ಸೋಮವಾರ, ಜೂನ್ 16, 2025
HomeNationalVijay Mallya : ವಿಜಯ್‌ ಮಲ್ಯಗೆ ಮುಗಿಯದ ಸಂಕಷ್ಟ: ನಾಲ್ಕು ತಿಂಗಳ ಶಿಕ್ಷೆ ವಿಧಿಸಿದ ಸುಪ್ರೀಂ...

Vijay Mallya : ವಿಜಯ್‌ ಮಲ್ಯಗೆ ಮುಗಿಯದ ಸಂಕಷ್ಟ: ನಾಲ್ಕು ತಿಂಗಳ ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್

- Advertisement -

ಬೆಂಗಳೂರು : 9 ಸಾವಿರ ಕೋಟಿಗೂ ಅಧಿಕ ಮೊತ್ತದ ಸಾಲ‌ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯಗೆ (Vijay Mallya ) ತಾಯ್ನೆಲದಲ್ಲೂ ಸಂಕಷ್ಟ ಎದುರಾಗಿದೆ. ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ವಿಜಯ್ ಮಲ್ಯಗೆ ನಾಲ್ಕು ತಿಂಗಳ ಸೆರೆವಾಸ ವಿಧಿಸಿದೆ. ಉದ್ಯಮಿ ವಿಜಯ್ ಮಲ್ಯಗೆ 4 ತಿಂಗಳು ಜೈಲು ಶಿಕ್ಷೆ ಪ್ರಕಟಿಸಿರುವ ಸುಪ್ರೀಂ ಕೋರ್ಟ್ ಜೊತೆಗೆ 2,000 ರೂ‌. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಎಸ್‌ಬಿಎಂ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತೀರ್ಪು ಪ್ರಕಟಿಸಿತ್ತಾದರೂ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಅಂದಾಜು 50 ದಿನಗಳ ಬೇಸಿಗೆ ವಿರಾಮದ ಬಳಿಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ಸುಪ್ರೀಂ ಕೋರ್ಟ್ ಸೋಮವಾರ ಮಲ್ಯ ಪ್ರಕರಣದ ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಉದಯ್ ಲಲಿತ್, ಪಿ.ಎಸ್.ನರಸಿಂಹ್,ಎಸ್.ರವೀಂದ್ರ್ ಭಟ್ ಅವರಿದ್ದ ನ್ಯಾಯಪೀಠವೂ ಈಗಾಗಲೇ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಲ್ಯ ತಪ್ಪಿತಸ್ಥ ಎಂದು ಘೋಷಿಸಿತ್ತು. ಆದರೆ ಈಗ ಮಲ್ಯ ಅನುಪಸ್ಥಿತಿಯಲ್ಲಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

ಸುಪ್ರೀಂ ಆದೇಶ ಉಲ್ಲಂಘಿಸಿ 2017ರಲ್ಲಿ ದೇಶ ಬಿಟ್ಟು ಹೋಗಿದ್ದ ಮಲ್ಯ, ನ್ಯಾಯಾಲಯದ ಆದೇಶ ಮೀರಿ ತನ್ನ ಮಕ್ಕಳಿಗೆ 40 ಮಿಲಿಯನ್ ಡಾಲರ್ ವರ್ಗಾಯಿಸಿದ್ದ. ಈ ಹಿನ್ನಲೆ ಯಲ್ಲಿ ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ವಿಜಯ್ ಮಲ್ಯ ತಪ್ಪಿತಸ್ಥ ಎಂದಿದ್ದ ಸುಪ್ರೀಂ ಕೋರ್ಟ್ ಇಂದು ಶಿಕ್ಷೆಯ ಪ್ರಮಾಣ ಘೋಷಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ ಬ್ಯಾಂಕ್ ಪರ ವಕೀಲರು, ಮಲ್ಯ ತಮ್ಮ ನಡವಳಿಕೆ ಬಗ್ಗೆ ಪಶ್ಚಾತ್ತಾಪ ತೋರಿಸಲಿಲ್ಲ”ಶಿಕ್ಷೆಯ ವಿಚಾರಣೆಯ ಸಮಯದಲ್ಲಿ ಹಾಜರಾಗಲಿಲ್ಲ”ಕಾನೂನಿನ ಘನತೆ ಎತ್ತಿಹಿಡಿಯಲು ಅವರಿಗೆ ಶಿಕ್ಷೆ ವಿಧಿಸಬೇಕು’ ಬ್ಯಾಂಕ್ ಒಕ್ಕೂಟದ ಪರ ವಕೀಲರ ವಾದ ಮಂಡಿಸಿದ್ದರು.

ಈ ಹಿನ್ನೆಲೆಯಲ್ಲಿ ಬ್ಯಾಂಕ್ ಒಕ್ಕೂಟದ ವಾದ ಪುರಸ್ಕರಿಸಿ ಆದೇಶಿಸಿದ ಸುಪ್ರೀಂ ಕೋರ್ಟ, ಬ್ಯಾಂಕುಗಳಿಗೆ 40 ಮಿಲಿಯನ್ ಡಾಲರ್‌ ನೀಡುವಂತೆ ಮಲ್ಯಗೆ ಸೂಚನೆ ನೀಡಿದೆ. ಅಲ್ಲದೇ 40 ಮಿಲಿಯನ್ ಯುಎಸ್ ಡಾಲರ್‌ ಗೆ 8% ಬಡ್ಡಿ ನೀಡಲು ಸೂಚಿಸಿದೆ. ಅಲ್ಲದೇ ಹಣ ನೀಡಲು ವಿಜಯ್ ಮಲ್ಯಗೆ 4 ವಾರಗಳ ಕಾಲಾವಕಾಶ ನೀಡಿರೋ ಕೋರ್ಟ್ ಹಣ ನೀಡದಿದ್ದರೆ ಆಸ್ತಿಗಳ ಅಟ್ಯಾಚ್ಮೆಂಟ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : krs dam in mandya : ತ್ರಿವರ್ಣ ದೀಪಾಲಂಕಾರದಲ್ಲಿ ಬೆಳಗಿದ ಸುಪ್ರಸಿದ್ಧ ಕೆಆರ್​ಎಸ್​ ಅಣೆಕಟ್ಟು : ವಿಡಿಯೋ ವೈರಲ್​

ಇದನ್ನೂ ಓದಿ : NEET UG 2022:ನೀಟ್ ಯುಜಿ ಅಡ್ಮಿಟ್ ಕಾರ್ಡ್ ಇಂದು ಬಿಡುಗಡೆ ಸಾಧ್ಯತೆ

Vijay Mallya in Trouble Supreme Court sentenced him to four months

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular