Allegation against D.K.Sivakumar: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದಆರೋಪಗಳ ಸುರಿಮಳೆ‌ಗೈದ ಸಾಹುಕಾರ್‌ : ಏನೆಲ್ಲಾ ಆರೋಪಗಳಿವೆ ಗೊತ್ತಾ?

ಬೆಳಗಾವಿ: (Allegation against D.K.Sivakumar) ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ದ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ರಾಜಕೀಯದಲ್ಲಿ ಜಾರಕಿಹೊಳಿಯನ್ನು ವೈಯಕ್ತಿಕವಾಗಿ ಟಾರ್ಗೆಟ್‌ ಮಾಡಿ ಹೊಡೆದಿದ್ದು, ರಾಜಕಾರಣ ಮಾಡಲು ಡಿಕೆ ಶಿವಕುಮಾರ್‌ ನಾಲಾಯಕ್ಕು ಎಂದು ಕಿಡಿಕಾರಿದ್ದಾರೆ. ಅಲ್ಲದೇ ಡಿಕೆ ಶಿವಕುಮಾರ್‌ ವಿರುದ್ದ ಆರೋಪಗಳ ಪಟ್ಟಿಯನ್ನೇ ವರದಿ ಮಾಧ್ಯಮದವರ ಮುಂದಿಟ್ಟಿದ್ದಾರೆ.

ಕೆಪಿಸಿಸಿ ಅಧ್ಯಕ್ಷನ ವಿರುದ್ದ ಸಾಹುಕಾರನ ಆರೋಪಗಳು;

ಹರಿದ ಚಪ್ಪಲಿ ತೊಟ್ಟಿದ್ದವ ಲೂಟಿ ಹಗರಣ ಮಾಡಿ ಮೇಲೆದ್ದಿದ್ದಾನೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾರಕಿಹೊಳಿ,” ೧೯೮೫ ರಲ್ಲಿ ನಾನು ಹಾಗೂ ಡಿಕೆಶಿ ಒಟ್ಟಿಗೆ ರಾಜಕೀಯಕ್ಕೆ ಬಂದು, ಇಬ್ಬರು ಚುನಾವಣೆಯಲ್ಲಿ ಸೋತಿದ್ದೇವೆ. ಇದಾದ ಬಳಿಕ ನಾನು ಉಧ್ಯಮ ನಡೆಸಿ ಈ ಹಂತಕ್ಕೆ ಬಂದು ನಿಂತಿದ್ದೇನೆ. ಆದರೆ ಡಿಕೆಶಿ ಲೂಟಿ ಮಾಡಿ ಬಂದಿದ್ದಾನೆ. ಕಾಂಗ್ರೆಸ್‌ ನಲ್ಲಿ ಸ್ಪರ್ಧೆ ಮಾಡುತ್ತಿದ್ದಾಗ ಡಿಕೆಶಿ ಹರಿದ ಚಪ್ಪಲಿ ತೊಟ್ಟಿದ್ದ, ಈಗ ಸಾವಿರಾರು ಕೋಟಿ ಒಡೆಯ. ರಾಜ್ಯವನ್ನು ಲೂಟಿ ಮಾಡಲು ಬಂದಿದ್ದಾನೆ” ಎಂದು ಡಿಕೆಶಿ ವಿರುದ್ದ ಸಿಡಿದೆದ್ದಿದ್ದಾರೆ.

ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್‌ ಗೆ ಟಿಕೆಟ್‌ ಬೇಡ ಎಂದಿದ್ದರು..ನಾನೇ ಟಿಕೆಟ್‌ ಕೊಡಿಸಿದ್ದೆ;
ಇನ್ನೂ ವಿಷಕನ್ಯೆಯ ವಿರುದ್ದ ಮಾತನಾಡುತ್ತ, ಹಿಂದೊಮ್ಮೆ ಡಿಕೆಶಿ ಲಕ್ಷ್ಮೀ ಹೆಬ್ಬಾಳ್ಕರ್‌ ಗೆ ಟಿಕೆಟ್‌ ಕೊಡೋದು ಬೇಡ ಎಂದು ಹೇಳಿದ್ದರು. ಆಗ ನಾನೇ ಅವರಿಗೆ ಟಿಕೆಟ್‌ ಕೊಡಿಸಿದ್ದೆ” ಎಂದಿದ್ದಾರೆ.

ಜಲಸಂಪನ್ಮೂಲ ಇಲಾಖೆ ಸಚಿವರಾಗಿದ್ದಾಗ ಟೆಂಡರ್‌ ಗೆ ಒತ್ತಡ
ಸಿಡಿ ಪ್ರಕರಣದ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಜಾರಕಿಹೊಳಿ,” ನಾನು ಜಲಸಂಪನ್ಮೂಲ ಇಲಾಖೆ ಸಚಿವನಾಗಿದ್ದಾಗ ಅವರು ಹೇಳಿದವರಿಗೆ ಟೆಂಡರ್‌ ನೀಡುವಂತೆ ಒತ್ತಾಯಿಸಿದ್ದರು. ಅವರು ಹೇಳಿದಂತೆ ಇಲಖಾಎಯನ್ನು ಒಟ್ಟಿಸಲು ನಾನು ನಿರಾಕರಿಸಿದೆ. ಅವರು ಹೇಳಿದಂತೆ ಕೇಳದಿದ್ದಾಗ ಸಿಡಿ ಬಿಡುಗಡೆ ಮಾಡಿದರು” ಎಂದು ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.

ಬೆಳಗಾವಿಯ ಗ್ರಾಮಂತರ ಶಾಸಕಿಯಿಂದ ನನ್ನ ಡಿಕೆ ಸಂಬಂಧ ಹಾಳಾಯ್ತು
” ನಾನು ಡಿಕೆಶಿ ಅಣ್ಣ ತಮ್ಮಂದಿರಂತಿದ್ದೆವು. ಬೆಳಗಾವಿಯ ಗ್ರಾಮಂತರ ಶಾಸಕಿಯಿಂದ ನಮ್ಮ ಸಂಬಂಧ ಹಾಳಾಯ್ತು” ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೆಸರು ಹೇಳದೇ ಸಾಹುಕಾರ್‌ ಆರೋಪ ಮಾಡಿದ್ದಾರೆ. ಅಣ್ಣ- ತಮ್ಮಂದಿರ ಹಾಗೇ ನಾನು ಡಿಕೆಶಿ ಇದ್ದೆವು. ಅದು ಹಾಳಾಗಲು ಕಾರಣ ಬೆಳಗಾವಿಯ ಗ್ರಾಮೀಣ ಶಾಸಕಿ” ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಹಾಳಾಗಲು ವಿಷಕನ್ಯೆಯೇ ಕಾರಣ
” ಇಪ್ಪತ್ತೆರಡು ವರ್ಷಗಳಿಂದ ರಾಜ್ಯದಲ್ಲಿ ಸಿಡಿ ಪ್ರಕರಣ ನಡೆಯುತ್ತಿದ್ದು, ಹಲವಾರು ರಾಜಕಾರಣಿಗಳು, ಅಧಿಕಾರಿಗಳು ಇದರಲ್ಲಿ ಸಿಲುಕಿದ್ದಾರೆ. ಕೋ ಆಪರೇಟಿವ್‌ ಬ್ಯಾಂಕ್‌ ನಲ್ಲಿ ಕೋಟ್ಯಾಂತರ ಅವ್ಯವಹಾರ ನಡೆದಿದ್ದು ಡಿಕೆ ರಾಜ್ಯವನ್ನೇ ಲೂಟಿ ಮಾಡಿದ್ದಾನೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಹಾಳಾಗಲು ವಿಷಕನ್ಯೆಯೇ ಕಾರಣ ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ದ ಜಾರಕಿಹೊಳಿ ಆರೋಪಿಸಿದ್ದಾರೆ.

ನನ್ನ ಬಳಿ 120 ಸಾಕ್ಷ್ಯಾಗಳಿವೆ;
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ನೂರ ಇಪ್ಪತ್ತೆಂಟು ಸಾಕ್ಷಿಗಳಿಗೆ, ಆದರೆ ಯಾವುದನ್ನು ಬಿಡುಗಡೆ ಮಾಡುವುದಿಲ್ಲ. ಎಲ್ಲವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೇಳುತ್ತೇನೆ. ಅವರು ನೂರಾರು ಸಿಡಿ ಮಾಡಿದ್ದಾರೆ. ದೊಡ್ಡ ದೊಡ್ಡ ಉನ್ನತ ಹುದ್ದೆಯ ಅಧಿಕಾರಿಗಳ ಸಿಡಿ ಮಾಡಿದ್ದಾರೆ. ಈ ಗ್ಯಾಂಗ್‌ ಅನ್ನು ಸದೆ ಬಡಿಯಬೇಕಾದಲ್ಲಿ ಸಿಬಿಐ ತನಿಖೆಯಾಗಬೇಕು. ಸಿಡಿ ತೋರಿಸಿಯೇ ಎಲ್ಲರ ಬಾಯಿ ಮುಚ್ಚಿಸುತ್ತಿದ್ದಾರೆ. ಯುವತಿ, ಶ್ರವಣ್‌ ಕುಮಾರ್‌ ಸೇರಿದಂತೆ ಎಲ್ಲರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜಕೀಯವಾಗಿ ಬೆಳೆದುಬಿಡುತ್ತಾನೆಂದು ಸಿಡಿ ಮಾಡಿ ಸಂಚು ರೂಪಿಸಿದ್ದಾರೆ
ಸಿಡಿ ಕೇಸ್​ನಲ್ಲಿ ಬಂಧನವಾದರೆ ರಾಜಕೀಯ ಜೀವನ ಹಾಳು. ಸಿಡಿ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಕೊಡಬೇಕೆಂದು. ಸಿಎಂ ಬೊಮ್ಮಾಯಿ ಸಿಬಿಐ ತನಿಖೆಗೆ ಆದೇಶ ಮಾಡಿದರೆ ಆಯ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ಇದಕ್ಕೂ ಸಂಬಂಧವಿಲ್ಲ ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ನನ್ನ ಹೆಸರ ಹಾಳು ಮಾಡಲು ಇನ್ನೊಂದು ಷಡ್ಯಂತ್ರ ನಡೆಯುತ್ತಿದೆ
ಜಾರಕಿಹೊಳಿ ಅವರು ಆರೋಪಗಳನ್ನು ಮುಂದುವರೆಸಿದ್ದು, ಆಪರೇಷನ್‌ ಕಮಲ ನಂತರದಲಲಿ ಬಾಂಬೆಗೆ ತೆರಳಿದ್ದ ವೇಳೆ ನನಗೆ ಒಂದು ಕರೆ ಬಂದಿದೆ. ಈ ವೇಳೆ ನಾನು ಅವಾಚ್ಯ ಪದಗಳಿಂದ ಬೈದಿದ್ದೆ. ವಳ ಬಗ್ಗೆ ಮಾತನಾಡಿದ್ದನ್ನು ಕಟ್‌ ಮಾಡಿ ಕಿತ್ತೂರು ಚೆನ್ನಮ್ಮನ ಹೆಸರು ಹಾಕಿ ಎಡಿಟ್‌ ಮಾಡಿದ್ದಾರೆ. ಇದನ್ನು ಈಗಿನ ಚುನಾವಣೆ ಸಮಯದಲ್ಲಿ ಬಿಡುಗಡೆ ಮಾಡುವ ಸಂಚು ನಡೆಯುತ್ತಿದೆ. ಎಂದು ಜಾರಕಿಹೊಳಿ ಆರೋಪಿಸಿದ್ದಾರೆ.

ಇದನ್ನೂ ಓದಿ : Audio released by Jarakiholi: ಡಿಕೆ ಶಿವಕುಮಾರ್ ಆಡಿಯೋ ರಿಲೀಸ್ ಮಾಡಿದ ರಮೇಶ್ ಜಾರಕಿಹೊಳಿ : ಆಡಿಯೋದಲ್ಲೇನಿದೆ ಗೊತ್ತಾ ?

ಸಿಡಿ ಯುವತಿ ಬೆಂಗಳೂರಿನಲ್ಲಿದ್ದಾಳೆ, ಆಕೆಯನ್ನು ಬಂಧಿಸಿ
ಇನ್ನೂ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಸ್ಪೋಟಕ ವಿಚಾರವನ್ನು ಜಾರಕಿಹೊಳಿ ತಿಳಿಸಿದ್ದು, ಸಿಡಿ ಯುವತಿ ಕಾಂಗ್ರೆಸ್‌ ಪಕ್ಷದ ಮಹಿಳಾ ಪದಾಧಿಕಾರಿ ಮನೆಯಲ್ಲಿದ್ದಾಳೆ. ಆಕೆಯನ್ನು ಡಿಕೆಶಿ ರಕ್ಷಿಸಿ ಇಟ್ಟಿದ್ದಾನೆ. ಆಕೆಯನ್ನು ಬಂಧಿಸಿದರೆ ಎಲ್ಲಾ ಸಂಚುಗಳು ಹೊರಬೀಳುತ್ತವೆ ಎಂದು ಜಾರಕಿಹೊಳಿ ವರದಿ ಮಾಧ್ಯಮದವರ ಮುಂದೆ ತಿಳಿಸಿದ್ದಾರೆ.

Allegation against D.K.Sivakumar: Sahukar rained down on allegations against KPCC president D.K.Sivakumar: Do you know what are the allegations?

Comments are closed.