Rohit backs Kohli : ಔಟ್ ಆಫ್ ಫಾರ್ಮ್ ಕೊಹ್ಲಿಯನ್ನು ಡ್ರಾಪ್ ಮಾಡ್ಬೇಕಾ..? ಕ್ಯಾಪ್ಟನ್ ರೋಹಿತ್ ಏನಂದ್ರು ಕೇಳಿ

ಲಂಡನ್: ಟೀಮ್ ಇಂಡಿಯಾದ ಒಂದು ಕಾಲದ ರನ್ ಮಷಿನ್ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ. ಎರಡೂವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ಶತಕ ಬಾರಿಸಲು ವಿಫಲರಾಗಿರುವ ವಿರಾಟ್, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ದಯನೀಯ ವೈಫಲ್ಯ ಎದುರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕೇವಲ 1 ರನ್ನಿಗೆ ಔಟಾಗಿದ್ದ ಕೊಹ್ಲಿ, 2ನೇ ಪಂದ್ಯದಲ್ಲಿ ಒಂದು ಬೌಂಡರಿ, ಮತ್ತೊಂದು ಸಿಕ್ಸರ್ ಬಾರಿಸಿದ ಮುಂದಿನ ಎಸೆತದಲ್ಲೇ ಕೇವಲ 11 ರನ್ನಿಗೆ ವಿಕೆಟ್ ಒಪ್ಪಿಸಿದ್ದಾರೆ. ಔಟ್ ಆಫ್ ಫಾರ್ಮ್ ಕೊಹ್ಲಿಯನ್ನು (Rohit backs Kohli) ತಂಡದಿಂದ ಕೈಬಿಡಬೇಕು ಎಂದು ಮಾಜಿ ಕ್ರಿಕೆಟಿಗರು ಆಗ್ರಹಿಸ್ತಿದ್ದಾರೆ. ಸ್ವತಃ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಅವರೇ ಕೊಹ್ಲಿಯನ್ನು ತಂಡದಿಂದ ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದಿದ್ದಾರೆ.

ಕೊಹ್ಲಿ ಸುತ್ತ ಕೇಳಿ ಬರುತ್ತಿರುವ ಟೀಕೆಗಳಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಉತ್ತರ ಕೊಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದ ನಂತ್ರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ರೋಹಿತ್, ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ (Captain Rohit Sharma Backs Virat Kohli).

“ಹೊರಗಿನ ಟೀಕೆಗಳಿಗೆ ನಾವು ಕಿವಿಗೊಡುವುದಿಲ್ಲ ಕೊಹ್ಲಿಯನ್ನು ಟೀಕಿಸುವ ಕ್ರಿಕೆಟ್ ತಜ್ಞರು ಯಾರು ಎಂದು ನನಗೆ ತಿಳಿದಿಲ್ಲ. ಅವರನ್ನು ತಜ್ಞರು ಎಂದು ಏಕೆ ಕರೆಯುತ್ತಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ.”

  • ರೋಹಿತ್ ಶರ್ಮಾ, ಟೀಮ್ ಇಂಡಿಯಾ ನಾಯಕ.

ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಐಸಿಸಿ ಟಿ20 ವಿಶ್ವಕಪ್”ನಲ್ಲಿ ಆಡಲಿರುವ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆಯೇ ಎಂಬ ಬಗ್ಗೆ ಅನುಮಾನಗಳು ಎದ್ದಿವೆ. ಮುಂದಿನ ಆಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಗೆ ಕೊಹ್ಲಿಯನ್ನು ಪರಿಗಣಿಸದಿರುವಂತೆ ಗೌತಮ್ ಗಂಭೀರ್ ಸಹಿತ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ಹೇಳಿಕೆ ಇದಕ್ಕೆ ತದ್ವಿರುದ್ಧವಾಗಿದೆ.

“ನಾವು ಉತ್ತಮ ತಂಡವನ್ನು ನಿರ್ಮಿಸುತ್ತಿದ್ದೇವೆ, ನಮಗೆ ನಮ್ಮದೇ ಆದ ಆಲೋಚನೆಗಳಿವೆ. ಆಟಗಾರರಿಗೆ ತಂಡದ ಸಂಪೂರ್ಣ ಬೆಂಬಲವಿದೆ, ಯುವ ಆಟಗಾರರಿಗೆ ಅವಕಾಶಗಳನ್ನು ನೀಡಲಾಗುತ್ತದೆ. ಹೊರಗಿನ ಜನರಿಗೆ ಇದೆಲ್ಲಾ ಅರ್ಥವಾಗುವುದಿಲ್ಲ, ಹೊರಗೆ ಏನು ಮಾತನಾಡುತ್ತಾರೆ ಎಂಬುದು ನಮಗೆ ಮುಖ್ಯವಾಗುವುದಿಲ್ಲ’’.

  • ರೋಹಿತ್ ಶರ್ಮಾ, ಟೀಮ್ ಇಂಡಿಯಾ ನಾಯಕ.

“ನಾನೂ ಕೂಡ ಫಾರ್ಮ್ ಕಳೆದುಕೊಂಡಿದ್ದೆ, ನನಗೂ ಇದೇ ರೀತಿಯ ಅನುಭವ ಆಗಿದೆ. ಎಲ್ಲಾ ಆಟಗಾರರ ವೃತ್ತಿಬದುಕಿನಲ್ಲಿ ಏರಿಳಿತ ಸರ್ವೇ ಸಾಮಾನ್ಯ ಇದು ಹೊಸದೇನೂ ಅಲ್ಲ, ಕೆಲ ಆಟಗಾರರು ಇಷ್ಟು ವರ್ಷಗಳ ಕಾಲ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿರುವಾಗ, ಒಂದೆರಡು ಸರಣಿ, ಪಂದ್ಯಗಳಲ್ಲಿ ಅವರ ಸಾಮರ್ಥ್ಯವನ್ನು ನಿರ್ಧರಿಸುವುದು ಸರಿಯಲ್ಲ. ಕೊಹ್ಲಿಯನ್ನು ಟೀಕಿಸುವವರು ಮೊದಲು ಇದನ್ನು ಅರ್ಥ ಮಾಡಿಕೊಳ್ಳಲಿ, ತಂಡವನ್ನು ನಡೆಸುತ್ತಿರುವವರಿಗೆ ಕೊಹ್ಲಿ ಆಟದ ಗುಣಮಟ್ಟ ತಿಳಿದಿದೆ,’’ ಎನ್ನುವ ಮೂಲಕ ಕೊಹ್ಲಿ ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ : Rohit Best T20 Captain: ಟಿ20 ನಾಯಕತ್ವ: ಬೆಸ್ಟ್ ವಿನ್ %ನಲ್ಲಿ ಹಿಟ್ ಮ್ಯಾನ್ ರೋಹಿತ್ ಈಗ ಜಗತ್ತಿಗೇ ನಂ.1 ಕ್ಯಾಪ್ಟನ್

ಇದನ್ನೂ ಓದಿ : Dinesh Karthik Alex Wharf : 2004ರಲ್ಲಿ ಡಿಕೆ ಜೊತೆ ಆಡಿದ್ದ ಇಂಗ್ಲೆಂಡ್ ಆಟಗಾರ, ಈಗ ಡಿಕೆ ಆಡುತ್ತಿರುವಾಗ ಅಂಪೈರ್

Rohit backs Kohli Should out of form Kohli be dropped ? Ask Captain Rohit

Comments are closed.