ಬೆಂಗಳೂರು : ಯಲಹಂಕ ಬಳಿಯ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟು ಉದ್ಘಾಟಿಸೋದಕ್ಕೆ ಹೊರಟಿದ್ದ ಬಿಜೆಪಿ ಕ್ರಮ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದವು. ಇದೀಗ ವಿವಾದಿತ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಬದಲು ಮಾಜಿ ಪ್ರಧಾನಿ ಕನ್ನಡಿಗ ಎಚ್.ಡಿ.ದೇವೇಗೌಡರ ಹೆಸರಿಡುವುದೇ ಸೂಕ್ತವೆಂಬ ಕೂಗು ಕೇಳಿಬಂದಿದೆ.

ಬೆಂಗಳೂರಿನ ಯಲಹಂಕದ ಮದರ್ ಡೈರಿ ವೃತ್ತದಲ್ಲಿ ನಿರ್ಮಾಣವಾಗಿರುವ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಸರಕಾರ ಸೇತುವೆ ಉದ್ಘಾಟನೆಯನ್ನೇ ಮುಂದೂಡಿತ್ತು. ಮಾತ್ರವಲ್ಲ ಈ ಕುರಿತು ಕಾಂಗ್ರೆಸ್, ಜೆಡಿಎಸ್ ವಿರೋಧದ ನಡುವಲ್ಲೇ ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಈ ನಡುವಲ್ಲೇ ಕಾಂಗ್ರೆಸ್ ಪಕ್ಷದ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ಧನಂಜಯ್ ಮುಖ್ಯಮಂತ್ರಿ ಬಿ,ಎಸ್.ಯಡಿಯೂರಪ್ಪಗೆ ಪತ್ರಬರೆದಿದ್ದಾರೆ.

ದೇವೇಗೌಡರು ಕರ್ನಾಟಕದ ಹೆಮ್ಮೆಯ ನಾಯಕ. ದೇಶದ ಉನ್ನತ ಹುದ್ದೆಗೇರಿದ ಏಕೈಕ ಕನ್ನಡಿಗ. ದೇವೇಗೌಡರು ದೇಶದ ಪ್ರಧಾನಿಯಾಗಿ 25 ವಸಂತಗಳು ಪೂರೈಸಿದೆ. ಹೀಗಾಗಿ ಅವರು ರಾಜ್ಯಕ್ಕೆ ನೀಡಿರುವ ಸೇವೆಯನ್ನು ಪರಿಗಣಿಸಿ ಯಲಹಂಕ ಮೇಲ್ಸೇತುವೆಯ ಸಾವರ್ಕರ್ ಬದಲು ದೇವೇಗೌಡರ ಹೆಸರನ್ನೇ ಇಡುವುದು ಸೂಕ್ತ ಎಂದು ತಿಳಿಸಿದ್ದಾರ

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಡುವುದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕಾಂಗ್ರೆಸ್ ಬರೆದಿರುವ ಪತ್ರ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಾಂಗ್ರೆಸ್ ಪತ್ರಕ್ಕೆ ಬಿಜೆಪಿ ಯಾವ ಉತ್ತರ ನೀಡುತ್ತೆ ಅನ್ನುವು ಕುತೂಹಲವೂ ಮೂಡಲಾರಂಭಿಸಿದೆ. ಒಟ್ಟಿನಲ್ಲಿ ಯಲಹಂಕ ಮೇಲ್ಸೇತುವೆ ವಿವಾದ ಇದೀಗ ಹೊಸ ತಿರುವುದು ಪಡೆದುಕೊಂಡಿದೆ.