World’s Most Expensive Sheep Sold : ಅಬ್ಬಬ್ಬಾ.. ಬರೋಬ್ಬರಿ 2 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ ಈ ಕುರಿ

ಆಸ್ಟ್ರೇಲಿಯಾ : Worlds Most Expensive Sheep :ಕೆಲ ಜನರು ಯಾವ ರೀತಿ ಇರ್ತಾರೆ ಅಂದರೆ ತಮಗೇನಾದ್ರೂ ಇಷ್ಟವಾಯ್ತು ಅಂದರೆ ಸಾಕು ಅದಕ್ಕೆ ಎಷ್ಟು ಹಣ ಬೇಕಿದ್ದರೂ ನೀಡಿ ಆ ವಸ್ತುವನ್ನು ಖರೀದಿ ಮಾಡುವ ತನಕ ತಮ್ಮ ಹಠ ಬಿಡೋದಿಲ್ಲ. ಇದು ಆಭರಣ ಆಗಿಬಹುದು ಅಥವಾ ಉಡುಪು ಹೀಗೆ ಯಾವುದೇ ವಸ್ತು ಆಗಿರಬಹುದು. ಕೆಲವರು ವಿನಾ ಕಾರಣ ಹಣವನ್ನು ಖಾಲಿ ಮಾಡ್ತಾರೆ. ಆದರೆ ಎಂದಾದರೂ ನೀವು ಕುರಿಗಳಿಗಾಗಿ ಬೇಕಾಬಿಟ್ಟಿ ಹಣ ಖರ್ಚು ಮಾಡಿದ್ದು ಇದೆಯೇ..? ಇಲ್ಲ ಎಂದಾದರೆ ನೀವು ಈ ಸ್ಟೋರಿಯನ್ನು ಓದಲೇಬೇಕು.

ನೀವು ನಂಬಿದ್ರೆ ನಂಬಿ, ಆಸ್ಟ್ರೇಲಿಯಾದಲ್ಲಿ ಒಂದಷ್ಟು ಜನರು ವಿಶ್ವದ ಅತ್ಯಂತ ದುಬಾರಿ ಕುರಿಯನ್ನು ಖರೀದಿ ಮಾಡಿದ್ದಾರೆ. ಕುರಿಯನ್ನು ಬರೋಬ್ಬರಿ 2 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದ್ದು ಇದು ವಿಶ್ವದ ಅತ್ಯಂತ ದುಬಾರಿ ಕುರಿ ಎಂಬ ಕೀರ್ತಿಗೆ ಪಾತ್ರವಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ, ಎಲೈಟ್​​ ಆಸ್ಟ್ರೇಲಿಯನ್​​ ವೈಟ್​ ಸಿಂಡಿಕೇಟ್​​ ಎಂಬ ನಾಲ್ವರು ಪುರುಷರ ಗುಂಪು ಆಸ್ಟ್ರೇಲಿಯನ್​ ವೈಟ್​ ಸ್ಟಡ್​ ಕುರಿಯನ್ನು ಬರೋಬ್ಬರಿ 2 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.

2 ಕೋಟಿಗೆ ಮಾರಾಟವಾದ ಬಳಿಕ ಈ ಕುರಿ ವಿಶ್ವದ ಅತ್ಯಂತ ದುಬಾರಿ ಕುರಿ ಎಂಬ ದಾಖಲೆ ನಿರ್ಮಿಸಿದೆ. ಈ ಸಿಂಡಿಕೇಟ್ ನ್ಯೂ ಸೌತ್ ವೇಲ್ಸ್‌ನ ನಾಲ್ಕು ಸದಸ್ಯರನ್ನು ಒಳಗೊಂಡಿದೆ. ಈ ಸಿಂಡಿಕೇಟ್‌ನ ಸದಸ್ಯ ಸ್ಟೀವ್ ಪೆಡ್ರಿಕ್ ಈ ಕುರಿಯನ್ನು “ಗಣ್ಯ ಕುರಿ” ಎಂದು ಕರೆದರು. ಕುತೂಹಲಕಾರಿ ವಿಚಾರ ಏನೆಂದರೆ ಕುರಿಯ ಮಾಲೀಕ ಗ್ರಹಾಂ ಗಿಲ್ಮೋರ್​​ ತನ್ನ ಕುರಿ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದನ್ನು ಕಂಡು ಫುಲ್​ ಶಾಕ್​ ಆಗಿದ್ದಾರೆ. ಅಲ್ಲದೇ ಇಷ್ಟೊಂದು ದೊಡ್ಡ ಮೊತ್ತಕ್ಕೆ ನನ್ನ ಕುರಿ ಮಾರಾಟವಾಗಬಹುದು ಎಂಬ ಸಣ್ಣ ಊಹೆ ಕೂಡ ನನಗಿರಲಿಲ್ಲ ಎಂದಿದ್ದಾರೆ .

ಒಂದು ಕುರಿ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಆಸ್ಟ್ರೇಲಿಯಾದಲ್ಲಿ ಉಣ್ಣೆ ಮತ್ತು ಕುರಿ ಮಾಂಸದ ಉದ್ಯಮಕ್ಕೆ ಎಂತಹ ಬೇಡಿಕೆ ಇದೆ ಎಂಬುದನ್ನು ಪ್ರತಿನಿಧಿಸುತ್ತಿದೆ. ಆಸ್ಟ್ರೇಲಿಯಾದಲ್ಲಿ, ತುಪ್ಪಳ ತೆಗೆಯುವ ಕಾರ್ಯಕ್ಕೆ ಹೆಚ್ಚಿನ ವೆಚ್ಚದಿಂದಾಗಿ ಮಾಂಸದ ಬೆಲೆ ಕ್ರಮೇಣ ಬೆಳೆಯುತ್ತಿರುವಾಗ ಕುರಿ ಕತ್ತರಿಸುವ ಜನರ ಸಂಖ್ಯೆಯು ಕ್ಷೀಣಿಸುತ್ತಿದೆ.

ಇದನ್ನು ಓದಿ : Indian Student Murdered : ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ನಿಗೂಢ ಹತ್ಯೆ

ಇದನ್ನೂ ಓದಿ : Man Tries To Kiss Cobra : ನಾಗರಹಾವಿಗೆ ಚುಂಬಿಸಲು ಹೋಗಿ ಆಸ್ಪತ್ರೆ ಪಾಲಾದ ಉರಗ ತಜ್ಞ

In A New Record, Worlds Most Expensive Sheep Sold For Rs 2 Crore In Australia

Comments are closed.