Ghebreyesus On 3-day Visit To Gujarat : ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟಡ್ರೋಸ್ ಗೆಬ್ರೆಯೆಸಸ್ ಮೂರು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ಇಂದು ಭಾರತಕ್ಕೆ ಭೇಟಿ ನೀಡಲಿರುವ ಟಡ್ರೋಸ್ ಗೆಬ್ರೆಯೆಸಸ್ ಪ್ರಧಾನಿ ನರೇಂದ್ರ ಮೋದಿಯ ಜೊತೆಯಲ್ಲಿ ಗುಜರಾತ್ನಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಭಾರತ ಪ್ರವಾಸದ ಮೂರೂ ದಿನಗಳು ಅವರು ಗುಜರಾತ್ನಲ್ಲಿಯೇ ಇರಲಿದ್ದಾರೆ.
ಇಂದು ರಾಜ್ಕೋಟ್ಗೆ ಆಗಮಿಸರಲಿರುವ ಗೆಬ್ರೆಯೆಸಸ್ ರಾತ್ರಿ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿ ಗೆಬ್ರೆಯೆಸಿಸ್ ವಿಶ್ವ ಆರೋಗ್ಯ ಸಂಸ್ಥೆಯ ಪಾರಂಪರಿಕ ಔಷಧ ಪದ್ಧತಿ ಜಾಗತಿಕ ಕೇಂದ್ರಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಇದು ವಿಶ್ವದಲ್ಲೇ ಮೊದಲ ಪಾರಂಪರಿಕ ಔಷಧ ಜಾಗತಿಕ ಕೇಂದ್ರವಾಗಿದೆ . ಈ ಬಗ್ಗೆ ರಾಜ್ಕೋಟ್ನ ಜಿಲ್ಲಾಧಿಕಾರಿ ಅರುಣ್ ಮಹೇಶ್ ಬಾಬು ಮಾಹಿತಿ ನೀಡಿದರು.
ಟಡ್ರೋಸ್ ಗೆಬ್ರೆಯಸಿಸ್ ಮಾತ್ರವಲ್ಲದೇ ಇಂದು ಮಾರಿಷಸ್ ಪ್ರಧಾನಿ ಪ್ರವೀಂದ್ ಕುಮಾರ್ ಜಗನ್ನಾಥ ಕೂಡ ರಾಜ್ಕೋಟ್ಗೆ ಭೇಟಿ ನೀಡಲಿದ್ದಾರೆ.
ಬುಧವಾರದಂದು ಗಾಂಧಿ ನಗರಕ್ಕೆ ಭೇಟಿ ನೀಡಲಿರುವ ಟಡ್ರೋಸ್ ಗೆಬ್ರೆಯೆಸಸ್ ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿ ಅಲ್ಲಿ ಜಾಗತಿಕ ಆಯುಷ್ ಹೂಡಿಕೆ ಹಾಗೂ ನಾವೀನ್ಯ ಶೃಂಗಸಭೆಗೆ ಚಾಲನೆ ನೀಡುವವರಿದ್ದಾರೆ. ಮೂರು ದಿನಗಳ ಶೃಂಗಸಭೆಯು ಮಹಾತ್ಮ ಮಂದಿರದಲ್ಲಿ ನಡೆಯಲಿದೆ. ಈ ಶೃಂಗಸಭೆಯಲ್ಲಿ 100 ಮಂದಿ ಪ್ರದರ್ಶಕರು ಹಾಗೂ 90 ಮಂದಿ ಭಾಷಣಕಾರರು ಭಾಗಿಯಾಗಲಿದ್ದಾರೆ.
ಗುಜರಾತ್ನಲ್ಲಿ ಪ್ರಧಾನಿ ಮೋದಿಯು 600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬನಸಕಾಂಠಾ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿರುವ ಡೈರಿ ಕಾಂಪ್ಲೆಕ್ಸ್ ಹಾಗೂ ಆಲೂಗಡ್ಡೆ ಸಂಸ್ಕರಣಾ ಘಟಕವನ್ನು ಉದ್ಘಾಟನೆ ಮಾಡಲಿದ್ದಾರೆ. ದಾಹೋದ್ನಲ್ಲಿ 22 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ.
1700 ಗ್ರಾಮಗಳ 5 ಲಕ್ಷ ರೈತರಿಗೆ ನೆರವಾಗುವಂತಹ ಬನಾಸ್ ಸಮುದಾಯ ರೇಡಿಯೋ ಸ್ಟೇಷನ್ ಲೋಕಾರ್ಪಣೆಗೊಳಿಸಲಿದ್ದಾರೆ. ಇದು ರೈತರಿಗೆ ಕೃಷಿ ಹಾಗೂ ಪಶು ಸಂಗೋಪನೆ ವಿಚಾರದಲ್ಲಿ ವೈಜ್ಞಾನಿಕ ಮಾಹಿತಿಗಳನ್ನು ನೀಡಲಿದೆ.
ಇದನ್ನು ಓದಿ : ಬಸ್ ಗಳಿಗೆ ಬೆಂಕಿ ಕಾಟ : MIDI BUSಗಳ ಓಡಾಟವನ್ನೇ ನಿಲ್ಲಿಸಿದ ಬಿಎಂಟಿಸಿ
ಇದನ್ನೂ ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್
WHO Chief Tedros Ghebreyesus On 3-day Visit To Gujarat From Today; Will Meet PM Modi