Term 2 Exams 2022: CBSE, CISCE ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ವಿದ್ಯಾರ್ಥಿಗಳ ಮನವಿ

ದೇಶದಲ್ಲಿ ಕೋವಿಡ್​ ಪ್ರಕರಣಗಳು ತಹಬಧಿಗೆ ಬರುತ್ತಿದ್ದಂತೆಯೇ ಶಿಕ್ಷಣ ವ್ಯವಸ್ಥೆಯು ಸಾಮಾನ್ಯ ಸ್ಥಿತಿಗೆ ತಲುಪಿತ್ತು. ಭೌತಿಕ ತರಗತಿಗಳು ಹಾಗೂ ಪರೀಕ್ಷೆಗಳು ಹೀಗೆ ಎಲ್ಲವೂ ಸಾಮಾನ್ಯ ಸ್ಥಿತಿಯಲ್ಲಿಯೇ ನಡೆಯುತ್ತಿದೆ. ಈ ಎಲ್ಲದರ ನಡುವೆ ಇದೀಗ ದೇಶದಲ್ಲಿ ಕೊರೊನಾ ಪ್ರಕರಣಗಳು ಮತ್ತೊಮ್ಮೆ ಏರಿಕೆ ಕಾಣುತ್ತಿದ್ದು ಇದರಿಂದಾಗಿ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳ ಪೋಷಕರು ಸೆಂಟ್ರಲ್​ ಬೋರ್ಡ್ ಆಫ್​ ಸೆಕೆಂಡರಿ ಎಜುಕೇಷನ್​​, ಕೌನ್ಸಿಲ್​ ಫಾರ್​ ದಿ ಇಂಡಿಯನ್​ ಸ್ಕೂಲ್​ ಸರ್ಟಿಫಿಕೇಟ್​ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ(Term 2 Exams 2022) ಆಗ್ರಹಿಸುತ್ತಿದ್ದಾರೆ.

CISCE ICSE, ISCಗಳ 2ನೇ ಸೆಮಿಸ್ಟರ್​ ಪರೀಕ್ಷೆಗಳು ಇದೇ ಬರುವ 25ನೇ ತಾರೀಖಿನಿಂದ ಆರಂಭಗೊಳ್ಳಲಿವೆ. CBSE ಟರ್ಮ್ 2 ಪರೀಕ್ಷೆಗಳು ಏಪ್ರಿಲ್ 26 ರಿಂದ ನಡೆಯಲಿದೆ. ಆದರೆ ಈಗ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವದರಿಂದ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿಯೇ ಕೊರೊನಾ ಸೋಂಕು ವಕ್ಕರಿಸದರೆ ಆರೋಗ್ಯದ ಜೊತೆಯಲ್ಲಿ ಮಕ್ಕಳ ಭವಿಷ್ಯವೂ ಹಾಳಾಗುತ್ತದೆ ಎಂಬುದು ಪೋಷಕರ ಚಿಂತನೆಯಾಗಿದೆ.


ಈ ವಿಚಾರವಾಗಿ ಆತಂಕ ಹೊರ ಹಾಕಿದ ವಿದ್ಯಾರ್ಥಿ ಸುಕಮಲ್​ ಜಾ, ನಾನು ಕಳೆದ ವರ್ಷ ಟರ್ಮ್​ 1 ಪರೀಕ್ಷೆಯ ಸಂದರ್ಭದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದೆ.ಸೋಂಕಿನಿಂದ ನಾನು ಸಾಕಷ್ಟು ಬಳಲಿದ್ದೇನೆ, ನಾನು ಕೊರೊನಾ ಲಸಿಕೆಗಳನ್ನು ಸ್ವೀಕರಿಸಿದ್ದರೂ ಸಹ ಮತ್ತೆ ಸೋಂಕು ತಾಕಬಹುದು ಎಂಬ ಆತಂಕ ನನ್ನ ಓದಿಗೆ ಅಡ್ಡಿ ಪಡಿಸುತ್ತಿದೆ. ನಾನು ಮಾನಸಿಕವಾಗಿ ಟರ್ಮ್​ 2 ಪರೀಕ್ಷೆಗೆ ಹಾಜರಾಗಲು ಸಿದ್ಧನಿಲ್ಲ. ಹೀಗಾಗಿ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿ ಮೌಲ್ಯಮಾಪನ ನಡೆಸಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕು ಎಂದು ನಾನು ಸಿಬಿಎಸ್​​ಇಗೆ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.


ಇತ್ತ ಇದೇ ವಿಚಾರವಾಗಿ ಮಾತನಾಡಿದ ಪೋಷಕ ಝಾ,ಕೋವಿಡ್​ ಸೋಂಕಿನಿಂದಾಗಿ ನನ್ನ ಪುತ್ರ ಟರ್ಮ್​ 1 ಪರೀಕ್ಷೆಯ ಸಂದರ್ಭದಲ್ಲಿ ಉತ್ತಮ ಫಲಿತಾಂಶವನ್ನು ಹೊಂದಲು ಸಾಧ್ಯವಾಗಲಿಲ್ಲ.ಈ ಬಾರಿ ಕೂಡ ಆತ 12ನೇ ತರಗತಿ ಪರೀಕ್ಷೆಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧನಿಲ್ಲ. ಆತನ ಭವಿಷ್ಯದ ಬಗ್ಗೆ ನನಗೆ ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : Ghebreyesus On 3-day Visit To Gujarat : ಮೂರು ದಿನಗಳ ಗುಜರಾತ್​ ಪ್ರವಾಸದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

ಇದನ್ನೂ ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್‌

Cancel CBSE, CISCE 10th, 12th Term 2 Exams 2022, Demand Students Amid Rise In COVID-19 Cases

Comments are closed.