ಹಾದಿ ಹಿಡಿದಿದ್ದಾರಂತೆ. ಮೂಲಗಳ ಮಾಹಿತಿ ಪ್ರಕಾರ ಬ್ರಿಜೇಶ್ ಕಾಳಪ್ಪ ವಿಧಾನಪರಿಷತ್ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಬ್ರಿಜೇಶ್ ಕಾಳಪ್ಪರನ್ನು ಕಡೆಗಣಿಸಿದ ಕಾಂಗ್ರೆಸ್ ನಾಗರಾಜ್ ಯಾದವ್ ಹಾಗೂ ಇನ್ನೋರ್ವ ಅಲ್ಪಸಂಖ್ಯಾತ ನಾಯಕನಿಗೆ ನೀಡಿತ್ತು. ಇದರಿಂದ ಬೇಸತ್ತ ಬ್ರಿಜೇಶ್ ಈಗ ಕಾಂಗ್ರೆಸ್ ತೊರೆದಿದ್ದಾರೆ.

ಇದನ್ನೂ ಓದಿ : IT Raid in Karnataka : ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆಯೇ ಐಟಿ ದಾಳಿ : 600 ಅಧಿಕಾರಿಗಳಿಂದ ಪರಿಶೀಲನೆ

ಇದನ್ನೂ ಓದಿ : ಡಿ.ಕೆ ಶಿವಕುಮಾರ್​ಗೆ ಮತ್ತೊಂದು ಸಂಕಷ್ಟ : ವಿಚಾರಣೆಗೆ ಹಾಜರಾಗುವಂತೆ ಕೋರ್ಟ್​ನಿಂದ ನೋಟಿಸ್​

Brijesh Kallappa resigns from Congress primary membership

Comments are closed.