T20 World Cup Team India : ಸೆಪ್ಟೆಂಬರ್ 15ಕ್ಕೆ ಟೀಮ್ ಇಂಡಿಯಾ ಆಯ್ಕೆ; Follow Live Updates

ಬೆಂಗಳೂರು: (T20 World Cup Team India) ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಸೆಪ್ಟೆಂಬರ್ 15ಕ್ಕೆ ನಡೆಯುವ ಸಾಧ್ಯತೆಯಿದೆ.

ಟಿ20 ವಿಶ್ವಕಪ್’ಗೆ ತಂಡವನ್ನು ಆಯ್ಕೆ ಮಾಡಲು ಸೆಪ್ಟೆಂಬರ್ 16 ಅಂತಿಮ ದಿನವಾಗಿರುವ ಕಾರಣ ಭಾರತ ತಂಡದ ಆಯ್ಕೆ ಡೆಡ್’ಲೈನ್’ಗಿಂತ ಒಂದು ದಿನ ಮೊದಲು ನಡೆಯುವ ಸಾಧ್ಯತೆಗಳಿವೆ. ಮುಂಬೈನಲ್ಲಿ ಸಭೆ ಸೇರಲಿರುವ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು ಚುಟುಕು ವಿಶ್ವಕಪ್’ಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಿದ್ದಾರೆ. ಏಷ್ಯಾ ಕಪ್ ಟೂರ್ನಿಯಲ್ಲಿ ಆಟಗಾರರು ನೀಡುವ ಪ್ರದರ್ಶನದ ಆಧಾರದ ಮೇಲೆ ತಂಡದ ಆಯ್ಕೆ ನಡೆಯಲಿದೆ.

ಏಷ್ಯಾ ಕಪ್ ಟೂರ್ನಿ ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ಯುಎಇನಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 28ರಂದು ದುಬೈನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಪಾಕಿಸ್ತಾನ, ದಕ್ಷಿಣ ಆಫ್ರಿಕಾ,ಬಾಂಗ್ಲಾದೇಶ ಮತ್ತು ಅರ್ಹತಾ ಸುತ್ತಿನಲ್ಲಿ ಗೆಲ್ಲುವ ಒಂದು ತಂಡದೊಂದಿಗೆ ಗ್ರೂಪ್-2ರಲ್ಲಿ ಸ್ಥಾನ ಪಡೆದಿದೆ.

  • ಟಿ20 ವಿಶ್ವಕಪ್’ಗೆ ತಂಡಗಳ ವಿವರ ಸಲ್ಲಿಸಲು ಸೆಪ್ಟೆಂಬರ್ 16 ಅಂತಿಮ ದಿನ.
  • ಪ್ರತೀ ತಂಡಗಳಲ್ಲಿ ಗರಿಷ್ಠ 15 ಮಂದಿ ಆಟಗಾರರ ಆಯ್ಕೆಗೆ ಅವಕಾಶ.
  • 15 ಆಟಗಾರರು ಮತ್ತು 8 ಸಹಾಯಕ ಸಿಬ್ಬಂದಿ ಸೇರಿ ತಂಡದಲ್ಲಿ ಒಟ್ಟು 23 ಸದಸ್ಯರಿರಬಹುದು.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತದ ಸಂಭಾವ್ಯ ತಂಡ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಯುಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ದೀಪಕ್ ಹೂಡ, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್, ದೀಪಕ್ ಚಹರ್.

ಇದನ್ನೂ ಓದಿ : Gautam Gambhir : ಭಾರತ ಪರ ಮತ್ತೆ ಬ್ಯಾಟ್ ಹಿಡಿದು ಅಬ್ಬರಿಸಲಿದ್ದಾರೆ ವಿಶ್ವಕಪ್ ಹೀರೋ, ಸಂಸದ ಗೌತಮ್ ಗಂಭೀರ್

ಇದನ್ನೂ ಓದಿ : Shukla Vs Tiwary : ಬಂಗಾಳ ಕ್ರಿಕೆಟ್ ತಂಡಕ್ಕೆ ಮಾಜಿ ಕ್ರೀಡಾ ಸಚಿವ ಕೋಚ್, ಹಾಲಿ ಕ್ರೀಡಾ ಸಚಿವ ಆಟಗಾರ

T20 World Cup Team India selected for September 15 Follow Live Updates

Comments are closed.