Vladimir Putin : ವ್ಲಾಡಿಮಿರ್​ ಪುಟಿನ್​ ಸತ್ತಿರಬಹುದು ಎಂದ ಎಂಐ 6

Vladimir Putin : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಈಗಾಗಲೇ ಸತ್ತಿರಬಹುದು ಎಂದು ಹಿರಿಯ ಬ್ರಿಟಿಷ್​ ಗುಪ್ತಚರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.ಪುಟಿನ್​ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಥವಾ ಅವರು ಸತ್ತಿರಲೂಬಹುದು. ಕ್ರೆಮ್ಲಿನ್​ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾದಷ್ಟು ಕಾಲ ಈ ವಿಚಾರವನ್ನು ಮುಚ್ಚಿಡಲಿದೆ ಎಂದು ಎಂಐ 6 ಹೇಳಿದೆ. ಪುಟಿನ್​​ ಇತ್ತೀಚಿಗೆ ಭಾಗಿಯಾಗಿದ್ದಾರೆ ಎನ್ನಲಾದ ಮಾಧ್ಯಮಗೋಷ್ಠಿಯನ್ನು ಬಹುಶಃ ಮೊದಲೇ ರೆಕಾರ್ಡ್​ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ತಿಂಗಳ ಆರಂಭದಲ್ಲಿ ನಡೆದ ಮಾಸ್ಕೋ ವಿಜಯ ದಿನೋತ್ಸವ ಕಾರ್ಯಕ್ರಮದಲ್ಲಿ ವ್ಲಾಡಿಮಿರ್​ ಪುಟಿನ್ (Vladimir Putin)​​ ಅವರ ಸ್ಥಳದಲ್ಲಿ ತದ್ರೂಪವನ್ನು ಇರಿಸಿದ್ದರಬಹುದು ಎಂದು ಬ್ರಿಟೀಷ್​ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಗುಪ್ತಚರ ಮೂಲವೊಂದು ತಿಳಿಸಿರುವ ಮಾಹಿತಿಯ ಪ್ರಕಾರ ಪುಟಿನ್​ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಒಂದು ವೇಳೆ ಅವರು ಮೃತಪಟ್ಟರೆ ಅವರ ಸಾವನ್ನು ವಾರಗಟ್ಟಲೇ ಅಥವಾ ತಿಂಗಳುಗಟ್ಟಲೇ ರಹಸ್ಯವಾಗಿ ಇಡಲಾಗುತ್ತದೆ . ಅವರು ಈಗಾಗಲೇ ಮೃತಪಟ್ಟಿರುವ ಸಾಧ್ಯತೆ ಕೂಡ ಇದೆ ಎಂದು ಹೇಳಿದರು.

ಇದು ತಿಳಿಯುವುದು ಅಸಾಧ್ಯ. ಪುಟಿನ್ ಅವರು ಹಿಂದೆ ಅಸ್ವಸ್ಥರಾಗಿದ್ದಾಗ ಬಾಡಿ ಡಬಲ್ಸ್ ಅನ್ನು ಬಳಸಿದ್ದಾರೆ ಮತ್ತು ಕ್ರೆಮ್ಲಿನ್ ಈಗ ಹಾಗೆ ಮಾಡಬಹುದು ಎಂದು ಹೇಳಲಾಗುತ್ತಿದೆ. .
“ಪುಟಿನ್ಗೆ ಸಂಪೂರ್ಣವಾಗಿ ನಿಷ್ಠರಾಗಿರುವ ಹಿರಿಯ ಅಧಿಕಾರಿಗಳ ಸಣ್ಣ ಗುಂಪಿನ ಮುಖ್ಯಸ್ಥರಾಗಿದ್ದಾರೆ.ಈ ಆಪ್ತರಿಗಿರುವ ಪ್ರಮುಖ ಭಯ ಏನೆಂದರೆ ವ್ಲಾಡಿಮಿರ್​ ಪುಟಿನ್​ (Vladimir Putin) ಮರಣವನ್ನು ಘೋಷಣೆ ಮಾಡಿದ ಬಳಿಕ ಕ್ರೆಮ್ಲಿನ್​ನಲ್ಲಿ ದಂಗೆ ಸಂಭವಿಸಬಹುದು ಹಾಗೂ ರಷ್ಯಾದ ಜನರಲ್​​ಗಳು ಉಕ್ರೇನ್​​ನಿಂದ ಹಿಂದೆ ಸರಿಯಲು ಬಯಸಬಹುದು ಎಂಬುದಾಗಿದೆ.

ಪುಟಿನ್​ರ ಸಾವು ಈ ಆಪ್ತರ ಗುಂಪನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಆದ್ದರಿಂದ ಪುಟಿನ್​ ಜೀವಂತವಾಗಿದ್ದಾರೆ ಎಂದು ಹೇಳಲು ಪಟ್ಟಭದ್ರ ಹಿತಾಸಕ್ತಿಯನ್ನು ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪುಟಿನ್​ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗಿದೆ. ಪುಟಿನ್​ ಸ್ಟಿರಾಯ್ಡ್​ಗಳನ್ನು ಸ್ವೀಕರಿಸುತ್ತಿದ್ದಾರೆ ಅಥವಾ ಅವರು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನಂಬಲಾಗಿದೆ. ಪುಟಿನ್​​ ಮುಖ ತೀವ್ರವಾಗಿ ಉಬ್ಬಿರುವುದನ್ನು ನೋಡಿದ ಬಳಿಕ ಕೆಲವರು ಅವರಿಗೆ ರಕ್ತದ ಕ್ಯಾನ್ಸರ್​ ಇರಬೇಕು ಎಂದಿದ್ದರು.

ಇದನ್ನು ಓದಿ : Kerala HC Reunites Lesbian : ಪೋಷಕರ ಒತ್ತಡದಿಂದ ದೂರಾದ ಸಲಿಂಗಕಾಮಿಗಳನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್​

ಇದನ್ನೂ ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್​​ರೇಪ್​ಗೆ ಸುಪಾರಿ ಕೊಟ್ಟ ಪತ್ನಿ

MI6 spies claim Vladimir Putin could be dead and a body double is taking his place at public events

Comments are closed.