Bhavani Revanna : ಜೆಡಿಎಸ್‌ ರಾಜ್ಯಾಧ್ಯಕ್ಷರಾಗ್ತಾರಾ ಭವಾನಿ ರೇವಣ್ಣ? ಸಿಎಂಇಬ್ರಾಹಿಂ ಮುಂದುವರಿಕೆಗೆ ಪಟ್ಟು ಹಿಡಿದ ಕುಮಾರಣ್ಣ

ಬೆಂಗಳೂರು : Bhavani Revanna vs CM Ibrahim : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ ಸಂಭ್ರಮದಲ್ಲಿದ್ದರೇ, ಬಿಜೆಪಿ ವಿಪಕ್ಷ ನಾಯಕರನ್ನು ಆಯ್ಕೆ ಮಾಡೋ ತಲೆಬಿಸಿಯಲ್ಲಿದೆ. ಆದರೆ ಜೆಡಿಎಸ್ ನಲ್ಲಿ (JDS) ಇನ್ನೂ ಫ್ಯಾಮಿಲಿಪಾಲಿಟಿಕ್ಸ್ ಜೋರಾಗಿದ್ದು, ಕುಮಾರಸ್ವಾಮಿ ರೇವಣ್ಣ ಕುಟುಂಬವನ್ನು ಪಕ್ಷದ ಜವಾಬ್ದಾರಿಗಳಿಂದ ದೂರವಿಡೋ ಸರ್ಕಸ್ ಮುಂದುವರೆಸಿದ್ದಾರೆ. ಯಾವುದೇ ರಾಜಕೀಯ ಪಕ್ಷವಾದರೂ ಪಕ್ಷಕ್ಕೊಂದು ರಾಜ್ಯಾಧ್ಯಕ್ಷರ ಆಯ್ಕೆ ನಡೆಯೋದು ಕಾಮನ್. ಹಾಗೇಯೆ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಹೊಣೆ ತನ್ನ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರೋದು. ಇದಕ್ಕೆ ಉತ್ತಮ ಉದಾಹರಣೆ ಬಿಜೆಪಿಯ ಬಿಎಸ್ವೈ. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಬಿಎಸ್ವೈ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಗೆಲ್ಲಿಸಿ ಸಿಎಂ ಸ್ಥಾನಕ್ಕೇರಿದ್ರು. ಹಾಗೇಯೆ ಒಂದೊಮ್ಮೆ ಪಕ್ಷವನ್ನು ಗೆಲ್ಲಿಸಿಕೊಂಡು ಬರೋದ್ರಲ್ಲಿ ವಿಫಲವಾದರೇ ಸೋಲಿನ ಹೊಣೆ ಹೊತ್ತು ಪಕ್ಷದ ರಾಜ್ಯಾಧ್ಯಕ್ಷರು ರಾಜೀನಾಮೆ ಕೊಡೋದು ರಾಜಕೀಯದಲ್ಲಿ ಒಂದು ರೀತಿಯ ಅಲಿಖಿತ ನಿಯಮ.

ಇದರಂತೆ 2023 ರ ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರೋ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಜೆಡಿಎಸ್ ನಲ್ಲಿ ಸಿಎಂ ಇಬ್ರಾಹಿಂ ರಾಜೀನಾಮೆಯನ್ನು ಅಂಗೀಕರಿಸಬೇಕಿದ್ದ ಕುಮಾರಸ್ವಾಮಿ ಉಲ್ಟಾ ಹೊಡೆದಿದ್ದಾರೆ. ಸಿಎಂ ಇಬ್ರಾಹಿಂ (CM Ibrahim) ರಾಜೀನಾಮೆ ನೀಡುತ್ತಿದ್ದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಚಿಂತನೆ ಆರಂಭವಾಗಿತ್ತು. ಈ ವೇಳೆ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದ ಬಿಜೆಪಿಯ ಪ್ರೀತಂ ಗೌಡರ ವಿರುದ್ಧ ಪಕ್ಷದ ಅಭ್ಯರ್ಥಿ ಸ್ವರೂಪ್ ರನ್ನು ಗೆಲ್ಲಿಸಿಕೊಂಡು ಬಂದ ಗಟ್ಟಿಗಿತ್ತಿ ಭವಾನಿ ರೇವಣ್ಣ ಹೆಸರು ಪ್ರಸ್ತಾಪಕ್ಕೆ ಬಂದಿತ್ತು.

ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲಿ ಭವಾನಿ ರೇವಣ್ಣ ಪರ ಅಭಿಯಾನ ಕೂಡ ನಡೆದಿತ್ತು. ಇದು ಕುಮಾರಸ್ವಾಮಿಯವರ ಕಣ್ಣು ಕೆಂಪಾಗಿಸಿದೆ. ಹೀಗಾಗಿ ಸಿಎಂ ಇಬ್ರಾಹಿಂ ಸ್ಥಾನಕ್ಕೆ ಭವಾನಿ ರೇವಣ್ಣ ನೇಮಕದ ಸಾಧ್ಯತೆಗಳ ಚರ್ಚೆಗೆ ಅಂತ್ಯ ಹಾಡುವಂತೆ ಕುಮಾರಸ್ವಾಮಿ ಸಿ.ಎಂ. ಇಬ್ರಾಹಿಂರನ್ನೇ ಮುಂದುವರೆಸುವಂತೆ ದೊಡ್ಡ ಗೌಡರ ಮನವೊಲಿಸಿದ್ದಾರಂತೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗ ಸಿಎಂ ಇಬ್ರಾಹಿಂ ರಾಜೀನಾಮೆ ಅಂಗೀಕರಿಸಿದರೇ ನಾವು ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿ ಪಡೆಯಬೇಕಾಗುತ್ತದೆ. ಮಾತ್ರವಲ್ಲ ಇದರಿಂದ ಮುಸ್ಲಿಂ ಮತಗಳು ಕೂಡ ಡೈವರ್ಟ್ ಆಗಲಿದೆ. ಹೀಗಾಗಿ ಲೋಕಸಭಾ ಚುನಾವಣೆ ಮುಗಿಯುವರೆಗೂ ಸಿಎಂ ಇಬ್ರಾಹಿಂರನ್ನೇ ಮುಂದುವರೆಸೋಣ ಎಂದು ಒಪ್ಪಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ : Praveen Nettar’s Nuthana Kumari : ಪ್ರವೀಣ್‌ ನೆಟ್ಟಾರು ಪತ್ನಿಯನ್ನು ಕೆಲಸದಿಂದ ವಜಾಗೊಳಿಸಿದ ಕಾಂಗ್ರೆಸ್‌ ಸರಕಾರ

ಭವಾನಿ ರೇವಣ್ಣ ಸ್ವತಃ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಸಿದ್ಧತೆಯಲ್ಲಿದ್ದರೂ ಕೂಡ ದೇವೇಗೌಡರ ಮಾತಿಗೆ ಒಪ್ಪಿ ಸ್ವರೂಪ್ ರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಶ್ರಮ ವಹಿಸಿದ್ದರು. ಆದರೆ ಪತ್ನಿಯನ್ನು ರಾಜಕೀಯದಿಂದ ದೂರವಿರಿಸಿ ಮಗನನ್ನು ಕಣಕ್ಕಿಳಿಸಿದ ಎಚ್.ಡಿ.ಕುಮಾರಸ್ವಾಮಿ ಮಾತ್ರ ಪತ್ನಿ ಗೆದ್ದಿದ್ದ ಸ್ಥಾನವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.ಈಗ ಭವಾನಿ ಯವರಿಗೆ ಪಕ್ಷದ ಒಳಗೂ ಉನ್ನತ ಸ್ಥಾನಮಾನ ನೀಡಿದರೇ ಮುಂದಿನ ದಿನದಲ್ಲಿ ಭವಾನಿಯವರ ರಾಜಕೀಯ ಏಳ್ಗೆ ತಮಗೆ ಮುಳುವಾಗಲಿದೆ ಎಂದು ಕುಮಾರಸ್ವಾಮಿ ಚಿಂತಿಸಿದಂತಿದ್ದು, ಇದೆಲ್ಲದರ ಫಲವಾಗಿ ಸದ್ಯ ಸೋತ ಜೆಡಿಎಸ್ ಗೆ ಸಿಎಂಇಬ್ರಾಹಿಂ ಸಾರಥ್ಯ ಮುಂದುವರೆಯಲಿದೆ. ಇದನ್ನೂ ಓದಿ : Lok Sabha Election 2024 : ಶಿವಮೊಗದಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಕಾದಾಟ, ಬಿವೈ ರಾಘವೇಂದ್ರ vs ಗೀತಾ ಶಿವರಾಜ್‌ ಕುಮಾರ್‌

https://www.youtube.com/watch?v=qKCjdDmu7Tg

Bhavani Revanna be the state president of JDS Kumaranna insisted on CM Ibrahim’s continuation

Comments are closed.