Assembly Election 2022 : ಕಾಂಗ್ರೆಸ್ ಎದುರಿಸೋದ್ರಲ್ಲಿ ಎಡವಿದ್ಯಾ ಸರ್ಕಾರ: ಕಾರ್ಯಕಾರಿಣಿ ಯಲ್ಲಿ ಮಹತ್ವದ ಚರ್ಚೆ‌


ಬೆಂಗಳೂರು : ರಾಜ್ಯದಲ್ಲಿ ಒಂದಾದ ಮೇಲೊಂದರಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಗೆ (Assembly Election 2022)ಸಜ್ಜಾಗುತ್ತಿದೆ. ಆದರೆ ಕಾಂಗ್ರೆಸ್ ನ ಈ ಸಂಘಟಿತ ದಾಳಿ ಹಾಗೂ ಟೀಕೆಗಳನ್ನು ಎದುರಿಸುವಲ್ಲಿ ಬಿಜೆಪಿ ಅಕ್ಷರಷಃ ತತ್ತರಿಸಿ ಹೋಗ್ತಿದ್ದು, ಕಾಂಗ್ರೆಸ್ ನ ಏಟುಗಳಿಗೆ ಏದಿರೇಟು ನೀಡಲಾರದ ಬಿಜೆಪಿ ನಾಯಕರು ಮೌನಕ್ಕೆ ಶರಣಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಬಿಜೆಪಿ ಹೈಕಮಾಂಡ್ ಕಂಗಾಲಾಗಿದ್ದು, ಕೈಗೆ ಪ್ರಬಲ ಎದುರಾಳಿಯಾಗೋದಿಕ್ಕೆ ಬಿಜೆಪಿ ಕಾರ್ಯಕಾರಿಣಿ ತರಬೇತಿ ಶಿಬಿರವಾಗಲಿದ್ಯಾ ಅನ್ನೋ ಅನುಮಾನ ಮೂಡಿದೆ.

ಶೇಕಡಾ 40 ರ ಕಮೀಷನ್ ಅವ್ಯವಹಾರದ ಆರೋಪದಿಂದ ಆರಂಭಿಸಿ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ, ಹರ್ಷ ಹಾಗೂ ಪ್ರವೀಣ್ ಹತ್ಯೆ ಕೇಸ್ ನವರೆಗೆ , ಪೇ ಸಿಎಂ ನಿಂದ ಆರಂಭಿಸಿ ಪರೇಶ್ ಮೇಸ್ತಾ ಮರ್ಡರ್ ಕೇಸ್ ವರೆಗೆ ಎಲ್ಲಾ ಪ್ರಕರಣಗಳಲ್ಲೂ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಅಬ್ಬರಿಸಿ ಬಿಜೆಪಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಆದರೆ ಬಿಜೆಪಿ ಮಾತ್ರ ಕಾಂಗ್ರೆಸ್ ನೀಡ್ತಿರೋ ಮರ್ಮಾಘಾತ ತಾಳಲಾರದೇ ಪರದಾಡುತ್ತಿದೆ. ಯಾವುದೇ ಆರೋಪಕ್ಕೂ ಸೂಕ್ತ ಹಾಗೂ ಸಮರ್ಥ ತಿರುಗುತ್ತರ ಕೊಡುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ. ಬಿಜೆಪಿಯ ಸೋಷಿಯಲ್ ಮೀಡಿಯಾ ವಿಂಗ್ ಸೇರಿದಂತೆ ಎಲ್ಲ ವಿಭಾಗಗಳು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿಲ್ಲ. ಅದರಲ್ಲೂ ಪೇ ಸಿಎಂ ಅವಾಂತರದಲ್ಲೂ ಅಕ್ಷರಷಃ ಸಿಎಂ ಬೊಮ್ಮಾಯಿ(CM Basavaraj Bommai) ಏಕಾಂಗಿಯಾಗಿ ನಿಂತು ಇಡಿ ಪ್ರಕರಣವನ್ನು ಎದುರಿಸುವಂತಾಯಿತು.

ಇದೆಲ್ಲವೂ ಈಗ ಬಿಜೆಪಿ ಹೈಕಮಾಂಡ್ ಪಾಲಿಗೆ ಆತಂಕ ತಂದಿದೆ. ಮುಂದಿನ ವಿಧಾನಸಭಾ ಚುನಾವಣೆ(Assembly Election 2022) ಗೆದ್ದು ಅಧಿಕಾರಕ್ಕೆ ಬರೋ ಕನಸಿನಲ್ಲಿರೋ ಬಿಜೆಪಿಗೆ ಕಾಂಗ್ರೆಸ್ ಎದುರಿಸುವ ಶಕ್ತಿಯೇ ಇಲ್ಲ ಅನ್ನೋದೇ ಹೈಕಮಾಂಡ್ ನಾಯಕರನ್ನು ಮುಜುಗರಕ್ಕಿಡಾಗುವಂತೆ ಮಾಡಿದೆ. ಹೀಗಾಗಿ ಅಕ್ಟೋಬರ್ 7 ರಿಂದ ನಗರದಲ್ಲಿ ನಡೆಯುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕಾಂಗ್ರೆಸ್ ನ್ನು ಸಮರ್ಥವಾಗಿ ಎದುರಿಸುವ ಬಗ್ಗೆಯೇ ಪಕ್ಷದ ವರಿಷ್ಟರು ಬಿಜೆಪಿಯ ಹಿರಿ ಕಿರಿಯ ನಾಯಕರಿಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರಂತೆ.

ಇದನ್ನೂ ಓದಿ : Bharat Jodo Yatra : ಮರಿ ಆನೆಗಾಗಿ ಮಿಡಿದ ರಾಹುಲ್ ಗಾಂಧಿ: ಚಿಕಿತ್ಸೆ ಕೊಡಿಸುವಂತೆ ಸಿಎಂ ಗೆ ಪತ್ರ

ಇದನ್ನೂ ಓದಿ : KS Eshwarappa :‘ಆರ್​ಎಸ್​ಎಸ್​​ಗೆ ಬುದ್ಧಿ ಕಲಿಸಲು ಯಾರಪ್ಪನಿಂದಲೂ ಸಾಧ್ಯವಿಲ್ಲ’ : ಕೆ.ಎಸ್​ ಈಶ್ವರಪ್ಪ ಗುಡುಗು

ಇದನ್ನೂ ಓದಿ : Bharat Jodo Yatra :ಎರಡು ದಿನಗಳ ವಿರಾಮದ ಬಳಿಕ ಮತ್ತೆ ಆರಂಭಗೊಂಡ ಭಾರತ್​ ಜೋಡೋ ಯಾತ್ರೆ : ರಾಹುಲ್​ ಗಾಂಧಿಗೆ ಸೋನಿಯಾ ಸಾಥ್​​

ಕಾಂಗ್ರೆಸ್ ಕಾಲದ ಹಗರಣಗಳು, ವಿವಾದಗಳು ಹಾಗೂ ಒತ್ತುವರಿಗಳನ್ನು ಜನರ ಎದುರು ಬಿಚ್ಚಿಟ್ಟು ಕಾಂಗ್ರೆಸ್ ನ ಅಸಲಿ ಮುಖವನ್ನು ಜನರಿಗೆ ತೋರಿಸಬೇಕು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನರು ಈಗ ರಾಜಕೀಯ ಪಕ್ಷಗಳ ನಡೆ ಬಗ್ಗೆ ಕುತೂಹಲ ಹೊಂದಿರುತ್ತಾರೆ. ಅದನ್ನೇ ಲಾಭ ಮಾಡಿಕೊಂಡು ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಕಾರ್ಯಕಾರಿಣಿಯಲ್ಲಿ ಅರುಣ್ ಸಿಂಗ್ ಮಾರ್ಗದರ್ಶನ ಮಾಡಲಿದ್ದಾರಂತೆ.

Assembly Election 2022 BJP vs Congress

Comments are closed.