Opinion : ಧಾರ್ಮಿಕ ಪ್ರಾರ್ಥನಾಲಯಗಳ ಹುಂಡಿಗೂ ಬರಲಿ ಕ್ಯೂಆರ್ ಕೋಡ್

ಭಾರತದಲ್ಲಿ ಈಗ ಶರವೇಗದಲ್ಲಿ ಓಡುತ್ತಿರುವ ವಿಷಯಗಳಲ್ಲಿ ಡಿಜಿಟಲೀಕರಣ ಅತ್ಯಂತ ಪ್ರಮುಖವಾದದ್ದು. ಹಣ ಪಾವತಿ, ಅರ್ಜಿ ಸಲ್ಲಿಕೆ, ಸರ್ಕಾರಿ ಸೇವೆಗಳು, ಬ್ಯಾಂಕ್ ಕೆಲಸಗಳು, ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟ..ಹೀಗೆ ಡಿಜಿಟಲ್‌ (Digital Payments) ಮೂಲವೇ ನಡೆಯುತ್ತಿರುವ ವಹಿವಾಟು ಒಂದೇ ಎರಡೇ..ವಹಿವಾಟಿನ ಪರದರ್ಶಕತೆಗೂ ಕಾರಣವಾಗಿರುವ ಡಿಜಿಟಲೀಕರಣವನ್ನು ಇನ್ನಷ್ಟು ವಿಸ್ತರಿಸುವ ಧಾರ್ಮಿಕ ಪ್ರಾರ್ಥನಾಲಯಗಳ ಹುಂಡಿಗಳಿಗೂ ಅಳವಡಿಸುವ ಕುರಿತು ಅಭಿಪ್ರಾಯ  ಹಂಚಿಕೊಂಡಿದ್ದಾರೆ ಪ್ರಸಿದ್ಧ ಆಯುರ್ವೇದ ವೈದ್ಯರಾದ ಶಿರಸಿಯ ಡಾ.ರವಿ ಪಟವರ್ಧನ್.

ಭಾರತ ಸರ್ಕಾರ ಹಣಕಾಸು ವ್ಯವಸ್ಥೆಗಳನ್ನು ಡಿಜಿಟಲೀಕರಣ ಕಳಿಸಿದ್ದು ಡಿಜಿಟಲ್ ಇಂಡಿಯಾದ ಮುಖ್ಯ ಉದ್ದೇಶ. ತರಕಾರಿ ಮಾರುಕಟ್ಟೆಗೆ , ಕಿರಾಣಿ ಅಂಗಡಿ, ಬಟ್ಟೆ ಅಂಗಡಿ, ಮೀನು ಮಾರುಕಟ್ಟೆಗೆ , ಹಣ್ಣಿನ ಮಾರಾಟ ಮಳಿಗೆಯಲ್ಲಿ ,ಕಟಿಂಗ್ ಮುಂತಾದ ಅಂಗಡಿಗಳಲ್ಲಿ ಹಣ ಪಾವತಿಗೆ ಕ್ಯೂಆರ್ ಕೋಡ್ ರಾರಾಜಿಸುತ್ತಿರುವುದು ದೊಡ್ಡಮಟ್ಟದಲ್ಲಿ ಕಾಣಸಿಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಪರಂಪರೆಯಲ್ಲಿ ದೇವಸ್ಥಾನದ ಪಾತ್ರ ಅತ್ಯಂತ ಮಹತ್ವದ್ದು. ಹಲವು ವಿಷಯಗಳು ದೇವಸ್ಥಾನದಿಂದಲೇ ಸಾಮಾಜಿಕ ಬದಲಾವಣೆ ಆದಂತಹ ಉದಾಹರಣೆಗಳು ಹಲವಿವೆ. ಈಗಾಗಲೇ ದೇವಸ್ಥಾನದ ನಿಯಂತ್ರಣಗಳ ಬಗ್ಗೆ ರಾಜಕೀಯ ಮೇಲಾಟ ಜೋರಾಗಿದೆ.

ದೇವಸ್ಥಾನದ ನಿಯಂತ್ರಣಗಳ ಬಗ್ಗೆ ಏನು ಮಾಡುತ್ತಾರೋ ಗೊತ್ತಿಲ್ಲ ಆದರೆ ಅಲ್ಲಿಯ ಪ್ರತಿಯೊಂದು ಹುಂಡಿಗಳಿಗೆ ಬ್ಯಾಂಕ್ ಖಾತೆ ಕ್ಯೂಆರ್ ಕೋಡ್ ಅಂಟಿಸುವ ಅವಶ್ಯಕತೆ ಇದೆ. ಇದರಿಂದ ಹಲವು ಸಮಸ್ಯೆಗಳ ಪರಿಹಾರ ತಕ್ಷಣದಲ್ಲಿ ಆಗುವದು. ಮುಖ್ಯವಾಗಿ ಹಣ ತಕ್ಷಣ ಬ್ಯಾಂಕ್ ಖಾತೆಗೆ ವರ್ಗಾವಣೆ ಗೊಳ್ಳುವುದು. ಹುಂಡಿಗಳಲ್ಲಿ ಹಣ ಹಲವು ದಿನಗಳವರೆಗೆ ಇರುವ ಅವಶ್ಯಕತೆ ಇಲ್ಲ. ಕಳ್ಳಕಾಕರ ಭೀತಿ ಇಲ್ಲ.

ಉಪಯೋಗಗಳೇನು?
ಭಕ್ತರು ದೇವರಿಗೆ ನೀಡಬಯಸುವ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ತಲುಪುವುದು.
ನಿಖರ ಪಾರದರ್ಶಕ ವ್ಯವಸ್ಥೆ ದೇವಸ್ಥಾನದಲ್ಲಿ ಜಾರಿಯಾಗುವುದು.
ದೇವರಿಗೆ ಸಲ್ಲಿಸಲಾಗುವ ಮೊತ್ತದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ.ದೇವರಿಗೆ ಕಪ್ಪು ಹಣ ಸಂದಾಯವಾಗದೆ ಭಕ್ತನ ಬ್ಯಾಂಕ್ ಖಾತೆ ಮೂಲಕವೇ ಹಣ ತಲುಪುತ್ತದೆ.
ಹಲವು ಕಡೆಗಳಲ್ಲಿ ಹುಂಡಿಯ ಎಣಿಕೆಯಲ್ಲಿ ಆಗುವ ತಪ್ಪುಗಳು ತಪ್ಪುತ್ತವೆ.
ಕಾಣಿಕೆ ಎಣಿಕೆ ವೇಳೆಯ ಮೋಸ, ಅನುಮಾನಕ್ಕೆ ಅವಕಾಶವೇ ಇಲ್ಲ.
ಭಕ್ತರು ಮನೆಯಿಂದಲೇ ತನ್ನ ಕಾಣಿಕೆ ಸಂದಾಯ ಮಾಡಬಹುದು.

ಪ್ರತಿ ದೇವಸ್ಥಾನದಲ್ಲಿ ಇದನ್ನ ಕಡ್ಡಾಯವಾಗಿ ಮುಜರಾಯಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನವರು ದೇವಸ್ಥಾನದ ಖಾತೆಗಳಿಗೆ ಅವಶ್ಯವಾಗಿ ಕಡ್ಡಾಯಗೊಳಿಸಬೇಕು.ಆದರೆ ಈ ವಿಳಾಸ ಖಾಸಗಿ ಪಾವತಿ ಸಂಸ್ಥೆಗಳದಿರದೇ ಕಡ್ಡಾಯವಾಗಿ ಭಾರತಸರ್ಕಾರದ NPCIಅಂದರೆ @upi ಒದಗಿಸಿದ್ದಾಗಿರಬೇಕು

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

ಇದನ್ನೂ ಓದಿ: top 5 financial resolutions : ಹೊಸವರ್ಷದಲ್ಲಿ ನಿಮಗೆ ಲಾಭತರಲಿರುವ 5 ಆರ್ಥಿಕ ನಿರ್ಧಾರಗಳು

(QR Code should be introduced to for Religious Place Hundis)

Comments are closed.