UP Earthquake : ಉತ್ತರ ಪ್ರದೇಶದಲ್ಲಿ ನಡುಗಿದ ಭೂಮಿ. ಎಲ್ಲೆಡೆ ಆತಂಕ ..!

ಲಖನೌ : ಉತ್ತರ ಪ್ರದೇಶದ ರಾಜಧಾನಿ ಲಖನೌ ಸೇರಿದಂತೆ ಹಲವಡೆ ಭೂ ಕಂಪನ ಸಂಭವಿಸಿದೆ. (UP Earthquake) ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿದೆ.

ಶನಿವಾರ ರಾತ್ರಿ 1 ಗಂಟೆ 12 ನಿಮಿಷಕ್ಕೆ ಲಖನೌದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾತ್ರಿವೇಳೆ ಭೂಮಿ ಕಂಪಿಸಿದ ಅನುಭವ ವಾಗ್ತಿದ್ದಂತೆ, ಮನೆಯಲ್ಲಿ ಮಲಗಿದ್ದವರು ಹೊರಗೆ ಓಡಿ ಬಂದಿದ್ದಾರೆ. ಕೆಲವೆಡೆ ಜನರು ಮೈದಾನಗಳಲ್ಲೇ ರಾತ್ರಿಯಿಡಿ ಆತಂಕದಲ್ಲೇ ಕಾಲ ಕಳೆದಿದ್ದಾರೆ ಅಂತಾ ಗೊತ್ತಾಗಿದೆ.

ಉತ್ತರ ಪ್ರದೇಶದ ರಾಜಧಾನಿ ಲಖನೌದಿಂದ 139 ಕಿಲೋ ಮೀಟರ್ ದೂರದ ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಭೂ ಕಂಪನದ ಕೇಂದ್ರ ದಾಖಲಾಗಿದೆ. ಹೀಗೆಂದು ಭೂಕಂಪನ ಶಾಸ್ತ್ರದ ರಾಷ್ಟ್ರೀಯ ಕೇಂದ್ರ National Center for Seismology ಟ್ವೀಟ್ ಮೂಲಕ ಮಾಹಿತಿ ನೀಡಿದೆ

ಭೂಕಂಪನ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿದ್ರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಲಿ, ಆಸ್ತಿ ನಾಶವಾಗಲಿ ಆಗಿಲ್ಲ ಎಂದು ಭೂಕಂಪನ ಶಾಸ್ತ್ರದ ಕೇಂದ್ರ ತಿಳಿಸಿದೆ.

ಇದನ್ನೂ ಓದಿ : Savarkar photo controversy big twist : ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಸಾವರ್ಕರ್‌ ಪಾರ್ಕ್‌ ಉದ್ಘಾಟನೆ : ಪೋಟೋ ಸಂಘರ್ಷಕ್ಕೆ ಬಿಗ್‌ ಟ್ವಿಸ್ಟ್‌

ಇದನ್ನೂ ಓದಿ : Meghana Raj Sarja Emotional answer : ನಿಮಗೀಗ ಚಿರು ನೆನಪಿಲ್ಲವಾ ? ಪ್ರಶ್ನೆಗೆ ಮೇಘನಾ ಕೊಟ್ರು ಭಾವುಕ ಉತ್ತರ

( UP Earthquake quake record magnitude.5.2 fear )

Comments are closed.