Janotsava in Davangere : ಸಿದ್ಧರಾಮೋತ್ಸವಕ್ಕೆ ಟಕ್ಕರ್‌ ಕೊಡುತ್ತಾ ಬಿಜೆಪಿ : ದಾವಣಗೆರೆಯಲ್ಲೇ ಜನೋತ್ಸವಕ್ಕೆ ಕಮಲಪಡೆ ಸಜ್ಜು

ಬೆಂಗಳೂರು : (Janotsava in Davangere) 75 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ವಿಪಕ್ಷ ನಾಯಕ ಸಿದ್ಧರಾಮಯ್ಯನರ ಹುಟ್ಟುಹಬ್ಬವನ್ನು ಕಾಂಗ್ರೆಸ್ ಪಕ್ಷ ಎಲ್ಲ ಮುನಿಸು ಮರೆತು ಸಿದ್ಧರಾಮೋತ್ಸವವಾಗಿ ಆಚರಿಸಿದೆ. ಅದ್ದೂರಿ ಕಾರ್ಯಕ್ರಮ ಹಾಗೂ ಜನಸ್ಪಂದನೆ ಕಂಡು ಬಿಜೆಪಿ ಹಾಗೂ ಬಿಜೆಪಿ ನಾಯಕರು ಬೆಚ್ಚಿ ಬಿದ್ದಿದ್ದಾರೆ. ಕಾಂಗ್ರೆಸ್ ನ ಚುನಾವಣಾ ದಿಕ್ಸೂಚಿ ಸಭೆ ಇದು ಎಂದು ಬಿಜೆಪಿ ಅರ್ಥೈಸಿದ್ದು ಇದಕ್ಕೆ ಕೌಂಟರ್ ಕೊಡೋಕೆ ಈಗ ರಾಜ್ಯದಲ್ಲಿ ಅಧಿಕಾರದಲ್ಲಿರೋ ಬಿಜೆಪಿ ಸರ್ಕಾರದ ಭರ್ಜರಿ ಪ್ಲ್ಯಾನ್ ಆರಂಭಿಸಿದೆ ಎನ್ನಲಾಗ್ತಿದೆ.

ಹೌದು ಕರುನಾಡಿನ ಮಧ್ಯಭಾಗದಲ್ಲಿರೋ ಹಾಗೂ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿರೋ ದಾವಣಗೆರೆ ನಿನ್ನೆ ಅಕ್ಷರಷಃ ಕಾಂಗ್ರೆಸ್ ನ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಸಿದ್ಧರಾಮೋತ್ಸವದಲ್ಲಿ ನೆರೆದ ಜನಸಾಗರವನ್ನು ಕಂಡು ರಾಜ್ಯದ ಜನತೆ ಮೂಗಿನ ಮೇಲೆ ಬೆರಳಿಟ್ಟಿದ್ದರೇ ಬಿಜೆಪಿ ಬೆರಗಾಗಿದೆ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ಸಿದ್ಧರಾಮೋತ್ಸವದ ಬಗ್ಗೆ ತುಂಬಾ ಗಂಭೀರವಾದ ಚರ್ಚೆ ನಡೆದಿದೆ. ಬಿಎಸ್ವೈ ಸೇರಿದಂತೆ ಬಿಜೆಪಿಯ ಬಹುತೇಕ ನಾಯಕರು ಇದು ಕಾಂಗ್ರೆಸ್ ನ ಶಕ್ತಿ ಪ್ರದರ್ಶನ ಮಾತ್ರವಲ್ಲ ಚುನಾವಣೆಯ ದಿಕ್ಸೂಚಿ ಎಂದು ಅರ್ಥೈಸಿದ್ದಾರೆ. ಹೀಗಾಗಿ ಬಿಜೆಪಿಯು ಜನರನ್ನು ಪಕ್ಷದತ್ತ ಸೆಳೆಯುವ ನಿಟ್ಟಿನಲ್ಲಿ ಬಹಿರಂಗವಾದ ಉತ್ಸವವೊಂದನ್ನು ನಡೆಸಲು ಬಿಜೆಪಿ ಪ್ಲ್ಯಾನ್ ಮಾಡಿದೆ.

ಸಿದ್ದರಾಮೋತ್ಸವಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಠಕ್ಕರ್ ಕೊಡಲು ಬಿಜೆಪಿ ಮೆಗಾ ಪ್ಲಾನ್ ಸಿದ್ಧವಾಗ್ತಿದೆ. ದಾವಣಗೆರೆಯಿಂದಲೇ ಕಾಂಗ್ರೆಸ್ ಗೆ ಠಕ್ಕರ್ ಕೊಡೋ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ದಾವಣಗೆರೆಯಲ್ಲೆ ಬಿಜೆಪಿಯಿಂದ ಅದ್ದೂರಿ ಕಾರ್ಯಕ್ರಮ ಮಾಡೋ ಬಗ್ಗೆ ನಡೆದಿದೆ ಚರ್ಚೆ ನಡೆದಿದ್ದು, ಸರ್ಕಾರದ ಸಾಧನೆ ಹೆಸರಿನಲ್ಲಿ ಪರೋಕ್ಷವಾಗಿ ಶಕ್ತಿ ಪ್ರದರ್ಶನ ಮಾಡಲು ತೀರ್ಮಾನಿಸಿದೆ. ದಾವಣಗೆರೆಯಲ್ಲಿ ಜನೋತ್ಸವ ಮಾಡಲು ಬಿಎಸ್ವೈ ಸೇರಿದಂತೆ ಹಲವು ಹಿರಿಯ ನಾಯಕರ ಸಲಹೆ ನೀಡಿದ್ದು, ಬಿಜೆಪಿಯ ಇದುವರೆಗಿನ ಸಾಧನೆ, ಘೋಷಿಸಿದ ಯೋಜನೆ ,ಜಾರಿಗೆ ತಂದ ನಿಯಮಗಳು ಸೇರಿದಂತೆ ಸಮಗ್ರವಾಗಿ ಬಿಜೆಪಿಯ ಸಾಧನೆಯನ್ನು ಜನರ ಮುಂದಿಡುವಂತೆ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಇತ್ತೀಚಿಗೆ ರದ್ದಾದ ಜನೋತ್ಸವ ಮಾದರಿಯ ಇನ್ನೊಂದು ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ನಡೆಸಿ ಬಿಜೆಪಿ ತನ್ನ ಶಕ್ತಿಪ್ರದರ್ಶನ ನಡೆಸಲು ಪ್ಲ್ಯಾನ್ ನಡೆಸಿದೆ‌
ಈ ರೀತಿಯ ಕಾರ್ಯಕ್ರಮಗಳು ಜನರಿಗೆ ಬಿಜೆಪಿಯ ವಿಚಾರಧಾರೆಗಳನ್ನು ತಲುಪಿಸಲು ನೆರವಾಗಲಿದೆ ಎಂಬದು ಬಿಜೆಪಿಗರ ಚಿಂತನೆ. ಒಟ್ಟಿನಲ್ಲಿ ರಾಜ್ಯದಲ್ಲಿ ಜನರು ಸಿದ್ಧರಾಮೋತ್ಸವ ಒಂದು ಮಾದರಿ ಸೃಷ್ಟಿಸಿದ್ದು, ಇದೇ ಮಾದರಿಯಲ್ಲಿ ಬಿಜೆಪಿಯು ತನ್ನ ಸಾಮರ್ಥ್ಯ ಪ್ರದರ್ಶನಕ್ಕೆ ಪ್ಲ್ಯಾನ್ ಮಾಡ್ತಿದ್ದು ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗಲಿದೆ ಕಾದು ನೋಡಬೇಕಿದೆ.

ಇದನ್ನೂ ಓದಿ : ಅನಂತ ಕುಮಾರ್ ಹೆಗಡೆ ಸಿಎಂ, ಯತ್ನಾಳ್ ಹೋಂ ಮಿನಿಸ್ಟರ್ : ಸದ್ದಿಲ್ಲದೇ ರೂಪುಗೊಳ್ತಿದೆ ಸ್ಟ್ರಾಂಗ್ ಜನಾಭಿಪ್ರಾಯ

ಇದನ್ನೂ ಓದಿ : DK Shivakumar hug Siddaramaiah : ಸಿದ್ದರಾಮಯ್ಯ ತಬ್ಬಿಕೊಳ್ಳಲು ಡಿಕೆ ಶಿವಕುಮಾರ್‌ಗೆ ರಾಹುಲ್ ಕೊಟ್ರಾ ಸಲಹೆ : ವೈರಲ್ ವಿಡಿಯೋದಲ್ಲಿ ಬಯಲಾಯ್ತು ಸತ್ಯ

BJP Counter to Siddaramothsava BJP ready for Janotsava in Davangere

Comments are closed.