ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾಗೆ ಹುಟ್ಟುಹಬ್ಬದ ಸಂಭ್ರಮ

0

ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾಗೆ ಇಂದು 33ನೇ ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್​ ಹಿರಿಯ ನಟ ಶತ್ರುಘ್ನ ಸಿನ್ಹಾ ಮತ್ತು ಪೂನಂ ದಂಪತಿಯ ಕಿರಿಯ ಮಗಳಾಗಿರೋ ಸೋನಾಕ್ಷಿ ಸಿನ್ಹಾ ಬಾಲಿವುಡ್ ನ ಬಹುಬೇಡಿಕೆಯ ನಟಿ.

2010ರಲ್ಲಿ ತೆರೆಕಂಡ ದಬಂಗ್ ಚಿತ್ರದೊಂದಿಗೆ ಸಿನಿ ಪಯಣ ಆರಂಭಿಸಿದ ಸೋನಾಕ್ಷಿ ಸಿನ್ಹಾ, ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವ ಮೊದಲು ಮಾಡೆಲಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್​​ ಹೆಸರು ಮಾಡಿದ್ದರು.

2008 ಮತ್ತು 2009ರ ಲ್ಯಾಕ್ಮೆ ಫ್ಯಾಷನ್ ವೀಕ್​ನ ರ‍್ಯಾಂಪ್​ನಲ್ಲೂ ಹೆಜ್ಜೆ ಹಾಕಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದಾಗಲೇ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದರು.

ಸೋನಾಕ್ಷಿ ಸಿನ್ಹಾ, ದಬಾಂಗ ಚಿತ್ರದಲ್ಲಿ ನಟಿಸೋ ಸಲುವಾಗಿಯೇ ಸಲ್ಮಾನ್ ಖಾನ್ ಸೂಚನೆಯ ಮೇರೆಗೆ ಬರೋಬ್ಬರಿ 30 ಕೆ.ಜಿ. ತೂಕ ಇಳಿಸಿಕೊಂಡಿದ್ದರು.

ಮೂಗುತಿ ಸುಂದರಿ ಸೋನಾಕ್ಷಿ ಸಿನ್ಹಾಗೆ ಸೀರೆಯೆಂದ್ರ ಪಂಚಪ್ರಾಣ ಹೀಗಾಗಿಯೇ ಸಿನಿಮಾಗಳಲ್ಲಿ ಹೆಚ್ಚಾಗಿ ಸೀರೆಯ ಪಾತ್ರಗಳಲ್ಲಿಯೇ ಮಿಂಚಿದ್ದಾರೆ.

ಸಾಮಾಜಿಕ ಕಾರ್ಯಗಳಿಗೆ ಮನಮಿಡಿಯುವ ಸೋನಾಕ್ಷಿ ತನ್ನ ಸಿನಿಮಾದ ಮೊದಲ ಸಂಭಾವನೆಯನ್ನೇ ಎನ್ ಜಿಓಗೆ ದಾನ ಮಾಡಿದ್ರು.

ರಂಗೀನ್ ಲೋಕದಲ್ಲಿ ಸೋನಾಕ್ಷಿ ಸಿನ್ಹಾ ಹೆಸರು ಕ್ರೀಡಾ ವ್ಯವಸ್ಥಾಪಕ ಬಂಟಿ ಸಚ್ದೇವ್ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು.

ಇದಲ್ಲದೆ ನಟ ಶಾಹಿದ್ ಕಪೂರ್ ಮತ್ತು ಅರ್ಜುನ್ ಕಪೂರ್ ಅವರ ಜೊತೆ ಸೋನಾಕ್ಷಿ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿಗಳು ಬಾಲಿವುಡ್ ಕಾಲಂನಲ್ಲಿ ರಾರಾಜಿಸಿದ್ದವು.

ಸೋನಾಕ್ಷಿ ಉತ್ತಮ ನಟಿ ಮಾತ್ರವಲ್ಲ, ಅತ್ಯುತ್ತಮ ಚಿತ್ರ ಕಲಾವಿದೆ ಕೂಡ ಹೌದು. ಅವರು ನಾಯಕಿಯಾಗಿ ಅಭಿನಯಿಸಿದ ‘ಲೂಟೆರಾ’ ಚಿತ್ರದಲ್ಲಿ ಬಳಸಿದ ಚಿತ್ರಕಲೆಗಳನ್ನು ಸ್ವತಃ ಅವರೇ ರಚಿಸಿದ್ದರು.

ದಬಂಗ್ ಬೆಡಗಿಯ ನೆಚ್ಚಿನ ಚಿತ್ರಗಳಲ್ಲಿ ‘ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’ ಚಿತ್ರ ಕೂಡ ಒಂದು.

ಕುಂಗ್ ಫೂ ಪಾಂಡ’, ‘ಅಬೌಟ್​ ಎ ಬಾಯ್’, ‘ನಥಿಂಗ್ ಹಿಲ್’, ‘ಲವ್ ಆಕ್ಚುವಲಿ, ಪ್ರೈಮಲ್ ಫೆರಾ’, ‘ಜುಲ್ಯಾಂಡರ್’ ನಂತರ ಖ್ಯಾತ ಸಿನಿಮಾಗಳಲ್ಲಿಯೂ ಸೋನಾಕ್ಷಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ

Leave A Reply

Your email address will not be published.