basavaraj bommai : ನಾಳೆ ದೆಹಲಿಗೆ ಸಿಎಂ ಬೊಮ್ಮಾಯಿ: ಸಂಪುಟ ಸರ್ಜರಿಗೆ ಸಿಗುತ್ತಾ ಗ್ರೀನ್​ ಸಿಗ್ನಲ್​

ಬೆಂಗಳೂರು : basavaraj bommai : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಸಂಪುಟ ಸರ್ಜರಿಯ ವಿಚಾರಗಳು ಪದೇ ಪದೇ ಚರ್ಚೆಗೆ ಬರುತ್ತಲೇ ಇದೆ. ಸಂಪುಟ ವಿಸ್ತರಣೆಯಾಗುತ್ತೋ ಅಥವಾ ಪುನಾರಚನೆಯೇ ಆಗುತ್ತೋ ಹೀಗೆ ಸಾಕಷ್ಟು ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಗೃಹ ಅಮಿತ್​ ಶಾ ರಾಜ್ಯಕ್ಕೆ ಭೇಟಿ ನೀಡಿ ಸಿಎಂ ಬೊಮ್ಮಾಯಿ ಜೊತೆಯಲ್ಲಿ ಸಂಪುಟ ಸರ್ಜರಿ ಕುರಿತಂತೆ ಚರ್ಚೆ ಮಹತ್ವದ ಚರ್ಚೆ ನಡೆಸಿದ್ದರು. ಇದಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿಎಂ ಬೊಮ್ಮಾಯಿ ವರಿಷ್ಠರು ಕರೆದಾಗ ದೆಹಲಿಗೆ ಸಂಪುಟ ಸರ್ಜರಿ ಬಗ್ಗೆ ಚರ್ಚಿಸುವೆ ಎಂದು ಹೇಳಿದ್ದರು.


ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ನಾಳೆ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಬೆಳಗ್ಗೆ 8 ಗಂಟೆಗೆ ಸರಿಯಾಗಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ತೆರಳಲಿದ್ದಾರೆ. ದೆಹಲಿಗೆ ಭೇಟಿ ನೀಡಲಿರುವ ಬೊಮ್ಮಾಯಿ ಹೈಕಮಾಂಡ್​ ಜೊತೆ ಚರ್ಚೆ ನಡೆಸಲಿದ್ದಾರೆ.


ಇನ್ವೆಸ್ಟ್​ ಕರ್ನಾಟಕ ಎಂಬ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ದೇಶಗಳ ರಾಯಭಾರಿಗಳು ಹಾಗೂ ಹೈ ಕಮಿಷನರ್​​ಗಳನ್ನು ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ ರಾಜ್ಯದಲ್ಲಿ ಹೂಡಿಕೆ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸಂಜೆ ಈ ಕಾರ್ಯಕ್ರಮವನ್ನು ಪೂರೈಸಿ ನಾಳೆ ರಾತ್ರಿ ದೆಹಲಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಸಂದರ್ಭದಲ್ಲಿ ಹೈಕಮಾಂಡ್​ಗಳನ್ನು ಭೇಟಿಯಾಗಲಿರುವ ಬೊಮ್ಮಾಯಿ ಬಿಜೆಪಿ ರಾಜ್ಯಾಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ಜೊತೆಯಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತಂತೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆಯಿದೆ. ವರಿಷ್ಠರ ಬಳಿಯಲ್ಲಿ ಸಂಪುಟ ಸರ್ಜರಿಗೆ ಹಸಿರು ನಿಶಾನೆ ಪಡೆದು ಬುಧವಾರದಿಂದ ಸಂಪುಟ ವಿಸ್ತರಣೆ ಕಾರ್ಯ ಆರಂಭಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನು ಓದಿ : SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್

ಇದನ್ನೂ ಓದಿ : School Open Postpone : ಶಾಲೆ ಆರಂಭ ಮುಂದೂಡಿ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಭಾಪತಿ ಬಸವರಾಜ್‌ ಹೊರಟ್ಟಿ

basavaraj bommai to visit delhi tomorrow

Comments are closed.