ಮಾಸ್ಕ್‌ ಹಾಕದೆ ವಿಮಾನ ಹತ್ತುವಂತಿಲ್ಲ: ಮಾಸ್ಕ್‌ ಧರಿಸದವರ ವಿರುದ್ದ ಹೈಕೋರ್ಟ್‌ ಗರಂ

ಬೆಂಗಳೂರು : ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಕೊರೋನಾ ಸೋಂಕಿನ ಪ್ರಮಾಣ ನಿಧಾನಕ್ಕೆ ಏರಿಕೆಯಾಗುತ್ತಿದೆ. ಸಕ್ರಿಯ ಕೊರೋನಾ ಪ್ರಕರಣಗಳ ಜೊತೆಗೆ ಪಾಸಿಟಿವಿಟಿ ದರವೂ ನಿಧಾನಕ್ಕೆ ಏರುಮುಖವಾಗುತ್ತಿದೆ. ಜನರು ಮಾಸ್ಕ್ ಧರಿಸುವುದನ್ನೇ ಮರೆತಿದ್ದು, ಸೋಷಿಯಲ್ ಡಿಸ್ಟನ್ಸ್ ಕೂಡ ಇಲ್ಲದೇ ಓಡಾಡಲಾರಂಭಿಸಿದ್ದಾರೆ. ಇಂಥಹವರಿಗೆ ದೆಹಲಿ ಹೈಕೋರ್ಟ್ ಚಾಟಿ ಬೀಸಿದ್ದು ಮಾಸ್ಕ್ ಧರಿಸದವರಿಗೆ ಫ್ಲೈಟ್ ಗಳಲ್ಲಿ (with out Mask Not Travel Flight ) ಅವಕಾಶ ನೀಡದಂತೆ ಆದೇಶ ಹೊರಡಿಸಿದೆ.

ಮಾಸ್ಕ್ ವಿಚಾರಕ್ಕೆ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಕೇಸ್ ವೊಂದರ ವಿಚಾರಣೆ ನಡೆಸಿದ ಘನ ನ್ಯಾಯಾಲಯ, ವಿಮಾನ ನಿಲ್ದಾಣ ಮತ್ತು ವಿಮಾನಗಳಲ್ಲಿ ಮಾಸ್ಕ್ ಕಡ್ಡಾಯ ವಾಗಿ ಧರಿಸಬೇಕು. ಮಾಸ್ಕ್ ಧರಿಸದ ಪ್ರಯಾಣಿಕರಿಗೆ ವಿಮಾನ ಏರಲು ಅವಕಾಶ ಕೊಡಬೇಡಿ ಎಂದು ಆದೇಶಿಸಿದೆ. ಅಲ್ಲದೇ ಮಾಸ್ಕ್ ಧರಿಸದೇ ವಿಮಾನ ಏರುವವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಿ, ನೋ ಪ್ಲೈ ಲಿಸ್ಟ್ ಗೆ ಸೇರಿಸಿ ಎಂದು ವಿಮಾನಯಾನ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ಹೇಳಿದೆ.

ಕೊರೋನಾ ಸಂಪೂರ್ಣ ಮರೆಯಾಗಿಲ್ಲ. ಬೇರೆ ಬೇರೆ ರೂಪದಲ್ಲಿ ಇನ್ನೂ ಮನುಷ್ಯರನ್ನು ಕಾಡುತ್ತಲೇ ಇದೆ. ಹೀಗಿದ್ದರೂ ಜನರು ಸಾಮಾಜಿಕ ಜವಾಬ್ದಾರಿ ಮರೆತಿದ್ದು, ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಓಡಾಡಿ ರೋಗಕ್ಕೆ ಆಹ್ವಾನ ನೀಡುತ್ತಿದ್ದಾರೆ. ಅದರಲ್ಲೂ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ನ ಅಗತ್ಯವಿದ್ದು, ಅಲ್ಲಿಯೂ ಕೊರೋನಾ ನಿಯಮ ಪಾಲನೆಯಾಗುತ್ತಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘ ನಡೆಸಿದ್ದರು. ಅಲ್ಲದೇ ಈ ಪ್ರಕರಣದ ವಿಚಾರಣೆ ಹಾಗೂ ಆದೇಶದ ಬಳಿಕ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಲು ಡಿಸಿಜಿಐಗೆ ಹೈಕೋರ್ಟ್ ಸೂಚನೆ ನೀಡಿದೆ.

ಉಪಹಾರದ ಸಮಯ ಹೊರತುಪಡಿಸಿ ಉಳಿದ ಎಲ್ಲಾ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೊವೀಡ್ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳಲು ಹೈಕೋರ್ಟ್ ಸೂಚಿಸಿದೆ. ಈ ಹಿಂದೆಯೂ ದೆಹಲಿ ಕೊರೋನಾದಿಂದ ಅತಿ ಹೆಚ್ಚು ಬಾಧಿತವಾಗಿದ್ದು, ಲಾಕ್ ಡೌನ್ ಸೇರಿದಂತೆ ಹಲವು ಕಠಿಣ ಕ್ರಮ ಜಾರಿಗೆ ತರಲಾಗಿತ್ತು. ಆದರೆ ಈಗ ಜನರು ಎಲ್ಲ ಮರೆತಿದ್ದು ಮಾಸ್ಕ್ ಧರಿಸದೇ ಓಡಾಡಿ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ : Black Friday : ಕರಾಳ ಶುಕ್ರವಾರ : ಪ್ರತ್ಯೇಕ ಅಪಘಾತ 13 ಮಂದಿ ದುರ್ಮರಣ

ಇದನ್ನೂ ಓದಿ : ಸಿಇಟಿ ಹಾಲ್ ಟಿಕೆಟ್ ಬಿಡುಗಡೆ : ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

with out Mask Not Travel Flight High Court Warning

Comments are closed.