top 5 financial resolutions : ಹೊಸವರ್ಷದಲ್ಲಿ ನಿಮಗೆ ಲಾಭತರಲಿರುವ 5 ಆರ್ಥಿಕ ನಿರ್ಧಾರಗಳು

“ಜೀವನದಲ್ಲಿ ಏರಿಳಿತಗಳೇ ಸ್ಥಿರ, ಅಪರೂಪಕ್ಕೆ ಒಮ್ಮೊಮ್ಮೆ ಕೆಲ ಕಾಲ ಹೆಚ್ಚಿನ ಬದಲಾವಣೆಯಿಲ್ಲದೆ ಜೀವನ ಸರಾಗವಾಗಿ ಸಾಗುವಂತೆ ಕಾಣುತ್ತದೆ.” ಇದು ಇತ್ತೀಚಿಗೆ ನಮ್ಮಲ್ಲಿ ಬಹುತೇಕರ ಅನುಭವಕ್ಕೆ ಬಂದಿರುವ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಹೊಸವರ್ಷ ನಮ್ಮ ಮುಂದಿದ್ದು ನಮ್ಮ ವೈಯಕ್ತಿಕ ಆರ್ಥಿಕ ಯೋಚನೆ-ಯೋಜನೆಗಳು ( top 5 financial resolutions) ಹೇಗಿದ್ದರೆ ಜೀವನದ ಬಂಡಿ ಸರಾಗವಾಗಿ ಸಾಗಬಹುದು ಎನ್ನುವುದನ್ನು ತಿಳಿಸುವುದೇ ಈ ಬರಹದ ಗುರಿಯಾಗಿದೆ.

ಹೊಸವರ್ಷವೆಂದರೆ ಹೊಸ ಆರ್ಥಿಕ ಗುರಿಗಳು, ಹೊಸ ಆಲೋಚನೆಗಳು. ಹೊಸವರ್ಷದಲ್ಲಿ ನಿರಾತಂಕದ ಹಾಗೂ ನೆಮ್ಮದಿಯ ಬದುಕು ನಿಮ್ಮದಾಗಬೇಕಾದರೆ ನಿಮ್ಮ ಆರ್ಥಿಕ ಸ್ಥಿತಿ ಸದೃಢವಾಗಿರಬೇಕು ಹಾಗೂ ನಿಮ್ಮ ಹಿಡಿತದಲ್ಲಿರಬೇಕು. ಯಾವುದೇ ಅನಿರೀಕ್ಷಿತ ಆತಂಕಗಳು ಎದುರಾದರೆ ನಿಮ್ಮನ್ನು ನೀವು ಸಂಭಾಳಿಸಿಕೊಳ್ಳಬಹುದಾದ ಆರೋಗ್ಯಕರ ಆರ್ಥಿಕ ಸ್ಥಿತಿ ನಿಮ್ಮದಾಗಿರಬೇಕು. ಹೊಸ ವರ್ಷದಲ್ಲಿ ನಿಮ್ಮ ಆರ್ಥಿಕತೆ ದೃಢವಾಗಿರಲು ನಿಮ್ಮ ಯೋಜನೆಗಳಲ್ಲಿ “ನಿಮ್ಮ ಕ್ರೆಡಿಟ್‌ಕಾರ್ಡ್‌ನ ಸಾಲದ ಭಾರವು ಸಾಧ್ಯವಿದ್ದಷ್ಟು ಕಡಿಮೆ ಇರುವಂತೆ ಬುದ್ಧಿವಂತಿಕೆಯಿಂದ ಕಾರ್ಡನ್ನು ಉಪಯೋಗಿಸಿಕೊಳ್ಳುವುದು, ಉತ್ತಮವಾದ ಕ್ರೆಡಿಟ್‌ ಸ್ಕೋರನ್ನು ಹೊಂದುವುದು, ಹಾಗೂ ನಿಮ್ಮ ವೈಯಕ್ತಿಕ ಬಜೆಟ್‌ ತಯಾರಿಸಿಕೊಳ್ಳುವುದು” ಉತ್ತಮ ಯೋಜನೆಗಳು. 

ಆರ್ಥಿಕ ಆರೋಗ್ಯವು ದೈಹಿಕ ಹಾಗೂ ಮಾನಸಿಕ ಆರೋಗ್ಯಗಳಷ್ಟೇ ಪ್ರಾಮುಖ್ಯತೆ ಹೊಂದಿರುವುದು ಹಾಗೂ ಒಂದರ ಮೇಲೆ ಇನ್ನೊಂದರ ಪ್ರಭಾವ ಸಾಕಷ್ಟಿರುವುದೂ ಎಲ್ಲರಿಗೂ ತಿಳಿದಿದೆ. ಮುಂದಿನ ವರ್ಷ ಸಾಧ್ಯವಾದಷ್ಟು ಹೆಚ್ಚಿನ ಉಳಿತಾಯ ಹಾಗೂ ಹೂಡಿಕೆಗಳನ್ನು ಮಾಡುವ ಮೂಲಕ ಒಳ್ಳೆಯ ಲಾಭ ಹಾಗೂ ಭವಿಷ್ಯವನ್ನು ಹೊಂದಬೇಕೆಂಬುದು ನಿಮ್ಮಲ್ಲಿ ಬಹುತೇಕರ ಆಲೋಚನೆಯಾಗಿರಬಹುದು. ಆದರೂ, ಎಲ್ಲವೂ ಪ್ರಾರಂಭವಾಗುವುದು ಮೊದಲು ನಿಮ್ಮ ಆರ್ಥಿಕ ಸ್ಥಿತಿಯನ್ನು ಹಾಗೂ ಗುರಿಗಳನ್ನು ಸರಿಯಾಗಿ ಗುರುತಿಸಿಕೊಂಡು ಅವುಗಳನ್ನು ಈಡೇರಿಸಿಕೊಳ್ಳಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವುದರಿಂದ.

ಹೊಸವರ್ಷದಲ್ಲಿ ನಿಮ್ಮ ಆರ್ಥಿಕತೆಯು ದೃಢವಾಗಿರಲು ಕೆಳಕಂಡ 5 ನಿರ್ಧಾರಗಳು ಸಹಾಯಕವಾಗಬಹುದು

ಉತ್ತಮ ಲಾಭಗಳನ್ನು ನಿರೀಕ್ಷಿಸಬಹುದಾದ ಗುರಿಗಳನ್ನು ಹಾಕಿಕೊಳ್ಳಿ

ಕೆಲವೊಮ್ಮೆ ನಮ್ಮ ನಿರೀಕ್ಷೆಗಳು ಅಗತ್ಯಕ್ಕಿಂತ ಹೆಚ್ಚಾಗಿರಬಹುದು, ಹೋದವರ್ಷ ಮಾರುಕಟ್ಟೆಯಿಂದ ಉತ್ತಮ ಲಾಭ ಸಿಕ್ಕಿದ್ದರೆ ಈ ವರ್ಷವೂ ಅದೇ ಪುನರಾವೃತ್ತಿಯಾಗಬೇಕೆಂದೇನೂ ಇಲ್ಲ. ನಿಮ್ಮ ಕಡಿಮೆ ಅವಧಿಯ ಹಾಗೂ ದೀರ್ಘಾವಧಿಯ ಗುರಿಗಳನ್ನು ಹಾಗೂ ಅವುಗಳಿಂದ ನೀವು ನಿರೀಕ್ಷಿಸುವ ಲಾಭಗಳನ್ನು ಗುರುತು ಹಾಕಿಕೊಳ್ಳಿ. ಇವು ಯಾವಾಗಲೂ ಸರಿಯಾಗಿಯೇ ಇರಬೇಕೆಂದೇನೂ ಇಲ್ಲ. ನಿಮ್ಮ ಕಡಿಮೆ ಹಾಗೂ ದೀರ್ಘಾವಧಿಯ ಗುರಿಗಳನ್ನು ನಿಮ್ಮ ನಿರೀಕ್ಷೆಗೆ ತಕ್ಕಂತೆ ಹೊಂದಿಸಿಕೊಳ್ಳಿ. ಉದಾಹರಣೆಗೆ, ಕಡಿಮೆ ಅವಧಿಯ ಗುರಿಗಳಲ್ಲಿ ನಿಶ್ಚಿತ ಆದಾಯದ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು ಹಾಗೂ ದೀರ್ಘಾವಧಿ ಗುರಿಗಳಿಗಾಗಿ ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಹಣದುಬ್ಬರದ ಅಪಾಯವನ್ನು ನೀಗುವ ಲಾಭ ಗಳಿಸಬಹುದು.

ನಿಮ್ಮ ಆಯ-ವ್ಯಯವನ್ನು ಆಗಾಗ ನವೀಕರಿಸಿಕೊಳ್ಳುತ್ತಿರಿ

ಮಾಸಿಕ ಕೌಟುಂಬಿಕ ಆದಾಯವು ಬಹಳ ಉಪಯುಕ್ತ. ಇದರಿಂದ ನಿಮ್ಮ ಯೋಜನೆಗಳನ್ನು ಉತ್ತಮವಾದ ರೀತಿಯಲ್ಲಿ ಹಾಕಿಕೊಳ್ಳಬಹುದು. ನೀವು ಯೋಜಿಸುವುದರಲ್ಲಿ ವಿಫಲರಾದರೆ ಅದು ವಿಫಲರಾಗಲೆಂದೇ ಯೋಜನೆ ಹಾಕಿಕೊಂಡಂತೆ. ಮಾಸಿಕ ಆಯ-ವ್ಯಯವನ್ನು ವಿವರವಾಗಿ ಹಾಕಿಕೊಳ್ಳಿ. ಮಾಸಿಕ ಬಜೆಟ್‌ ಹಾಕಿಕೊಳ್ಳುವುದು ಎಷ್ಟು ಮುಖ್ಯವೋ ಅದನ್ನು ಚಾಚೂ ತಪ್ಪದೆ ಅನುಸರಿಸುವುದೂ ಬಹಳ ಮುಖ್ಯವೆಂಬುದು ಆರ್ಥಿಕ ತಜ್ನರ ಅಭಿಪ್ರಾಯ. ಹಾಗೆ ಮಾಡಿದಾಗ ಮಾತ್ರ ನಿಮ್ಮ ಆದಾಯದ ಒಂದು ಆಂಶವನ್ನು ಉಳಿಸಲು ಸಾಧ್ಯ.

ನಿಮ್ಮ ಕ್ರೆಡಿಟ್‌ ಕಾರ್ಡ್ ಬಾಕಿಯನ್ನು ಸಂಪೂರ್ಣವಾಗಿ ಚುಕ್ತಾ ಮಾಡಿಬಿಡಿ

ಕ್ರೆಡಿಟ್‌ಕಾರ್ಡ್‌ ಸಾಲದಿಂದ ನೀವು ಮಾತ್ರವೇ ನರಳುತ್ತಿಲ್ಲ, ನಿಮ್ಮಂತೆಯೇ ಅನೇಕರಿದ್ದಾರೆ. ನಿಮ್ಮೆಲ್ಲಾ ಕ್ರೆಡಿಟ್‌ಕಾರ್ಡ್‌ ಸಾಲವನ್ನು ಮುಂದಿನ ವರ್ಷದಲ್ಲಿ ಸಂಪೂರ್ಣವಾಗಿ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ಬಡ್ಡಿಯೊಂದಿಗೆ ಹಿಂದಿರುಗಿಸಲು ಸೂಕ್ತವಾದ ಉಪಾಯ ಕಂಡುಕೊಳ್ಳಿ. ನೀವು ಗಳಿಸುವ ಹೆಚ್ಚಿನ ಲಾಭ ನಿಮ್ಮ ಕ್ರೆಡಿಟ್‌ಕಾರ್ಡ್‌ ಸಾಲವನ್ನು ತೀರಿಸಲು ಸಹಕಾರಿಯಾಗಲಿದೆ ಎಂಬುದು ನಿಮಗೆ ಸದಾ ನೆನಪಿರಲಿ.

ಸೂಕ್ತ ಆರೋಗ್ಯ ವಿಮಾಯೋಜನೆಗಳನ್ನು ಹೊಂದುವ ಮೂಲಕ ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಿ

ನಮಗೆ ಯಾವುದೇ ವಿಮೆಯ ಅವಶ್ಯಕತೆಯಿಲ್ಲ ಎಂಬುದು ನಮ್ಮಲ್ಲಿ ಬಹುತೇಕರ ಸಾಮಾನ್ಯ ಭಾವನೆಯಾಗಿದ್ದು ಏಕಾಏಕಿ ಅಪಾಯ ಎದುರಾದಾಗ ಕಾಲ ಮಿಂಚಿರುತ್ತದೆ. ಆದ್ದರಿಂದ, ಮುಂಚಿತವಾಗಿಯೇ ವಿಮಾ ಸೌಲಭ್ಯ ಹೊಂದಿರುವುದು ಅತ್ಯವಶ್ಯಕ. ತಜ್ಞರ ಪ್ರಕಾರ ನಿಶ್ಚಿತ ಅವಧಿಯ ಯೋಜನೆಗಳು ನಿಮ್ಮ ವಾರ್ಷಿಕ ಆದಾಯದ 10 ಪಟ್ಟು ಇರಬೇಕು ಹಾಗೂ ಆರೋಗ್ಯ ವಿಮೆಯ ವಿಮಾ ಮೊತ್ತವು ನಿಮ್ಮ ವಾರ್ಷಿಕ ಆದಾಯದ ಶೇಕಡಾ 10 ರಿಂದ ಶೇಕಡಾ 25ರವರೆಗೆ ಇರುವುದು ಸೂಕ್ತ. ಯೋಜನೆಯು ಯಾವ-ಯಾವ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ ಹಾಗೂ ಯಾವ ಕಾಯಿಲೆಗಳನ್ನು ಒಳಗೊಂಡಿಲ್ಲ ಎಂಬ ನಿರ್ದಿಷ್ಟ ತಿಳುವಳಿಕೆ ಹೊಂದಿರಿ.

ಮಾರುಕಟ್ಟೆಯ ಏಳು-ಬೀಳು ಹೇಗೇ ಇರಲಿ ನಿಯಮಿತವಾಗಿ ಹೂಡಿಕೆ ಮಾಡುತ್ತಿರಿ

ಮಾರುಕಟ್ಟೆಯ ಏಳು-ಬೀಳು ಸರ್ವೇಸಾಮಾನ್ಯ. ನಿಯಮಿತವಾಗಿ ಹೂಡಿಕೆ ಮಾಡಿ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ಗಳಿಸಿ. ಕೆಲವೊಮ್ಮೆ 5 ದಿನಗಳ ಅವಧಿಯಲ್ಲಿ ಅಥವಾ 3 ತಿಂಗಳುಗಳ ಅವಧಿಯಲ್ಲಿ ಮಾರುಕಟ್ಟೆಯು ಉತ್ತಮ ಲಾಭ ನೀಡದಿರುವಂತೆ ನಮಗೆ ಅನಿಸಬಹುದು. ಅಂತಹ ಸಮಯಗಳಲ್ಲಿ 5 ವರ್ಷಗಳಲ್ಲಿ ಅಥವಾ 30 ವರ್ಷಗಳಲ್ಲಿ ಮಾರುಕಟ್ಟೆಯ ಸಾಧನೆ ಹೇಗಿದೆಯೆಂದು ತಿಳಿದುಕೊಳ್ಳಿ. 

ಇಷ್ಟೆಲ್ಲಾ ಹೇಳಿದ ನಂತರ, ಮತ್ತೊಮ್ಮೆ ಹೇಳುವುದೇನೆಂದರೆ ಉತ್ತಮ ಆರ್ಥಿಕ ಯೋಜನೆಗಳು ನಿಮ್ಮ ಮಾನಸಿಕ ನೆಮ್ಮದಿಗೆ ಬಹುಮುಖ್ಯ ಕಾರಣವಾಗಬಹುದು. ಆದರೂ, ವೃತ್ತಿಪರ ಆರ್ಥಿಕ ತಜ್ಞರಿಂದ ಸೂಕ್ತ ಮಾರ್ಗದರ್ಶನ ಪಡೆದು ಮುಂದುವರೆಯುವುದು ಹೆಚ್ಚು ಸೂಕ್ತವಾದದ್ದು.

ಇದನ್ನೂ ಓದಿ: Crypto Currencies : ಕ್ರಿಪ್ಟೋಕರೆನ್ಸಿಗಳ ಬಗ್ಗೆ ಎಚ್ಚರಿಕೆ ನೀಡಿದ RBI ಗವರ್ನರ್ ಶಕ್ತಿಕಾಂತ ದಾಸ್

ಇದನ್ನೂ ಓದಿ: Bank KYC : ಕೆವೈಸಿ ಲಿಂಕ್ ಮಾಡದಿದ್ದರೆ ಬ್ಯಾಂಕ್ ಅಕೌಂಟ್ ಸ್ಥಗಿತವಾಗಬಹುದು ಎಚ್ಚರ

Personal Finance : Your top 5 financial resolutions for the new year 2022

Comments are closed.