iPhone 14 :ಅಬ್ಬಾ..ಅದೃಷ್ಟ ಅಂದರೆ ಇದು : ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 13 ಆರ್ಡರ್​ ಮಾಡಿದವನಿಗೆ ಸಿಕ್ಕಿದ್ದು ಐಫೋನ್​ 14

iPhone 14 Flipkart : ಭಾರತದಲ್ಲಿ ದಸರಾ ಹಬ್ಬದ ಸಂಭ್ರಮಕ್ಕೆ ನಿನ್ನೆಯಷ್ಟೇ ತೆರೆ ಬಿದ್ದಿದೆ. ವಿಜಯ ದಶಮಿ ಸಂಭ್ರಮ ಮನೆಯಲ್ಲಿ ಒಂದು ರೀತಿ ಇದ್ದರೆ ನವರಾತ್ರಿ ಹಾಗೂ ದಶಮಿಯ ಪ್ರಯುಕ್ತ ಆನ್​ಲೈನ್​ ಶಾಪಿಂಗ್​ ಆ್ಯಪ್​ಗಳಲ್ಲಿಯೂ ಜನರಿಗೆ ವಿವಿಧ ಆಫರ್​ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕಾರ್ಯವನ್ನು ಮಾಡಲಾಗ್ತಿತ್ತು. ಹೆಚ್ಚಿನ ಜನರು ಆನ್​ಲೈನ್​ ಸೈಟ್​ಗಳ ಆಫರ್​ಗಳನ್ನು ನೋಡಿ ಮೊಬೈಲ್​ ಸೇರಿದಂತೆ ವಿವಿಧ ವಸ್ತುಗಳನ್ನು ಆರ್ಡರ್​ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಮೊಬೈಲ್​ ಬುಕ್​ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಮೊಬೈಲ್​ ಬದಲಿಗೆ ಸೋಪುಗಳು ಸಿಕ್ಕಿದ್ದ ಘಟನೆಯೊಂದು ವರದಿಯಾಗಿತ್ತು.ಇದಾದ ಬಳಿಕ ಆನ್​ಲೈನ್​ ಮಾರುಕಟ್ಟೆಗಳನ್ನು ಹಾಗೂ ಅವುಗಳ ಹಬ್ಬದ ಆಫರ್​ಗಳನ್ನು ನಂಬೋದು ಹೇಗಪ್ಪ ಎಂಬ ಪ್ರಶ್ನೆ ಕೂಡ ಎದುರಾಗಿತ್ತು. ಆದರೆ ಇಲ್ಲೊಬ್ಬ ವ್ಯಕ್ತಿ ಎಂತಾ ಅದೃಷ್ಟ ಮಾಡಿದ್ದ ಅಂದರೆ ಐಫೋನ್​ 13 ಬುಕ್​ ಮಾಡಿದ್ದ ಈತನಿಗೆ ಫ್ಲಿಪ್​ಕಾರ್ಟ್ ಐಫೋನ್​ 14 ಮೊಬೈಲ್​ನ್ನು ಕಳುಹಿಸಿಕೊಟ್ಟಿದ್ದು ಈ ವ್ಯಕ್ತಿಯ ಸಂತೋಷಕ್ಕೆ ಪಾರವೇ ಇಲ್ಲ ಎಂಬಂತಾಗಿದೆ.

ಟ್ವಿಟರ್​ ಬಳಕೆದಾರ ಅಶ್ವಿನ್​ ಹೆಗ್ಡೆ ಈ ವಿಚಾರವಾಗಿ ಟ್ವೀಟಾಯಿಸಿದ್ದು ಇವರ ಫಾಲೋವರ್​ಗಳಲ್ಲಿ ಒಬ್ಬರು ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 13 ಬುಕ್​ ಮಾಡಿದ್ದರು. ಆದರೆ ಅವರಿಗೆ ಐಫೋನ್​ 13 ಬದಲಾಗಿ ಐಫೋನ್​ 14 ನೀಡಲಾಗಿದೆ. ಈ ಸಂಬಂಧ ಸ್ಕ್ರೀನ್​ ಶಾಟ್​ ಕೂಡ ಶೇರ್​ ಮಾಡಿದ್ದಾರೆ. ಈ ಟ್ವೀಟ್​ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಈತನ ಅದೃಷ್ಟವೇ ಎಂದು ಅನೇಕರು ಮಾತನಾಡಿಕೊಳ್ತಿದ್ದಾರೆ. ಇನ್ನೂ ಕೆಲವರು ಐಫೋನ್​ 14 ಬಂತೆಂದು ಹಿರಿಹಿರಿ ಹಿಗ್ಗಬೇಡಿ.ಅದು ಸರಿಯಾಗಿ ಕೆಲಸ ಮಾಡುತ್ತದೆಯೇ ಎಂಬುದನ್ನು ಮೊದಲು ಗಮನಿಸಿ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ : Taali Sushmita sen:ಮಂಗಳಮುಖಿ ಪಾತ್ರದಲ್ಲಿ ವಿಶ್ವ ಸುಂದರಿ ಸುಶ್ಮಿತಾ ಸೆನ್‌ : ತಾಲಿ ಸೀರಿಸ್ ಫಸ್ಟ್ ಲುಕ್‌ ಬಿಡುಗಡೆ

ಇದನ್ನೂ ಓದಿ : Bumrah hits back at critics : ಟಿ20 ವಿಶ್ವಕಪ್‌ನಿಂದ ಔಟ್: ಟೀಕಾಕಾರರನ್ನು ಬೊಗಳುವ ನಾಯಿಗೆ ಹೋಲಿಸಿದ ಜಸ್‌ಪ್ರೀತ್ ಬುಮ್ರಾ

ಇದನ್ನೂ ಓದಿ : Jio and Airtel 5G Network : ನಿಮ್ಮ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡ್ತಾ ಇದೆಯಾ ಅಥವಾ ಇಲ್ಲವಾ; ಹೀಗೆ ಚೆಕ್‌ ಮಾಡಿ…

Man Orders iPhone 13 From Flipkart, Receives iPhone 14 Instead

Comments are closed.