ವಂದೇ ಭಾರತ ಎಕ್ಸಪ್ರೆಸ್ ರೈಲು (Vande Bharat Express train) ಭಾರತದಾದ್ಯಂತ ಸಂಚಲನ ಮೂಡಿಸಿದೆ. ಪ್ರಗತಿಯ ದ್ಯೋತಕ ಎಂದೇ ಗುರುತಿಸಿಕೊಂಡ ವಂದೇ ಭಾರತ ಎಕ್ಸಪ್ರೆಸ್ ರೈಲಿನ ಪೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು, ಜನರ ಮನಸ್ಥಿತಿಯ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭಗೊಂಡಿದೆ. ಇಷ್ಟಕ್ಕೆಲ್ಲ ಕಾರಣವಾಗಿರೋದು ವೈರಲ್ ಆಗಿರೋ ವಂದೇ ಮಾತರಂ ರೈಲಿನ ಕಸದ ರಾಶಿ ಪೋಟೋ.
ವಂದೇ ಮಾತರಂ ರೈಲಿನ ಬೋಗಿಯಲ್ಲಿ ಕಸದ ರಾಶಿ ತುಂಬಿಕೊಂಡಿರೋ ಪೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ನೀರಿನ ಬಾಟಲ್, ತಿಂಡಿ ತಿಂದ ಮೇಲೆ ಎಸೆದ ಕವರ್ , ಪ್ಲಾಸ್ಟಿಕ್ ಲೋಟ ಸೇರಿದಂತೆ ಹಲವು ಬಗೆಯ ತ್ಯಾಜ್ಯಗಳು ಬೋಗಿಯಲ್ಲಿದ್ದು, ಅದನ್ನು ರೈಲಿನ ಸಿಬ್ಬಂದಿ ಸ್ವಚ್ಛಗೊಳಿಸಲು ನಿಂತ ಪೋಟೋ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಎಂಬುವವರು we the people ಎಂಬ ಟ್ಯಾಗ್ ಲೈನ್ ಅಡಿ ಈ ಪೋಟೋವನ್ನು ಶೇರ್ ಮಾಡಿದ್ದಾರೆ. ಈ ಪೋಟೋ ಶೇರ್ ಆಗ್ತಿದಂತೆ ಲಕ್ಷಾಂತರ ಜನರು ಶೇರ್ ಮಾಡಿ ಕಮೆಂಟ್ ಮಾಡಿದ್ದಾರೆ. ಈ ಪೋಟೋಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಸರಕಾರದ ಸೌಲಭ್ಯವನ್ನು ಸೂಕ್ತವಾಗಿ ಬಳಸಿಕೊಳ್ಳುವ ಬದಲು ಜನ ಅದನ್ನು ಹಾಳು ಮಾಡುವುದರಲ್ಲಿ ತೃಪ್ತಿ ಕಾಣುತ್ತಿದ್ದಾರೆ ಎಂದಿದ್ದಾರೆ.
“We The People.”
— Awanish Sharan (@AwanishSharan) January 28, 2023
Pic: Vande Bharat Express pic.twitter.com/r1K6Yv0XIa
ಇದನ್ನೂ ಓದಿ : Union Budget 2023 : ಆಟೋಮೊಬೈಲ್ ಕ್ಷೇತ್ರಕ್ಕೆ ಹಲವು ನಿರೀಕ್ಷೆ
ಇದನ್ನೂ ಓದಿ : Budget 2023 expectations: ಬಜೆಟ್ 2023: ಈ ಬಾರಿ ಕರ್ನಾಟಕದ ನಿರೀಕ್ಷೆಗಳೇನು?
ಇದನ್ನೂ ಓದಿ : Bhavani Revanna enters politics: ದೇವೇಗೌಡರ ಫ್ಯಾಮಿಲಿ ಪಾಲಿಟಿಕ್ಸ್ ಗೆ ಹೊಸ ಎಂಟ್ರಿ: ಭವಾನಿ ಸ್ಪರ್ಧೆ ಎಚ್ಡಿಕೆ ಗೆ ತಲೆನೋವು
Such a shame !!
— MJ (@MJ_007Club) January 28, 2023
Don’t be bitter, stop litter: Railways appeals to passengers after trash found in newly operational Secunderabad-Visakhapatnam Vande Bharat express.
The coaches were found to be very dirty even after the onboard housekeeping staff attended at regular intervals. pic.twitter.com/Fkp2hlzkHO
ಇನ್ನು ಹಲವರು ನಾವು ವಿದೇಶದಲ್ಲಿರುವಂತ ಸೌಲಭ್ಯಗಳನ್ನು ಕೇಳುತ್ತೇವೆ ಆದರೆ ಅದರ ನಿರ್ವಹಣೆ ವಿಚಾರ ಬಂದಾಗ ನಮ್ಮ ಜವಾಬ್ದಾರಿ ಮರೆತು ಬಿಡುತ್ತೇವೆ ಎಂಬುದು ವಿಷಾದದ ಸಂಗತಿ ಎಂದಿದ್ದಾರೆ. ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವಾಗಲೇ ವಿಮಾನದಲ್ಲಿ ಪ್ರಯಾಣಿಸುತ್ತಿರುವಂತಹ ಅನುಭವ ಪಡೆಯುವ ವಿಶೇಷತೆಯನ್ನು ಹೊಂದಿರುವ ವಂದೇ ಮಾತರಂ ರೈಲು ದೇಶದ ಮಹಾನಗರಗಳಲ್ಲಿ ಸಂಚಾರ ಆರಂಭಿಸಿದ್ದು, 2023 ಮಾರ್ಚ್ ವೇಳೆಗೆ ದೇಶದ ಎಲ್ಲೆಡೆಯೂ ವಂದೇ ಮಾತರಂ ರೈಲು ಸಂಚಾರ ಆರಂಭವಾಗೋ ನೀರಿಕ್ಷೆ ಇದೆ. ಈ ಮಧ್ಯೆ ಸಂಚಾರ ಆರಂಭಿಸಿದ ರೈಲಿಗೆ ಪ್ರಾಣಿಗಳು ಡಿಕ್ಕಿಯಾಗಿದ್ದು ಕೂಡ ಬಹುದೊಡ್ಡ ಸುದ್ದಿಯಾಗಿತ್ತು. ಈಗ ರೈಲಿನಲ್ಲಿ ಸಂಚಾರ ಮಾಡುವ ಜನರ ಬೇಜವಾಬ್ದಾರಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಆದರೆ ಇದು ಯಾವ ರೈಲಿನಲ್ಲಿ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
Vande Bharat Express train: Garbage piled up in Vande Mataram train: Tweet goes viral