ಬಾಗಲಕೋಟೆ : shock for Congress : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವ ನಡುವೆಯೇ ವಿವಿಧ ರಾಜಕೀಯ ಚಟುವಟಿಕೆಗಳು ಒಂದೊಂದಾಗಿಯೇ ಗರಿಗೆದರುತ್ತಿದೆ. ಸದ್ಯ ರಾಜ್ಯದಲ್ಲಿ ಸಾವರ್ಕರ್ ವಿವಾದ, ಮೊಟ್ಟೆ ಪಾಲಿಟಿಕ್ಸ್ನಂತಹ ಘಟನೆಗಳೇ ಮುನ್ನೆಲೆಯಲ್ಲಿ ಇವೆ. ಈ ಎಲ್ಲದರ ನಡುವೆ ಬಾಗಲಕೋಟೆಯಲ್ಲಿ ಹಾಲಿ ಹಾಗೂ ಮಾಜಿ ಸಚಿವರು ಸೈಲೆಂಟ್ ಆಗಿಯೇ ದೋಸ್ತಿ ಮಾಡಿಕೊಂಡಿದ್ದು ಪಕ್ಷಾಂತರದ ಸುಳಿವು ದಟ್ಟವಾಗಿ ಸಿಕ್ಕಿದೆ.
ಹೌದು..! ಬಾಗಲಕೋಟೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಹಾಗೂ ಮಾಜಿ ಸಚಿವ ಎಸ್.ಆರ್ ಪಾಟೀಲ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು ಜಿಲ್ಲೆಯಲ್ಲಿ ರಾಜಕೀಯ ಲೆಕ್ಕಾಚಾರಗಳು ಗರಿಗೆದರುವಂತೆ ಮಾಡಿದೆ. ಇವರಿಬ್ಬರು ಸೌಜನ್ಯಕ್ಕಾಗಿ ಭೇಟಿಯಾಗಿದ್ದಾರಾ ಅಥವಾ ಎಸ್.ಆರ್ ಪಾಟೀಲ್ರನ್ನು ಕಾಂಗ್ರೆಸ್ನಿಂದ ಬಿಜೆಪಿಗೆ ಬರಮಾಡಿಕೊಳ್ಳಲು ನಡೆಯುತ್ತಿರುವ ಹುನ್ನಾರವೇ ಎಂಬುದು ಸದ್ಯದ ಚರ್ಚಾ ವಿಷಯವಾಗಿದೆ.
ಎಸ್.ಆರ್ ಪಾಟೀಲ್ ಹಾಗೂ ಮುರುಗೇಶ್ ನಿರಾಣಿ ದೋಸ್ತಿಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಆಗಸ್ಟ್ 18ರಂದು ಸಚಿವ ಮುರುಗೇಶ್ ನಿರಾಣಿ ಹುಟ್ಟುಹಬ್ಬದ ದಿನದಂದು ಎಸ್.ಆರ್ ಪಾಟೀಲ್ ನಿರಾಣಿ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದ್ದರು. ಇದಕ್ಕೂ ಮುನ್ನ ಜುಲೈ 31ರಂದು ಎಸ್.ಆರ್ ಪಾಟೀಲ್ ಜನ್ಮದಿನದಂದು ಸಚಿವ ಮುರುಗೇಶ್ ನಿರಾಣಿ ಪಾಟೀಲ್ ಮನೆಗೆ ತೆರಳಿ ಶುಭಾಶಯ ತಿಳಿಸಿದ್ದರು. ಈ ದೋಸ್ತಿಯ ಫೋಟೋಗಳು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ .
ಎಸ್.ಆರ್ ಪಾಟೀಲ್ ಹಾಗೂ ಮುರುಗೇಶ್ ನಿರಾಣಿ ದೋಸ್ತಿ ಬಲಗೊಳ್ಳುತ್ತಿರುವ ನಡುವೆಯೇ ಹೈಕಮಾಂಡ್ನಿಂದ ಎಸ್.ಆರ್ ಪಾಟೀಲ್ಗೆ ದಿಢೀರ್ ಬುಲಾವ್ ಬಂದಿದೆ ಎನ್ನಲಾಗ್ತಿದೆ. ಹೀಗಾಗಿ ಎಸ್.ಆರ್ ಪಾಟೀಲ್ ಶೀಘ್ರದಲ್ಲಿಯೇ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಎಸ್.ಆರ್ ಪಾಟೀಲ್ಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿತ್ತು. ಎಸ್.ಆರ್ ಪಾಟೀಲ್ಗೆ ವಿಧಾನ ಪರಿಷತ್ ಟಿಕೆಟ್ ತಪ್ಪಿಸಿದ್ದು ಸಿದ್ದರಾಮಯ್ಯ ಎಂಬ ಅಸಮಾಧಾನ ಎಸ್.ಆರ್ ಪಾಟೀಲ್ ಬೆಂಬಲಿಗರಲ್ಲಿದೆ.
ಈ ಘಟನೆ ಬಳಿಕ ಕಳೆದ ಏಳೆಂಟು ತಿಂಗಳಿನಿಂದ ಎಸ್.ಆರ್ ಪಾಟೀಲ್ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿರುವ ಹೈಕಮಾಂಡ್ ಎಸ್.ಆರ್ ಪಾಟೀಲ್ರನ್ನು ದೆಹಲಿಗೆ ಕರೆಯಿಸಿಕೊಂಡು ಮನವೊಲಿಸಲು ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ಇಂದೇ ಎಸ್.ಆರ್ ಪಾಟೀಲ್ ದೆಹಲಿಗೆ ಹೊರಡಲಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಇದನ್ನೂ ಓದಿ : T20 World Cup Team India : ಸೆಪ್ಟೆಂಬರ್ 15ಕ್ಕೆ ಟೀಮ್ ಇಂಡಿಯಾ ಆಯ್ಕೆ; Follow Live Updates
Big shock for Congress: closeness between Murugesh Nirani and SR Patil