ಆಂಧ್ರ ಪ್ರದೇಶ : Husband Married to Another Woman : ಹೆಣ್ಣು ಏನನ್ನು ಬೇಕಿದ್ದರೂ ಹಂಚಿಕೊಳ್ಳುತ್ತಾಳೆ. ಆದರೆ ತನ್ನ ಪತಿಯನ್ನು ಮಾತ್ರ ಹಂಚಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಮಾತೊಂದಿದೆ. ಸಂಗಾತಿ ವಿಚಾರದಲ್ಲಿ ಹೆಣ್ಣು ಯಾವುದೇ ಕಾರಣಕ್ಕೂ ಯಾವುದೇ ರಾಜಿಗೆ ಬಗ್ಗುವುದಿಲ್ಲ. ಆದರೆ ಆಂಧ್ರಪ್ರದೇಶದ ತಿರುಪತಿಯಲ್ಲಿ ಮಾತ್ರ ಈ ಮಾತಿಗೆ ತದ್ವಿರುದ್ಧವಾದ ಘಟನೆಯೊಂದು ನಡೆದು ಹೋಗಿದೆ. ಇಲ್ಲಿನ ಮಹಿಳೆಯೊಬ್ಬರು ತಮ್ಮ ಪತಿಯ ವಿವಾಹವನ್ನು ದೇವಸ್ಥಾನದಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ನೆರವೇರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಕಲ್ಯಾಣ್ ಎಂಬ ವ್ಯಕ್ತಿಯು ಮೂಲತಃ ತಿರುಪತಿಯ ದಕ್ಕಿಲಿ ಅಂಬೇಡ್ಕರ್ ನಗರದ ನಿವಾಸಿಯಾಗಿದ್ದಾರೆ. ಇವರು ಯುಟ್ಯೂಬ್ ಹಾಗೂ ಶೇರ್ಚಾಟ್ಗಳಂತ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಜನಪ್ರಿಯ ಸೆಲೆಬ್ರಿಟಿ ಎನಿಸಿದ್ದಾರೆ. ಈ ವ್ಯಕ್ತಿಯ ಕಡಪ ಮೂಲದ ವಿಮಲಾ ಎಂಬಾಕೆ ಜೊತೆ ಪರಿಚಯವಾಗಿತ್ತು. ಈ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಕೆಲವೇ ವರ್ಷಗಳ ಹಿಂದೆ ಇಬ್ಬರೂ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದರು. ಇಬ್ಬರೂ ಸೇರಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಇಷ್ಟವಾಗುವಂತಹ ವಿಡಿಯೋಗಳನ್ನು ಹರಿಬಿಡುವ ಮೂಲಕ ಸ್ಥಳೀಯ ಸೆಲೆಬ್ರಿಟಿ ಎನಿಸಿದ್ದರು.
ಇಬ್ಬರ ವೈವಾಹಿಕ ಜೀವನ ತುಂಬಾನೇ ಚೆನ್ನಾಗಿತ್ತು. ಆದರೆ ಕೆಲವು ಸಮಯದಿಂದ ಪತಿ ಕಲ್ಯಾಣ್ ಅಷ್ಟೊಂದು ಸಂತೋಷವಾಗಿಲ್ಲ ಎಂಬುದು ವಿಮಲಾ ಗಮನಕ್ಕೆ ಬರತೊಡಗಿತು. ಇದೇ ಸಂದರ್ಭದಲ್ಲಿ ವಿಶಾಖಪಟ್ಟಣಂನ ನಿತ್ಯಶ್ರೀ ಎಂಬವರು ಇವರ ನಿವಾಸಕ್ಕೆ ಬಂದಿದ್ದಾರೆ. ಈಕೆ ಕೂಡ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಈಕೆ ತಾನು ಹಾಗೂ ಕಲ್ಯಾಣ್ ಹಿಂದೆ ಪರಸ್ಪರ ಪ್ರೀತಿಸಿದ್ದು ಕಾಲಾಂತರದಲ್ಲಿ ನಾವು ದೂರವಾಗಿ ಇಲ್ಲಿಯವರೆಗೆ ನಾವು ಒಬ್ಬರ ಮುಖ ಒಬ್ಬರು ನೋಡಿಲ್ಲ ಎಂಬ ವಿಚಾರವನ್ನು ಹೇಳಿದ್ದಾಳೆ .
ಆದರೆ ಕಲ್ಯಾಣ್ ಈಗಾಗಲೇ ಮದುವೆಯಾಗಿದ್ದಾನೆ ಎಂಬ ವಿಚಾರವನ್ನು ತಿಳಿದ ನಿತ್ಯಶ್ರೀ ವಿಮಲಾ ಬಳಿಯಲ್ಲಿ ನನಗೂ ಕಲ್ಯಾಣ್ ಪತ್ನಿಯಾಗಲು ಅವಕಾಶ ನೀಡುವಂತೆ ಬೇಡಿಕೊಂಡಿದ್ದಾಳೆ. ಅಲ್ಲದೇ ನಾವು ಮೂವರು ಒಂದೇ ಮನೆಯಲ್ಲಿ ವಾಸಿಸೋಣ ಎಂದೂ ಸಹ ಹೇಳಿದ್ದಾಳೆ. ಸಾಕಷ್ಟು ಚರ್ಚೆಯ ಬಳಿಕ ವಿಮಲಾ ನಿತ್ಯಶ್ರೀಯ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹಾಗೂ ದೇವಸ್ಥಾನದಲ್ಲಿ ತಾನೇ ಮುಂದೆ ನಿಂತು ನಿತ್ಯಶ್ರೀ ಮತ್ತು ಕಲ್ಯಾಣ್ ವಿವಾಹವನ್ನು ನೆರವೇರಿಸಿದ್ದಾರೆ. ಈ ಮೂವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದು ವಿಡಿಯೋ ಸಖತ್ ವೈರಲ್ ಆಗಿದೆ.
ಇದನ್ನು ಓದಿ : medical students :ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಆಘಾತಕಾರಿ ಮಾಹಿತಿ
ಇದ್ನೂ ಓದಿ : terrorist organization ISIS:ನಿಷೇಧಿತ ಐಎಸ್ ಉಗ್ರ ಸಂಘಟನೆಯೊಂದಿಗೆ ನಂಟು ಶಂಕೆ : ಹಣ್ಣಿನ ವ್ಯಾಪಾರಿ ಬಂಧನ
Wife Gets Husband Married to Another Woman in AP, Trio to Live in Same House