Basavaraj Horatti : ಜೆಡಿಎಸ್‌ ಬಿಟ್ಟು ಬಿಜೆಪಿ ಸೇರ್ತಾರೆ ಬಸವರಾಜ್ ಹೊರಟ್ಟಿ

ಬೆಂಗಳೂರು : ಒಂದೆಡೆ ಜಟ್ಕ ಹಲಾಲ್ ಕಟ್ ಗಳ ನಡುವೆ ಜನರ ಕಿತ್ತಾಟ ನಡೆಯುತ್ತಿದ್ದರೇ ಅತ್ತ 2023 ರ ಚುನಾವಣೆಯ ದೃಷ್ಟಿಯಿಂದ ರಾಜಕೀಯ ಲೆಕ್ಕಾಚಾರಗಳು ಚುರುಕು ಗೊಂಡಿವೆ. ಈಗಾಗಲೇ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಸವರಾಜ್ ಹೊರಟ್ಟಿ ಪಕ್ಷ ಬದಲಾವಣೆ ಖಚಿತಪಡಿಸಿದ್ದು ಸದ್ಯದಲ್ಲೇ ಬಿಜೆಪಿ ಸೇರ್ಪಡೆ ಮುಹೂರ್ತ ಫಿಕ್ಸ್ ಆಗಲಿದೆ ಎಂದಿದ್ದಾರೆ. ಆದರೆ ಬಿಜೆಪಿಯ (BJP) ಸ್ಥಳೀಯ ನಾಯಕರ ವಿರೋಧದ ನಡುವೆ ಬಸವರಾಜ್ ಹೊರಟ್ಟಿ (Basavaraj Horatti ) ಬಿಜೆಪಿ ಅಂಗಳ ಸೇರುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿ.

ಹೌದು, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರೋದು ಫಿಕ್ಸ್ ಆಗಿದೆ.‌ ಸ್ವತಃ ಹುಬ್ಬಳ್ಳಿಯಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ ಈ ಹೇಳಿಕೆ ನೀಡಿದ್ದಾರೆ. ಈಗಾಗಲೇ ಬಿಜೆಪಿ ನಾಯಕರ ಜೊತೆ ಮಾತುಕತೆ ಆಗಿದೆ ನಡ್ಡಾ ಸೇರಿದಂತೆ ಯಡಿಯೂರಪ್ಪನವರು ಸಹ ಮಾತಾಡಿದ್ದಾರೆ. ಎಲ್ಲರೂ ಸಹ ನನ್ನ ಸೇರ್ಪಡೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೊರಟ್ಟಿ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಬಿಜೆಪಿಗೆ ಹೊರಟ್ಟಿ ಸೇರ್ಪಡೆಗೆ ಬಿಜೆಪಿ ನಾಯಕರಲ್ಲೇ ಅಸಮಧಾನ ವ್ಯಕ್ತವಾಗಿದೆ. ಬಸವರಾಜ್ ಹೊರಟ್ಟಿಗೆ ವಯಸ್ಸಾಗಿದೆ. ಅವರ ವಯಸ್ಸು ಬಿಜೆಪಿ ನಿಯಮವನ್ನು ಮೀರಿದೆ ಎಂಬುದನ್ನು ಸೇರಿದಂತೆ ಹಲವು ಸಂಗತಿ ಉದಾಹರಿಸಿ ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆಯಲಾಗಿದೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ್ ಹೊರಟ್ಟಿ ಅದು ಅವರ ವೈಯಕ್ತಿಕ ವಿಚಾರ. ಪತ್ರ ಬರೆದಿರೋರು ಬಗ್ಗೆ ನಾನೇನು ಹೇಳಲಿ. ಅವರು ಏನೇ ಪತ್ರ ಬರೆಯಲಿ ಅದಕ್ಕೂ ನನಗೂ ಸಂಬಂಧವಿಲ್ಲ. ಈಗಾಗಲೇ ರಾಜ್ಯದ ಎಲ್ಲಾ ಬಿಜೆಪಿ ನಾಯಕರ ಜೊತೆ ಚರ್ಚೆ ಯಾಗಿದೆಬಿಜೆಪಿ ಸೇರೋದು ಅಂತಿಮವಾಗಿದೆ ಎಂದಿದ್ದಾರೆ‌

ಚುನಾವಣೆಯ ದಿನಾಂಕ ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದಂತೆಯೇ ಬಿಜೆಪಿ ಸೇರ್ಪಡೆಯಾಗುತ್ತೇನೆ. ನಾನು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವ ಸಂಗತಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಗಮನದಲ್ಲಿದೆ. ಅವರು ಸಹಮತ ವ್ಯಕ್ತಪಡಿಸಿದ್ದಾರೆ. ನಾನು ಎಲ್ಲೇ ಇದ್ದರೂ ಇನ್ನಷ್ಟು ದಿನಗಳ ಕಾಲ ಪರಿಷತ್ ನಲ್ಲಿ ಇರಬೇಕು ಅನ್ನೋದು ಕುಮಾರಸ್ವಾಮಿ ಇಚ್ಛೆಯಾಗಿದೆ ಎಂದರು. ಅಲ್ಲದೇ ನಾನು ಕದ್ದುಮುಚ್ಚಿ ಬಿಜೆಪಿ ಸೇರ್ಪಡೆಗೊಳ್ಳುತ್ತಿಲ್ಲ. ಕುಮಾರಸ್ವಾಮಿಯವರಿಗೂ ಹೇಳಿದ್ದೇನೆ. ಅವರ ಗಮನಕ್ಕೆ ತಂದು ಬಿಜೆಪಿ ಪಕ್ಷ ಸೇರ್ಪಡೆ ಗೊಳ್ಳುತ್ತಿದ್ದೇನೆ ಎಂದರು. ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಬಿಜೆಪಿ ಸೇರೋ ಪಕ್ಕ ದಿನಾಂಕ ತಿಳಿಸುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಮುಗಿಯದ ಸಂಪುಟ ಸಂಕಟ : ಸಚಿವ ಸ್ಥಾನಾಕಾಂಕ್ಷಿಗಳಿಗೆ ಕಹಿಯಾದ ಯುಗಾದಿ

ಇದನ್ನೂ ಓದಿ :  ಐಪಿಎಸ್ ಗೆ ಗುಡ್ ಬೈ ಎಂದ ಭಾಸ್ಕರ್ ರಾವ್ : ಸದ್ಯದಲ್ಲೇ ಬಿಜೆಪಿ ಸೇರ್ತಾರಾ ಖಡಕ್ ಖಾಕಿ

Basavaraj Horatti Ready to Join BJP to leave JDS

Comments are closed.