Lockdown inevitable Karnataka : ಕರ್ನಾಟಕಕ್ಕೆ ಲಾಕ್ ಡೌನ್ ಅನಿವಾರ್ಯ: ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ತಾಂತ್ರಿಕ ಸಮಿತಿ

ಬೆಂಗಳೂರು : ನೈಟ್ ಕರ್ಪ್ಯೂ ಹಾಗೂ ಕಠಿಣ ನಿಯಮಗಳ ಹೊರತಾಗಿಯೂ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಏರುತ್ತಲೇ ಇದೆ. ಕೊರೋನಾ ಜೊತೆಗೆ ಡೆಲ್ಟಾ ಪ್ಲಸ್ ಹಾಗೂ ಓಮೈಕ್ರಾನ್ ಆತಂಕವೂ ತಲೆದೋರಿರೋದರಿಂದ ಸೋಂಕಿನ ಹರಡುವಿಕೆಯ ಪ್ರಮಾಣ ಹೆಚ್ಚಲಿದೆ ಎಂಬ ಆತಂಕ ತಲೆದೋರಿದೆ. ಹೀಗಾಗಿ ಈಗಾಗಲೇ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಹಾಗೂ ಓಮೈಕ್ರಾನ್ ಪ್ರಮಾಣವನ್ನು ತಗ್ಗಿಸಲು ಕೈಗೊಳ್ಳಬೇಕಾದ ಇತರ ಕ್ರಮಗಳ ( Lockdown inevitable Karnataka) ಬಗ್ಗೆ ರಾಜ್ಯ ಸರ್ಕಾರ ತಾಂತ್ರಿಕ ಸಲಹಾ ಸಮಿತಿಯ ಸಹಾಯ ಕೋರಿದೆ.

ರಾಜ್ಯದ ಸದ್ಯದ ಸ್ಥಿತಿಗತಿ, ಕೊರೋನಾ ಹಾಗೂ ಓಮೈಕ್ರಾನ್ ಹರಡುತ್ತಿರುವ ವೇಗವನ್ನು ಗಮನಿಸಿದ ತಾಂತ್ರಿಕ ಸಮಿತಿ ಸರ್ಕಾರಕ್ಕೆ ಲಾಕ್ ಡೌನ್ ಸಲಹೆಯನ್ನೇ ನೀಡಿದೆ. ಆದರೆ ಯಾವಾಗ, ಯಾವ ಸಂದರ್ಭದಲ್ಲಿ ಲಾಕ್ ಡೌನ್ ಸೂಕ್ತ ಎಂಬ ಸೂಚನೆಯನ್ನು ನೀಡಿದ್ದು ತಾಂತ್ರಿಕ ಸಮಿತಿ ಸರ್ಕಾರಕ್ಕೆ ನೀಡಿದ ಸಲಹೆ ಸೂಚನೆಗಳೇನು ಎಂಬ ವಿವರ ಇಲ್ಲಿದೆ.

  1. ರಾಜ್ಯದ ವಾರದ ಪಾಸಿಟಿವಿಟಿ ದರ ಶೇ. 5ಕ್ಕಿಂತ ಜಾಸ್ತಿ ಆದಾಗ ಲಾಕ್ ಡೌನ್ ಅನಿವಾರ್ಯ ಆಗಬಹುದು ಎಂಬುದನ್ನು ಸಲಹಾ ಸಮಿತಿ ಮೊದಲನೇ ಸೂಚನೆಯಾಗಿ ಸರ್ಕಾರಕ್ಕೆ ನೀಡಿದೆ.
  2. ರಾಜ್ಯದ ಒಟ್ಟಾರೆ ICU ಹಾಗೂ ಆಕ್ಸಿಜನ್ ಬೆಡ್ ನಲ್ಲಿ 40% ಬೆಡ್ ರೋಗಿಗಳಿಂದ ತುಂಬಿದರೆ ಲಾಕ್ ಡೌನ್ ಮಾಡಿ ಎಂದಿದೆ.

ಈ ಎರಡು ಅಂಶಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಿರುವ ತಾಂತ್ರಿಕ ಸಲಹಾ ಸಮಿತಿ. ಒಂದೊಮ್ಮೆ ಈ ಹಂತದಲ್ಲೂ ಲಾಕ್ ಡೌನ್ ಮಾಡದಿದ್ದರೇ ಅಂತಹ ಸಂದರ್ಭದಲ್ಲಿ ಮತ್ತೇ ಸಾವು ನೋವಿನ ಪ್ರಮಾಣ ಹೆಚ್ಚಲಿದೆ ಎಂಬ ಆತಂಕಕಾರಿ ಸಂಗತಿಯನ್ನು ಸರ್ಕಾರಕ್ಕೆ ಮನದಟ್ಟುಮಾಡಿಸಿದೆ.

ಇನ್ನೂ ಈ ಹಂತಕ್ಕೆ ಹೋಗಬಾರದು ಅಂದರೆ ಜನ ನಿರ್ಬಂಧಗಳಿಗೆ ರೆಡಿ ಆಗಬೇಕಿದೆ. ತಾಂತ್ರಿಕ ಸಮಿತಿ ಸಲಹೆ ಆಧರಿಸಿ ಕಲರ್ ಕೋಡ್ ಆಧಾರದ ಮೇಲೆ ನಿರ್ಭಂಧಗಳಿಗೆ ರಾಜ್ಯ ರೆಡಿಯಾಗಲಿದ್ದು, ಯಲ್ಲೋ, ಆರೆಂಜ್, ರೆಡ್ ಅಲರ್ಟ್ ವಲಯಗಳನ್ನಾಗಿ ವಿಂಗಡಿಸಿ. ಪ್ರತಿಯೊಂದು ವಲಯಕ್ಕೂ ಕಠಿಣ ನಿಯಮಗಳನ್ನು ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ.

ಪಾಸಿಟಿವಿಟಿ ರೇಟ್ ಒಂದಕ್ಕಿಂತ ಕಡಿಮೆ ಇದ್ದಲ್ಲಿ ಯೆಲ್ಲೋ ಅಲರ್ಟ್, ಪಾಸಿಟಿವಿಟಿ ರೇಟ್ ಒಂದಕ್ಕಿಂತ ಹೆಚ್ಚು ಎರಡಕ್ಕಿಂತ ಕಡಿಮೆ ಇದ್ದಲ್ಲಿ ಆರೆಂಜ್ ಅಲರ್ಟ್ ಹಾಗೂ ಪಾಸಿಟಿವಿಟಿ ರೇಟ್ ಎರಡಕ್ಕಿಂತ ಜಾಸ್ತಿ ಇದ್ದರೇ ಅಂತಹ ಕಡೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಸೂಚನೆ ನೀಡಿದೆ. ಅಲ್ಲದೇ ಯೆಲ್ಲೋ,ಆರೆಂಜ್ ಹಾಗೂ ರೆಡ್ ಅಲರ್ಟ್ ಗಳಲ್ಲಿ ಶಾಲಾ ಕಾಲೇಜು ಸೇರಿದಂತೆ ಯಾವೆಲ್ಲ ಸೌಲಭ್ಯಗಳಿಗೆ ಕಡಿವಾಣ ಹಾಕಬೇಕೆಂಬ ಸೂಚನೆಯನ್ನು ನೀಡಿದೆ.

ಅಲ್ಲದೇ ಪಾಸಿಟಿವಿಟಿ ರೇಟ್ ಮೂರಕ್ಕಿಂತ ಜಾಸ್ತಿ ಇದ್ದರೇ ಲಾಕ್ ಡೌನ್ ಅನಿವಾರ್ಯ ಎಂದು ಸರ್ಕಾರಕ್ಕೆ ಹೇಳಿದೆ. ಹೀಗಾಗಿ ಇನ್ನು ಎರಡು ಮೂರು ವಾರಗಳ ಕೊರೋನಾ ಹಾಗೂ ಓಮೈಕ್ರಾನ್ ಕೇಸ್ ಗಳ ಆಧಾರದ ಮೇಲೆ ಕರ್ನಾಟಕದ ಲಾಕ್ ಡೌನ್ ಭವಿಷ್ಯ ನಿರ್ಧಾರವಾಗಲಿದ್ದು ಜನರು ಮತ್ತೊಮ್ಮೆ ಸಂಕಷ್ಟ ದ ದಿನಗಳಿಗೆ ಸಜ್ಜಾಗಬೇಕಿದೆ.

ಇದನ್ನೂ ಓದಿ : ಕೊರೊನಾ ಸೋಂಕಿನ ಲಕ್ಷಣವಿಲ್ಲದ ರೋಗಿಗಳನ್ನು ಡಿಸ್ಚಾರ್ಜ್ ಮಾಡಿ: ಸುಲಿಗೆ ತಡೆಯಲು ಆರೋಗ್ಯ ಇಲಾಖೆ ಆದೇಶ

ಇದನ್ನೂ ಓದಿ : ಭಾರತದಲ್ಲಿ ಕೊರೊನಾ ಪ್ರಕರಣ ಹಠಾತ್‌ ಏರಿಕೆ : ಒಂದೇ ದಿನ 27,553 ಹೊಸ ಪ್ರಕರಣ ದಾಖಲು

(Lockdown is inevitable for Karnataka, Suggestion Covid Technical Committee)

Comments are closed.