KS Eshwarappa :ಈಶ್ವರಪ್ಪ ಪ್ರಾಮಾಣಿಕನೆಂದು ಪ್ರಮಾಣ ಮಾಡಲಿ : ಹಿಂದೂ ಮಹಾಸಭಾ ಸವಾಲ್​

ಮಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್​ ಆತ್ಮಹತ್ಯೆ ಪ್ರಕರಣ ಸದ್ಯ ರಾಜ್ಯ ರಾಜಕಾರಣದಲ್ಲಿ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಪ್ರಕರಣದ ನೈತಿಕ ಜವಾಬ್ದಾರಿ ಹೊತ್ತು ಹೈಕಮಾಂಡ್​ ಸೂಚನೆಯಂತೆ ಕೆ.ಎಸ್​ ಈಶ್ವರಪ್ಪ (KS Eshwarappa) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಲೆದಂಡ ತೆತ್ತಿದ್ದಾರೆ.ಇಷ್ಟಕ್ಕೆ ಪಟ್ಟು ಬಿಡದ ಕಾಂಗ್ರೆಸ್​ ನಾಯಕರು ಈಶ್ವರಪ್ಪರನ್ನು ಜೈಲಿಗೆ ಕಳುಹಿಸದೇ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದೆ.


ಈ ಎಲ್ಲದರ ನಡುವೆ ಮಂಗಳೂರಿನಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಕೆ.ಎಸ್​ ಈಶ್ವರಪ್ಪಗೆ ಆಣೆ ಸವಾಲ್​ ಎಸೆದಿದೆ. ಈ ವಿಚಾರವಾಗಿ ಮಾತನಾಡಿದ ಅಖಿಲ ಭಾರತ ಹಿಂದೂ ಮಹಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ನಾನು ಕಮಿಷನ್​ ತೆಗೆದುಕೊಂಡಿಲ್ಲ. ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲವೆಂದು ಈಶ್ವರಪ್ಪ ಧರ್ಮಸ್ಥ ಶ್ರೀ ಮಂಜುನಾಥನ ಎದುರು ಆಣೆ ಪ್ರಮಾಣ ಮಾಡಲಿ ಎಂದು ಸವಾಲೆಸೆದಿದ್ದಾರೆ.


ಈಶ್ವರಪ್ಪ ಆಣೆ ಮಾಡಲು ತಯಾರಿದ್ದಾರಾ..? ದೇವರ ಮುಂದೆ ಪ್ರಮಾಣ ಮಾಡುವ ತಾಕತ್ತು ಅವರಿಗಿದೆಯಾ..? ನೀವು ಧರ್ಮಸ್ಥಳವನ್ನು ನಂಬುತ್ತೀರಿ ಎಂದಾದರೆ ಇಲ್ಲಿಗೆ ಬಂದು ಪ್ರಮಾಣ ಮಾಡಿ. ಅಲ್ಲಿ ನೀವು ಪ್ರಮಾಣ ಮಾಡಿದರೆ ನೀವು ತಪ್ಪಿತಸ್ಥರಲ್ಲವೆಂದು ಒಪ್ಪಿಕೊಳ್ಳೋಣ. ಪ್ರಮಾಣ ಮಾಡಿದ ಬಳಿಕ ನೀವು ತನಿಖೆಯಲ್ಲಿ ತಪ್ಪಿತಸ್ಥರು ಎಂದು ತಿಳಿದು ಬಂದರೆ ನೀವು ಧರ್ಮದ್ರೋಹಿ ಆಗುತ್ತೀರಿ ಎಂದು ಹೇಳಿದ್ದಾರೆ.


ಅಧಿಕಾರಕ್ಕೇರುವ ಮುನ್ನ ಕಾಂಗ್ರೆಸ್​ ಈ ದೇಶವನ್ನು ಲೂಟಿ ಮಾಡಿದೆ ಎಂದು ಹೇಳಿದ್ದೀರಿ. ಭ್ರಷ್ಟಾಚಾರ ನಿರ್ಮೂಲನೆಗೆಂದೇ ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿ ಈಗ ನೀವು ಮಾಡುತ್ತಿರುವುದು ಏನು..? ಎಂದು ಈಶ್ವರಪ್ಪಗೆ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ : santosh patil death row : ಕೆ.ಎಸ್​ ಈಶ್ವರಪ್ಪ ನಿವಾಸಕ್ಕೆ 9 ಶ್ರೀಗಳ ದಿಢೀರ್​ ಭೇಟಿ

ಇದನ್ನೂ ಓದಿ : Former minister KS Eshwarappa : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪರ ಬ್ಯಾಟ್​ ಬೀಸಿದ ಮಾಜಿ ಸಿಎಂ ಹೆಚ್​ಡಿಕೆ

All India Hindu Mahasabha challenged former minister KS Eshwarappa

Comments are closed.