ಮಂಗಳವಾರ, ಏಪ್ರಿಲ್ 29, 2025
HomekarnatakaRamesh Jarakiholi disciplinary action : ಶಿಸ್ತುಕ್ರಮದ ಭಯ: ದೆಹಲಿಗೆ ದೌಡಾಯಿಸಿದ ಬೆಳಗಾವಿ ಸಾಹುಕಾರ

Ramesh Jarakiholi disciplinary action : ಶಿಸ್ತುಕ್ರಮದ ಭಯ: ದೆಹಲಿಗೆ ದೌಡಾಯಿಸಿದ ಬೆಳಗಾವಿ ಸಾಹುಕಾರ

- Advertisement -

ಬೆಂಗಳೂರು : ರಾಜ್ಯದಲ್ಲಿ ಪರಿಷತ್ ಚುನಾವಣೆ ಮುಗಿದಿದ್ದರೂ ಎಲೆಕ್ಷನ್ ಲೆಕ್ಕಾಚಾರಗಳು ಮುಗಿದಿಲ್ಲ. ಬೆಳಗಾವಿಯಲ್ಲಿ ಆಡಳಿತಾರೂಢ ಬಿಜೆಪಿಗೆ ಎದುರಾದ ಸೋಲು ಪಕ್ಷದ ನಾಯಕರಿಗೆ ತೀವ್ರ ಮುಜುಗರ ತಂದಿಟ್ಟಿದ್ದು ಹುಬ್ಬಳ್ಳಿ ಕಾರ್ಯಕಾರಿಣಿಯಲ್ಲೂ ಇದೇ ಸಂಗತಿ ಪ್ರಸ್ತಾಪಗೊಂಡಿದೆ. ಮಾತ್ರವಲ್ಲ ಸೋಲಿನ ತನಿಖೆಗೆ ಸಮಿತಿ‌ ರಚನೆ ಮಾಡೋದಾಗಿ ಅರುಣ ಸಿಂಗ್ ಘೋಷಿಸಿದ್ದಾರೆ. ಹೀಗಾಗಿ ಬೆಳಗಾವಿ ಬಿಜೆಪಿ ಅಭ್ಯರ್ಥಿ ಸೋಲಿನ ಪರಾಮರ್ಶೆ ನಡೆಯೋ ಸಾದ್ಯತೆ ಹಿನ್ನೆಲೆಯಲ್ಲಿ ಶಿಸ್ತು ಕ್ರಮದ ಭೀತಿ ಯಲ್ಲಿ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ (Ramesh Jarakiholi disciplinary action) ದೆಹಲಿಗೆ ದೌಡಾಯಿಸಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಪ್ರತಿಷ್ಠೆಯ ವಿಚಾರವಾಗಿದ್ದ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಸೋತಿತು. ಈ ಸೋಲು ರಮೇಶ್ ಜಾರಕಿಹೊಳಿಯವರಿಂದಲೇ ಆಯಿತು. ಬಿಜೆಪಿ ಟಿಕೇಟ್ ಸಿಗದೇ ಬಂಡಾಯವೆದ್ದ ಲಖನ್ ಜಾರಕಿಹೊಳಿ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಅವರನ್ನು ಗೆಲ್ಲಿಸಲು ರಮೇಶ್ ಪಕ್ಷವನ್ನು ಹಾಗೂ ಪಕ್ಷದ ಅಧಿಕೃತ ಅಭ್ಯರ್ಥಿ ಯನ್ನೇ ಮರೆತು ಬಿಟ್ಟರು ಅನ್ನೋ ಮಾತು ರಾಜಕೀಯ ವಲಯದಲ್ಲೇ ಕೇಳಿ ಬಂದಿತ್ತು.

ಶತಾಯ ಗತಾಯ ರಮೇಶ್ ಜಾರಕಿಹೊಳಿ ತಮ್ಮ ಸಹೋದರನನ್ನು ಗೆಲ್ಲಿಸಿಕೊಂಡರು. ಅದರೆ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಇದು ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ. ಹೀಗಾಗಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ವೇಳೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಬೆಳಗಾವಿ ಸೋಲಿನ ಪರಾಮರ್ಶೆಗಾಗಿ ಸಮಿತಿ ರಚನೆ ಮಾಡುತ್ತೇವೆ.‌ತಪ್ಪಿತಸ್ಥರ ವಿರುದ್ಧ ಕ್ರಮವಾಗುತ್ತೆ ಎಂದು ಖಡಕ್ ಎಚ್ಚರಿಕೆ‌ ನೀಡಿದರು.

ಈಗಾಗಲೇ ಮಂತ್ರಿ ಮಂಡಲದಲ್ಲಿ ಸ್ಥಾನ‌ ಸಿಗದೇ ಕಂಗಲಾಗಿ ಸಂಪುಟ ಸೇರುವ ಸರ್ಕಸ್ ನಡೆಸಿರುವ ರಮೇಶ್ ಜಾರಕಿಹೊಳಿ ಈ ಹೇಳಿಕೆಯಿಂದ ಕಂಗಾಲಾಗಿದ್ದು, ಶಿಸ್ತು ಕ್ರಮ ತಪ್ಪಿಸಿಕೊಳ್ಳಲು ದೆಹಲಿಗೆ ದೌಡಾಯಿಸಿದ್ದಾರೆ. ದೆಹಲಿಯಲ್ಲಿ ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್ ಸೇರಿದಂತೆ ವರಿಷ್ಠರನ್ನು ಭೇಟಿ ಮಾಡಿ ಮನವೊಲಿಸುವ ಕಸರತ್ತು ನಡೆಸೋದು ಹಾಗೂ ಲಖನ್ ಜಾರಕಿಹೊಳಿಯನ್ನು ಬಿಜೆಪಿ ಸೇರಿಸಲು ಹೈಕಮಾಂಡ್ ಒಪ್ಪಿಸಿ ಶಿಸ್ತು ಕ್ರಮದಿಂದ ಬಚಾವ್ ಅಗೋದು ರಮೇಶ್ ಜಾರಕಿಹೊಳಿ ಪ್ಲ್ಯಾನ್ ಎನ್ನಲಾಗ್ತಿದೆ.

ಅಲ್ಲದೇ ಬೆಳಗಾವಿಯಲ್ಲಿ ಪರಿಷತ್ ಸೋಲಿಗೆ ಪಕ್ಷ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಚುನಾವಣೆ ನಡೆಸಿದ್ದು ಕಾರಣ ಎಂದು ಹಾಗೂ ಅಭ್ಯರ್ಥಿಯ ಕಾರಣಕ್ಕೆ ಪಕ್ಷಕ್ಕೆ ಸೋಲಾಯಿತು ಎಂಬುದನ್ನು ಮನವರಿಕೆ‌ಮಾಡಿಕೊಡುವ ಪ್ರಯತ್ನ ಮಾಡಲಿದ್ದಾರಂತೆ. ಅಲ್ಲದೇ ಪರಿಷತ್ ಬಹುಮತಕ್ಕೆ ಲಖನ್ ರನ್ನು ಬಿಜೆಪಿಗೆ ಸೇರಿಸಿಕೊಳ್ಳಿ ಎಂಬ ಮನವಿ ಯನ್ನು ಸಲ್ಲಿಸಲಿದ್ದಾರಂತೆ. ಹೀಗಾಗಿ ಬೆಳಗಾವಿ ಸಾಹುಕಾರ್ ದೆಹಲಿ ಭೇಟಿ ಕುತೂಹಲ ಮೂಡಿಸಿದ್ದು ರಮೇಶ್ ತಮ್ಮ ತಲೆ ಕಾಯ್ದುಕೊಳ್ಳಲು ಯಾವ ತಂತ್ರ ಅನುಸರಿಸುತ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ : Basavaraj Bommai Knee Pain : ಸಿಎಂ ಬಸವರಾಜ್‌ ಬೊಮ್ಮಾಯಿ ಮಂಡಿ ನೋವಿಗೆ ನಾಟಿ ವೈದ್ಯರಿಂದ ಚಿಕಿತ್ಸೆ

ಇದನ್ನೂ ಓದಿ : CM Changes Gossip : ಸಿಎಂ ಬದಲಾವಣೆ ಗಾಸಿಪ್ ಗೆ ತೆರೆ : ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಎಲೆಕ್ಷನ್ ಅಂದ್ರು ಅರುಣ ಸಿಂಗ್

( Bjp Candidate Defeat in MLC Election, Ramesh Jarakiholi departs in Delhi for fear of disciplinary action)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular